ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಒಂದು ದಶಕದ ಅವಧಿಯಲ್ಲಿ ಹಿಡಿ ರಾಜ್ಯ ಸೇರಿದಂತೆ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಪರ್ವವನ್ನು ಸೃಷ್ಟಿ ಮಾಡಿದ್ದಾರೆ. ಅದರ ಜೊತೆಗೆ ಪರಿಸರ ಸ್ನೇಹಿಯಾದ ವಿದ್ಯುತ್ ಚಾಲಿತ ವಾಹನಗಳನ್ನು ಬಿಡುವ ಮೂಲಕ ದೇಶದ ಅಭಿವೃದ್ಧಿಯನ್ನು ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಬಸವನಗುಡಿಯ ಶಾಸಕ ಎಲ್ ರವಿಸುಬ್ರಹ್ಮಣ್ಯ ತಿಳಿಸಿದರು.
ಬಸವನಗುಡಿ ವಿಧಾನಸಭಾ ಕ್ಷೇತ್ರದ ಅಪ್ಪಾಜಿ ಕ್ಯಾಂಟೀನ್ ಮುಂಭಾಗದಲ್ಲಿ ವಿದ್ಯುತ್ ಚಾಲಿತ ಅಂಪಿಯರು ನೆಕ್ಸಸ್ ದ್ವಿಚಕ್ರ ನೂತನ ವಾಹನ ಉದ್ಘಾಟನೆ ಮಾಡಿ ಮಾತನಾಡಿದವರು, ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಜನಸಾಮಾನ್ಯರು ಕೊಂಡುಕೊಳ್ಳುವ ಹಾಗೆ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಆಗದಂತೆ ಬಳಸಬಹುದಾಗಿದೆ. ಇದರಿಂದ ಪರಿಸರಕ್ಕೆ ತೊಂದರೆ ಆಗುವುದಿಲ್ಲ ಅದೇ ರೀತಿ ಗ್ರಾಹಕರಿಗೂ ಸಹ ಹೊರೆಯಾಗುವುದಿಲ್ಲ ಎಂದು ತಿಳಿಸಿದರು. ಪ್ರಸ್ತುತ ಎಲ್ಲೆಡೆ ಜನ ಎಲೆಕ್ಟ್ರಿಕ್ ವಾಹನಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದನ್ನು ನೋಡಬಹುದು, ಅದರ ಕೊಡುಗೆ ಬಿಜೆಪಿಯ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿಯವರ ಕೊಡುಗೆ ಎಂದು ಹೇಳಲು ಬಯಸುತ್ತೇನೆ ಎಂದರು. ಅವರ ಒಂದು ದಶಕದ ಆಳ್ವಿಕೆಯ ಫಲವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿರುವುದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಇನ್ನು ಹೊಸದಾಗಿ ಬಿಡುಗಡೆಯಾಗಿರುವ ಅಂಪಿಯರ್ ನೆಕ್ಸಸ್ ದ್ವಿಚಕ್ರ ವಾಹನವು ಗ್ರೀವ್ಸ್ ಕಾಟನ್ ಈ ಮೋಬೇಲಿಟಿ ಅಂಗವಾದ ಗ್ರೇವಿ ಲಿಮಿಟೆಡ್ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿದ್ದು, ಎಲೆಕ್ಟ್ರಿಕ್ ವಾಹನದಲ್ಲಿಯೇ ಹೆಚ್ಚು ಫೀಚರ್ ಇರುವ ವಾಹನ ಇದಾಗಿದ್ದು ಪರಿಸರಕ್ಕೆ ಹೊಂದಿಕೊಳ್ಳುವಂತಹ ಹಾಗೂ ಗ್ರಾಹಕರಿಗೆ ಕೈಗಟಕುವ ದರದಲ್ಲಿ ಸಿಗುವ ವಾಹನವಾಗಿದೆ.
ಆಂಪಿಯರ್ ನೆಕ್ಸಸ್ ವಾಹನದ ವಿಶೇಷತೆಗಳು:
ಹಂಪಿಯರ್ ನೆಕ್ಸಸ್ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಮಾರುಕಟ್ಟೆಗೆ ಲಭವಿದೆ ಜನಸರ ಹಾಕುವ ಇಂಡಿಯನ್ ರೆಡ್ ಮತ್ತು ಸ್ಟೀಲ್ ಗ್ರೆ ಈ ವೈವಿಧ್ಯಮ ಬಣ್ಣದ ಟ್ಯಾಲೆಂಟ್ ಸಮಾರರ ಆದ್ಯತೆಗಳಿಗೆ ಸರಿಹೊಂದುವಂತಹ ಆಕರ್ಷಕವಾಗಿ ಸ್ಪೆಕ್ಟ್ರಮ ನಲ್ಲಿ ಬರುತ್ತದೆ. ನೂತನವಾಗಿ ಉದ್ಘಾಟನೆಯಾದ ವಾಹನದ ಆರಂಭಿಕ ಬೆಲೆ 1, 09,900ಗಳಲ್ಲಿ ದೊರೆಯುತ್ತದೆ. ಈ ವಾರದ ಭಾರತದಲ್ಲಿ ತಯಾರಿದ್ದು ಅನಿತಾ ಪ್ರಥಮ ಆವಿಷ್ಕಾರಗಳು ಮತ್ತು ವರ್ಗ ಪ್ರಮುಖ ವಿಶೇಷತೆಗಳನ್ನು ಈ ವಾಹನ ಒಳಗೊಂಡಿದೆ.
