ಬೆಂಗಳೂರು: ವೈದ್ಯರಿಗೆ ರೋಗಿಯ ರೋಗದ ನಿವಾರಣೆ ಮಾಡುವ ಗುಣವಿರಬೇಕು, ಸರದೇವ್ ಕಣ್ಣಿನ ಆಸ್ಪತ್ರೆ ಮಾಡುತ್ತದೆ ಎಂದು ನಾನು ನಂಬಿದ್ದೇನೆ. ಸ್ವಾಮಿ ವಿವೇಕಾನಂದರು ಸಹ ಜೀವನದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದರು ಅದೇ ರೀತಿ ಧರ್ಮ ಸಮನ್ವಯತೆಯ ಸಹ ಕಾಪಾಡುವ ನಿಟ್ಟಿನಲ್ಲಿ ಸಮುದಾಯಕ್ಕೆ ಸಾಕಷ್ಟು ಮಾರ್ಗದರ್ಶನ ನೀಡದಿದ್ದರೂ ಎಂದು ಪದ್ಮಶ್ರೀ ಪುರಸ್ಕೃತರು, ಬುಡಕಟ್ಟು ಚಟುವಟಿಕೆ ಉಳ್ಳವರು, ರಾಮಕೃಷ್ಣ ವಿದ್ಯಾ ಮಂದಿರದ ವಾರ್ಡನ್ ಆಗಿರುವ ತಡೆಯುತ್ತಾನಂದ ಮಹಾರಾಜ ಅವರು ತಿಳಿಸಿದರು.
ಜಯನಗರದ 3ನೇ ಬ್ಲಾಕ್ ನಲ್ಲಿ ಅಶೋಕ ಪಿಲ್ಲರ್ ರಸ್ತೆಯಲ್ಲಿ ನೂತನವಾಗಿ ಸರದೇವ್ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ ಮಾಡಿ ಮಾತನಾಡಿದವರು, ಸರಸ್ವತಿ ಮಂದಿರ ಟ್ರಸ್ಟ್ ಮೂಲಕ ಸರದೇವ್ ಕಣ್ಣಿನ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕರಾದ ಪಿಡಿ ಶೈಲೇಂದ್ರ ಅವರು ಸಾಕಷ್ಟು ಸಮಾಜಕ್ಕೆ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು ಅದೇ ರೀತಿ ಬಡವರು, ನಿರ್ಗತಕರಿಗೆ ಗುಣಮಟ್ಟದ ಹಾಗೂ ಆಧುನಿಕ ಚಿಕಿತ್ಸೆ ದೊರಕಿಸಿ ಕೊಡುವ ನಿಟನಲ್ಲಿ ಆಸ್ಪತ್ರೆ, ಫಸ್ಟ್ ಅನೇಕ ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ಆಶೀರ್ವಾದದೊಂದಿಗೆ ಅವರ ತಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಂಸ್ಥಾಪಕರು ಆಸ್ಪತ್ರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಅವರು ನೀಡಿದ ಕರೆಯೋಲೆಯ ಬಗ್ಗೆ ಧರ್ಮ ಜಾಗೃತಿಯ ಬಗ್ಗೆ ಯುವ ಪೀಳಿಗೆಯನ್ನು ಉದ್ದೇಶ ಇಟ್ಟುಕೊಂಡು ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸಗಳನ್ನು ಮಾಡಿಕೊಂಡು ಹೋಗಬೇಕಾಗಿದೆ ಎಂದರು.
ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಮಾತನಾಡಿ, ವೈದ್ಯರಿಗೆ ರೋಗಿಯ ರೋಗ ನಿವಾರಣೆ ಮಾಡುವ ಗುಣ ಇರಬೇಕು, ಹೀಗಾಗಿ ಸರದಿ ಕಣ್ಣಿನ ಆಸ್ಪತ್ರೆ ಇವೆಲ್ಲ ಕೆಲಸಗಳನ್ನು ಮಾಡಿಕೊಂಡು ಹೋಗುತಿದೆ ಎಂದರು. ಕೇವಲ ಆಸ್ಪತ್ರೆಯು ನಗರ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮಾಂತರ ಪ್ರದೇಶಕ್ಕೂ ಸೇವೆ ತಲುಪಬೇಕೆಂದರು. ಪಸುತ ಸಾಕಷ್ಟು ಕಣ್ಣಿನ ಆಸ್ಪತ್ರೆಗಳು ಇದು ಅದಕ್ಕೆ ವಿಭಿನ್ನವಾಗಿ ಸರದೇ ಕಣ್ಣಿನ ಆಸ್ಪತ್ರೆ ಇರಬೇಕಾಗಿದೆ ಹಣಕ್ಕೆ ಪ್ರಾಮುಖ್ಯತೆ ನೀಡದೆ ಗುಣಕ್ಕೆ ಪ್ರಾಮುಖ್ಯತೆ ನೀಡಬೇಕಾಗಿದೆ. ವೈದ್ಯ ನರಾಯಣ ಹರಿ ಎಂದು ಹೇಳುತ್ತಾರೆ ಅದಕ್ಕೆ ಪೂರಕವಾಗಿ ಆಸ್ಪತ್ರೆಯು ಕೆಲಸ ಮಾಡಬೇಕಾಗಿದೆ. ಇವೆಲ್ಲದರ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಇಟ್ಟುಕೊಂಡು ಆಸ್ಪತ್ರೆ, ಸುಗಮವಾಗಿ ಹಲವು ವರ್ಷಗಳ ಕಾಲ ಹೀಗೆ ನಿರಂತರವಾಗಿ ನಡೆದುಕೊಂಡು ಹೋಗಲಿ ಎಂದು ಆಶಿಸಿದರು.
ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತರು ಹಾಗೂ ಬುಡಕಟ್ಟು ಚಟುವಟಿಕೆ ಉಳ್ಳವರಾದ ಡಾ. ಸುದರ್ಶನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದ ಕಟ್ಟಕಡೆಯ ಜನರಿಗೂ ಸಾರಾದೆ ಕಣ್ಣಿನ ಆಸ್ಪತ್ರೆಯ ಸೌಲಭ್ಯ ಸೇವೆ ಸಿಗಲಿ ಅದರ ಜೊತೆಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಲಿ ಎಂದರು ವಿವೇಕಾನಂದರನ್ನು ವಿಚಾರಧಾರೆಗಳು ಅಬ್ದುಲ್ ಕಲಾಂ ಅವರ ಜ್ಞಾನದ ಪ್ರರಿಯನ್ನು ಇದೇ ವೇಳೆ ಮಾತಿನ ಬೇಡಿ ತಿಳಿಸಿದರು ಅವರ ಜೀವನದಲ್ಲಿ ವಿವೇಕಾನಂದರು ಹಾಗೂ ಅಬ್ದುಲ್ ಕಲಾಮರ ಪ್ರೇರೇಪಣೆಯ ವಿಚಾರಧಾರೆಗಳನ್ನು ಜನರಿಗೆ ತಿಳಿಸಿದರು. ನಾನು ಒಬ್ಬ ವೈದ್ಯನಾಗಿ ನಮ್ಮಲ್ಲಿ ಸಹ ವೈದ್ಯಕೀಯ ಸಂಸ್ಥೆಗಳಿದ್ದು ನಾವು ಯಾವುದೇ ರೀತಿಯ ಹಣಕ್ಕೆ ಗ್ರಾಮವಾಗಿ ಒಳಗಾದರೆ ಬುಡಕಟ್ಟು ಹಾಗೂ ಸಮಾಜದ ಕಟ್ಟ ಕಡೆಯ ಜನರಿಗೆ ಚಿಕಿತ್ಸೆ ದೊರೆಯುವ ಸಲುವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು ಅದರಲ್ಲಿ ಆತ್ಮ ತೃಪ್ತಿ ಕಾಣಬಹುದು ಎಂದರು. ಸಮುದಾಯದ ಆರೋಗ್ಯದಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಳ್ಳುವುದರಿಂದ ಅಲ್ಲಿನ ಸಮಸ್ಯೆಗಳು ಹೆಚ್ಚಿನದಾಗಿ ಕಾಣ ಬರುತ್ತದೆ ಎಂದು ತಿಳಿಸಿದರು.
