ಬೆಂಗಳೂರು: ಹಾಸನದ ಮಾಜಿ ಎಂಪಿ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತರೂಡ ಕಾಂಗ್ರೆಸ್ ಸರ್ಕಾರದ ಸಿಎಂ, ಡಿಸಿಎಂ ನೇತೃತ್ವದಲ್ಲಿ ವಾಗ್ದಾಳಿಯನ್ನು ನಡೆಸಿದ್ದರು ಎಂದು ಕೆಪಿಸಿಯ ಪ್ರದಾನ ಕಾರ್ಯದರ್ಶಿ ಏ ಎಸ್ ಮನೋಹರ್ ತಿಳಿಸಿದರು.
ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರ ಭಾವಚಿತ್ರವನ್ನು ಕೆಪಿಸಿಸಿ ಕಚೇರಿ, ಕಾಂಗ್ರೆಸ್ ಭವನ, ಸಾರ್ವಜನಿಕ ಸ್ಥಳಗಳಲ್ಲಿ ಅವರಿಬ್ಬರ ಭಾವಚಿತ್ರವನ್ನು ವಿಕೃತಿಯಾಗಿ ಬಿಂಬಿಸಿ ದರ್ಪ ಮೆರೆದು, ಕೆಲ ಕೆಟ್ಟ ಪದಗಳಿಂದ ನಿಂದಿಸಿರುವ. ಈ ಸಂಬಂಧ ಕಾಂಗ್ರೆಸ್ ಕಲಿಗಳು ಸೆಟೆದು ನಿಂತು ಫ್ರೀಡಂಪಾರ್ಕಿನಲ್ಲಿ ಕಾಂಗ್ರೆಸ್ ಮುಖಂಡರು, ನಾಯಕರು, ಧರಣಿ ನಡೆಸಿದರು.
ತದನಂತರ ಪೊಲೀಸ್ ಆಯುಕ್ತರ ಕಚೇರಿ ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಗೆ ತೆರಳಿ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಪಮಾನ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮವಾಗಿ ಬಂಧಿಸಬೇಕೆಂದು ಮನವಿ ಪತ್ರವನ್ನು ನೀಡುವ ಮೂಲಕ ಆಗ್ರಹಿಸಿದರು.
ಪ್ರಜ್ವಲ್ ರೇವಣ್ಣ ಮಾಡಿರುವ ಕೃತ್ಯದ ಬಗ್ಗೆ ಯಾರು ಕ್ಷಮಿಸುವುದಿಲ್ಲ, ಈತನ ಕೃತ್ಯಕ್ಕೆ ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳು ಬೆಂಬಲ ನೀಡುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿವೆ. ಅದರ ಜೊತೆಗೆ ಇಷ್ಟೆಲ್ಲಾ ಇದ್ದರೂ ಸಹಾ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿ ಇದ್ದಬದ್ದ ಆಗೌರವವನ್ನು ಹೊತ್ತುಕೊಂಡಿದ್ದಾರೆ. ಧರಣಿಯಲ್ಲಿ ಸಾಕಷ್ಟು ಜನ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು, ಉಪಸ್ಥಿತರಿದ್ದರು.