ಇನ್ನೂ ವಾಹನಕ್ಕೆ ಪ್ರಮುಖವಾಗಿ ಎರಡು ಭಾಗದಲ್ಲೂ ಸಸ್ಪೆನ್ಷನ್ ಹೊಂದಿದ್ದು ಹೈ ಬ್ರಿಡ್ಜು ಸ್ಪ್ರಿಂಗ್ ಇದೆ. ಕೇವಲ ಮೂರು ಗಂಟೆ 22 ನಿಮಿಷಗಳ ಅತಿ ವೇಗದ ಚಾರ್ಜಿಂಗ್ ಬ್ಯಾಟರಿ ಹೊಂದಿದ್ದು, ಈ ವಾಹನದ ಕ್ರಮಿಸುವಿಕೆಯ ದೂರ 100 ಕಿಲೋಮೀಟರ್ ದಾಗಿದೆ.
ಇನ್ನು ಡೈಮಂಡ್ ಕಟ್ಟಿ ಹೆಡ್ ಲ್ಯಾಂಪ್ ಗಳು ಮತ್ತು ಟೈಯರ್ ಲ್ಯಾಂಪ್ ಗಳು ಪ್ರಕಾಶಮಾನವಾಗಿ ಬೆಳಗುತ್ತದೆ. ಐದು ರೀತಿಯ ರೈಡಿಂಗ್ ಮೂಡ್ಗಳೊಂದಿಗೆ ಒಂದು ಗಂಟೆಗೆ 93 ಕಿಲೋ ಮೀಟರ್ ಗರಿಷ್ಠ ವೇಗ ಮತ್ತು ಪ್ರಾಮಾಣಿಕೃತ ಶ್ರೇಣಿ 136 ಕಿಲೋಮೀಟರ್ ಇದಾಗಿದೆ. ಇನ್ನೂ ಬ್ಯಾಟರಿಯ ವಾಯುದೇನು ಎರಡು ಮತ್ತು ಮೂರು ಒಟ್ಟು ಐದು ವರ್ಷಗಳ ವಾಯಿದೆ ಇದ್ದು, ಬೇರೆ ಕಂಪನಿಗಳಿಗಿಂತ ವಿಶೇಷವಾಗಿ ಬ್ಯಾಟರಿ ತಯಾರಿಸಲಾಗಿದೆ. ಹಗುರವಾದ ಅಲ್ಯೂಮಿನಿಯಂ ಗ್ರಾಬ್ ಹ್ಯಾಂಡಲ್ ಹೊಂದಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಾಹನ ತಯಾರಿಸಲಾಗಿದೆ.
ಇನ್ನು ಈ ಹೊಸದಾಗಿ ಬಿಡುಗಡೆಯಾಗಿರುವ ಹಣವು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ವಿಶೇಷ ಯಾತ್ರೆಯ ಸಮಯದಲ್ಲಿ 4 ಐಕಾನಿಕ್ ದಾಖಲೆಗಳನ್ನು ಸಾಧಿಸಿದೆ. ವಾಹನದ ಬಾಡಿಯೂ ಹಲವು ವಿಶೇಷತೆಗಳಿಂದ ಕೂಡಿದೆ. ಅಲ್ಲದೆ ಜಿಪಿಎಸ್, ಮೊಬೈಲ್ ಚಾರ್ಜರ್, ಟ್ರ್ಯಾಕ್ ಸಿಸ್ಟಮ್ ಅಳವಡಿಸಲಾಗಿದೆ. ಕೇವಲ 80 ಕೆಜಿ ತೂಕ ಹೊಂದಿರುವ ಈ ವಾಹನವು ಸಾಮಾನ್ಯ ಜನರಿಗೂ ಬಳಸಬಹುದಾದಂತಹ ಅತಿ ಉತ್ಕೃಷ್ಟವಾದಂತಹ ಹಾಗೂ ಪರಿಸರ ಸ್ನೇಹಿಯಾದ ವಾಹನವಾಗಿದೆ.
ಇನ್ನು ಅಂಪಿಯರ್ ನೆಸೆಸ್ ವಾಹನ ಬಿಡುಗಡೆ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರು, ಸಿಬ್ಬಂದಿ ವರ್ಗದವರು ಇದೇ ವೇಳೆ ಉಪಸ್ಥಿತರಿದ್ದರು.