ವೈದ್ಯಕೀಯ ಸೇವೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ಕಳಕಳಿ ಹೊಂದಿರಬೇಕು, ಅಲ್ಲದೆ ಸಮುದಾಯ ಗುರಿಯಾಗಿಸಿಕೊಂಡು NGO ಮೂಲಕ ಗುಣಮಟ್ಟದ ಸೇವೆ ಜನತೆಗೆ ಸಿಗಬೇಕು ಎಂದು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣದ ನಿರ್ದೇಶಕರಾದ ಡಾ. ಸುಜಾತಾ ರಾಥೋಡ್ ಹೇಳಿದರು. ಧರ್ಮದ ಮೂಲಕವೇ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಬೇಕು ಎಲ್ಲರೂ ಸಹ ದೇಹದ ಅಂಗಾಂಗಗಳು ದಾನ ಮಾಡಬೇಕು ಅದರಲ್ಲಿ ಮುಖ್ಯವಾಗಿ ಕಣ್ಣು ದಾನ ಮಾಡುವುದರಿಂದ ಮತ್ತೊಬ್ಬರಿಗೆ ಸಹಾಯವಾಗುತ್ತದೆ , ಅವೆಲ್ಲದಕ್ಕು ನಾವು ಕೈಜೋಡಿಸೋಣ ಎಂದು ಜನತೆಗೆ ತಿಳಿಸಿದರು.
ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜಿನ ಸಮುದಾಯ ಔಷಧೀಯ ಮುಖ್ಯಸ್ಥರು ಹಾಗೂ ಐಎಪಿಎಸ್ ಎನ್ ಅಧ್ಯಕ್ಷರಾದ ಡಾಕ್ಟರ್ ಅಣ್ಣಾರಾವ್ ಜಿಕೆ ಅವರು ಮಾತನಾಡಿ, ಕೃಷ್ಣನ ಸ್ವರೂಪದಲ್ಲಿ ಕಣ್ಣಿನ ಆಸ್ಪತ್ರೆ ಪ್ರಮುಖವಾಗಿ ನಡೆಯುತ್ತಿದ್ದು ಸಮಾಜದ ಕೆಳವರ್ಗದವರಿಗೆ ಸವಲತ್ತು ಸಿಗಬೇಕು ಬಡವರಿಗೆ ಗುಣಮಟ್ಟದ ಚಿಕಿತ್ಸೆ ಕೊಡಬೇಕು, ಈ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸೋಣ ಸಾಕಷ್ಟು ಆಸ್ಪತ್ರೆಗಳು ಸಮಾಜದ ಏಳಿಗೆ ದುಡಿಯುತ್ತಿದ್ದಾರೆ ಅದರಲ್ಲಿ ಸರದೇವ್ ಕಣ್ಣಿನ ಆಸ್ಪತ್ರೆಯು ಒಂದಾಗಿದೆ. ನಾನು ವೈದ್ಯನಾಗಿ ಕಳೆದ 45 ವರ್ಷಗಳಿಂದ ಸಮಾಜಮುಖಿ ಕೆಲಸಗಳ ಮಾಡಿಕೊಂಡು ಬರುತ್ತಿದ್ದೇನೆ ಇದರಲ್ಲಿ ನನಗೆ 45 ವರ್ಷಗಳ ಅನುಭವವಿದ್ದು ಸಮಾಜದಲ್ಲಿ ಮಾಡುತ್ತಿದ್ದೇನೆ ಎಂದರು ಅದನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಕೊನೆಯದಾಗಿ ಸರದೇವ್ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕರಾದ ಪಿಡಿ ಶೈಲೇಂದ್ರ ಅವರು ಮಾತನಾಡಿ, ನಮ್ಮದ ತಂದೆಯು ಸಹ ಸಾಕಷ್ಟು ಸಮಾಜಗಳಿಗೆ ಸೇವೆ ಮೂಲಕ ಮಾಡಿಕೊಂಡು ಬಂದಿದ್ದಾರೆ ಅವರ ಹಾದಿಯಲ್ಲಿ ನಾನು ಸಹ ಮುಂದುವರಿಸಿಕೊಳ್ಳಬಾರದು