ಬೆಂಗಳೂರು: ಕಾದಂಬರಿ ಕಲಾಕ್ಷೇತ್ರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮೇ 12 ರಂದು ಬೆಂಗಳೂರಿನ ಕಾದಂಬರಿ 100ನೇ ದಿನದ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ನಿರ್ದೇಶಕಿ ಸಿಂಧು.ಪಿ.ನಾಯರ್ ತಿಳಿಸಿದರು.
ಬೆಂಗಳೂರಿನಲ್ಲಿಂದು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡ ಅವರು, ಶ್ರೀ ಲಲಿತ ಕಲಾ ನಿಕೇತನ, ನಿರಂತರ ನಾಟ್ಯ ಶಾಲೆ, ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್, ವೈಷ್ಣವಿ ನಾಟ್ಯಶಾಲಾ, ನೃತ್ಯಾಂತರ, ಶಿವಪ್ರಿಯಾ ನಾಟ್ಯ ಶಾಲೆ, ಲಾಸ್ಯವರ್ಧನ ಟ್ರಸ್ಟ್. ಶ್ರೀ ನೃತ್ಯ ಲಕ್ಷಣ ಮತ್ತು ಕಾದಂಬರಿ ಕಲಾಕ್ಷೇತ್ರದಿಂದ 110 ಕ್ಕೂ ಹೆಚ್ಚು ಕಲಾವಿದರು ತಮ್ಮ ಅಮೋಘ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ, ಕಲಾ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಗುವುದು. ಕೀರ್ತಿ ರಾಮೋಪಾಲ್ ಅವರಿಗೆ ಪದ್ಮನಿ ರಾಮಚಂದ್ರನ್ ಪ್ರಶಸ್ತಿ, ಸತ್ಯನಾರಾಯಣ ರಾಜು, ಡಾ.ಸುಪರ್ಣಾ ವೆಂಕಟೇಶ್, ಡಾ.ಮಾಲಿನಿ ರವಿಶಂಕರ್, ಡಾ.ಸಂಜಯ್ ಶಾಂತಾರಾಮ್ ಅವರುಗಳಿಗೆ ಕಾದಂಬರಿ ಕಲಾ ಚಕ್ರವರ್ತಿ ಬಿರುದು, ಮಧುಲಿತಾ ಮೋಹಪಾತ್ರ, ನಾಟ್ಯಾಚಾರ್ಯ ಮಿಥುನ್ ಶ್ಯಾಮ್, ವಿದುಷಿ ರೇಖಾ ಜಗದೀಶ್, ಸೌಮ್ಯ ಮತ್ತು ಸೋಮಶೇಖರ್ ಚೂಡಾನಾಥ್, ಸಿ.ಆರ್.ಲಕ್ಷ್ಮೀ ಕಾರ್ತಿಕ್ ಅವರುಗಳಿಗೆ ಕಾದಂಬರಿ ಕಲಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎಂ.ಎನ್.ರೆಡ್ಡಿ. ಅವರಿಗೆ ಕಲಾ ಪೋಷಕ ಪ್ರಶಸ್ತಿ, ಕಿರಣ್ ರಾಜ್ ಅವರಿಗೆ ರೂಪಾಲಂಕೃತ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಟ್ರಸ್ಟ್ ಅಧ್ಯಕ್ಷ ಪರಮೇಶ್ವರನ್ ನಾಯರ್ ಮತ್ತು ನಿರ್ದೇಶಕಿ ಸಿಂಧು.ಪಿ.ನಾಯರ್, ನಗರದ ಕಾಚರಕನಹಳ್ಳಿಯಲ್ಲಿರುವ ದಕ್ಷಿಣ ಅಯೋಧ್ಯೆ ಕೋದಂಡರಾಮ ಸ್ವಾಮಿ ದೇವಾಲಯದ ಕಾದಂಬರಿ ಕಲಾಕ್ಷೇತ್ರದಲ್ಲಿ ಆಯೋಜನೆಯಾಗಿರುವ ಈ ಉತ್ಸವದಲ್ಲಿ ಸಿಂಗಾರಮಣಿ ಬಿರುದಾಂಕಿತರಾದ ಗುರು ರತ್ನ ಸುಪ್ರಿಯಾ ಶ್ರೀಧರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಲಲಿತ ಕಲಾ ನಿಕೇತನ, ನಿರಂತರ ನಾಟ್ಯ ಶಾಲೆ, ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್, ವೈಷ್ಣವಿ ನಾಟ್ಯಶಾಲಾ, ನೃತ್ಯಾಂತರ, ಶಿವಪ್ರಿಯಾ ನಾಟ್ಯ ಶಾಲೆ, ಲಾಸ್ಯವರ್ಧನ ಟ್ರಸ್ಟ್. ಶ್ರೀ ನೃತ್ಯ ಲಕ್ಷಣ ಮತ್ತು ಕಾದಂಬರಿ ಕಲಾಕ್ಷೇತ್ರದಿಂದ 110 ಕ್ಕೂ ಹೆಚ್ಚು ಕಲಾವಿದರು ತಮ್ಮ ಅಮೋಘ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಇನ್ನು ಟ್ರಸ್ಟ್ ನ ಅಧ್ಯಕ್ಷ ಪರಮೇಶ್ವರನ್ ನಾಯರ್, ಮಾತನಾಡಿ, ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭರತನಾಟ್ಯದ ಮೇರುಪರ್ವ. ಗುರು ಮಿ.ರತ್ನ ಸುಪ್ರಿಯಾ ಶ್ರೀಧರನ್ ಭವಹಿಸಲಿದ್ದಾರೆ. ಇನ್ನು ಪದ್ಮಿನಿ ರಾಮಚಂದ್ರನ್ ಜ್ಞಾಪಕರ್ಥ ಕಾದಂಬರಿ ಕಲ ಚಕ್ರವರ್ತಿ ಬಿರುದನ್ನು ಸತ್ಯನಾರಾಯಣ,ಸುಪರ್ನ್ ವೆಂಕಟೇಶ್, ಡಾ.ಸಂಜಯ್ ಶಾಂತಾರಾಮ್, ಡಾ.ಮಾಲಿನಿ ರವಿಶಂಕರ್ ಗೆ ನೀಡಲಾಗುವುದು. ಕಾದಂಬರಿ ಕಲ ಸಾಧಕಿ,ಸಾಧಕ,ಪ್ರಶಸ್ತಿಯನ್ನು ಮಧುಲಿತ ಮೊಹಪಾತ್ರ್,ರೇಖಾ ಜಗದೀಶ್, ಸೌಮ್ಯ, ಸೋಮಶೇಖರ್, ಚುಧನಾಥ್, ಲಕ್ಷ್ಮಿ ಕಾರ್ತಿಕ್ ಗೆ ನೀಡಲಾಗುವುದು. ಎಂದು ತಿಳಿಸಿದರು.
ಕಾರ್ಯಕ್ರಮವು ಬೆಂಗಳೂರಿನ ಕಾಚರಕನಹಳ್ಳಿಯ ದಕ್ಷಿಣ ಅಯೋಧ್ಯೆ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ಕಾದಂಬರಿ ಕಲಾಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿದೆ, ಸಂಜೆ 3 ಗಂಟೆಯಿಂದ ರಾತ್ರಿ 9ರ ತನಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.