ಅವರ ಕನಸಾಗಿದ್ದ ಜಯನಗರದಲ್ಲಿ ಒಂದು ಬೃಹತ್ ಕಣ್ಣಿನ ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಕನಸನ್ನು ಇಟ್ಟುಕೊಂಡಿದ್ದರು ಅದನ್ನು ನಾನು ಮಗನಾಗಿ ನೆರವೇರಿಸಿದ್ದೇನೆ ಎಂದು ಅವರ ತಂದೆಯ ವಿಚಾರಧಾರೆಗಳನ್ನು ನೆನೆಸಿಕೊಂಡರು. ಸಾರದೇವ್ ಕಣ್ಣಿನ ಆಸ್ಪತ್ರೆಯಿಂದ ಹಾಗೂ ಸರಸ್ವತಿ ಟ್ರಸ್ಟ್ ವತಿಯಿಂದ ಸಾಕಷ್ಟು ಸಮುದಾಯ ಆರೋಗ್ಯ ಸೇವೆಯನ್ನು ನೀಡುತ್ತ ಬಂದಿದ್ದೇವೆ ಅದನ್ನು ಮುಂದಿನ ದಿನಗಳಲ್ಲಿ ಸಹ ನಿರಂತರವಾಗಿ ಮುಂದುವರಿಸಿಡು ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರದೇವ್ ಕಣ್ಣಿನ ಆಸ್ಪತ್ರೆಯ ಸೇವೆಗಳ ವಿವರ
ಸಮಗ್ರ ಕಣ್ಣಿನ ತಪಾಸಣೆ , ಫಾಸ್ಟ್ ಟ್ರ್ಯಾಕ್ ಸಮಾಲೋಚನೆಗಳು , ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಇತ್ತೀಚಿನ ಮಡಿಸಬಹುದಾದ ಲೆನ್ಸ್ ಗಳನ್ನು ಬಳಸಿಕೊಂಡು ಅಳವಡಿಕೆ, ವಕ್ರೀಕಾರಕ ದೋಷಗಳ ಸರಿಪಡಿಸುವಿಕೆ, ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್, ಲೇಸರ್ ಚಿಕಿತ್ಸೆ , ಗಣಕ್ಕೆ ಕೃತ ದೃಶ್ಯ ಕ್ಷೇತ್ರ ಪರೀಕ್ಷೆ, ಓಸಿಟಿ ಸ್ಕ್ಯಾನ್, ರೋಗ ನಿಲಯ ಪ್ರಯೋಗಾಲಯ, ಆಪ್ಟಿಕಲ್ ಫಾರ್ಮರ್ಸಿ, ವೈದ್ಯಕೀಯ ವಿಧಿ ಮತ್ತು ನಗುರಹಿತ ಸೌಲಭ್ಯ.
ಸರದೇವ ಕಣ್ಣಿನ ಆಸ್ಪತ್ರೆಯ ವಿಶೇಷತೆಗಳು
ಕಣ್ಣಿನ ಪೊರೆ, ಕಾರ್ನಿಯಾ, ಗ್ಲುಕೋಮ, ಪಿಡಿಯಾಟ್ರಿಕ್ ನೇತ್ರ ವಿಜ್ಞಾನ ಮತ್ತು ಸ್ಕ್ವಿಂಟ್, ಅಕ್ಯೂಲೋ ಪ್ಲಾಸ್ಟಿ, ರೆಟಿನಾ ಚಿಕಿತ್ಸೆ ಸೌಲಭ್ಯಗಳಿಗೆ.
ಸಾರದೇವ ಕಣ್ಣಿನ ಆಸ್ಪತ್ರೆಯ ಉದ್ಘಾಟನೆಯ ಕೊಡುಗೆಯಾಗಿ ಹಿರಿಯ ನಾಗರಿಕರಿಗೆ ಉಚಿತ ಸಮಾಲೋಚನೆ ಮತ್ತು ವೈದ್ಯರ ಸಲಹೆ ಜೊತೆಗೆ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುವುದು ಅದು ಸಹ ಮೇ 15 ರಿಂದ ಜೂನ್ 15 ರವರೆಗೆ. ಇನ್ನು ಆಸ್ಪತ್ರೆಯ ಸಂಪರ್ಕಿಸಬೇಕಾದಂತಹ ದೂರವಾಣಿ ಸಂಖ್ಯೆ 080 22 2069/22 20 2079, 9071 000847 ಗೆ ಸಂಪರ್ಕಿಸಬಹುದಾಗಿದೆ.