ಬೆಂಗಳೂರು: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಬೆಂ.ಮ.ಸಾ.ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಉಪಕ್ರಮದ ಬಗ್ಗೆ ತಿಳಿದುಕೊಂಡರು.
ಅಧಿಕಾರಿಗಳು ಭೇಟಿಯ ಸಂದರ್ಭದಲ್ಲಿ ಬೆಂ.ಮ.ಸಾ.ಸಂಸ್ಥೆಯಲ್ಲಿ ಅಳವಡಿಸಿಕೊಂಡಿರುವ ಮಾದರಿ ಉಪಕ್ರಮಗಳು, ಸಂಸ್ಥೆಯ ಇತಿಹಾಸ, ಶಕ್ತಿ ಯೋಜನೆಯ ಅನುಷ್ಠಾನ, ಪ್ರಯಾಣಿಕರ ಪಾಸ್ ವ್ಯವಸ್ಥೆ, ಆರ್ಥಿಕ ಕಾರ್ಯಕ್ಷಮತೆ, ಸಂಚಾರ ಆದಾಯ, ಜಾಹೀರಾತು ಪ್ರೋಟೋಕಾಲ್, ಸಂಸ್ಥೆಯ ಬಸ್ ವೇಳಾಪಟ್ಟಿ, ಕಾರ್ಯಚರಣೆಗಳ ವೆಚ್ಚ, GCC ಮಾದರಿಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಹಸಿರು ತಂತ್ರಜ್ಞಾನದ ಕಾರ್ಯಚರಣೆ ಬಗ್ಗೆ ನಿರ್ದೇಶಕರು (ಮಾ.ತಂ) ಶಿಲ್ಪಾ.ಎಂ, ಭಾಆಸೇ., ರವರು ಪ್ರಾತ್ಯಕ್ಷತೆ ನೀಡಿ ತರಬೇತಿ ಅಧಿಕಾರಿಗಳೊಂದಿಗೆ ಸವಿವರವಾಗಿ ಚರ್ಚಿಸಿದರು. ತದನಂತರ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ಶಾಖೆಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆಯ ಅಧಿಕಾರಿಗಳಾದ ಪ್ರನ್ನಾತ ಐಶ್ವರ್ಯ, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಆನಂದ್, ಮುಖ್ಯ ಜನರಲ್ ಮ್ಯಾನೇಜರ್ (ಟೆಕ್), ಕೇಸರಿ ನಂದನ್ ಚೌಧರಿ, ಪ್ರಾದೇಶಿಕ ವ್ಯವಸ್ಥಾಪಕರು, ಗಾಜಿಯಾಬಾದ್, ಅನುರಾಗ್ ಯಾದವ್, ಸೇವಾ ನಿರ್ವಾಹಕರು, ಆಗ್ರಾ ನಿಗಮದ ಬೆಂ.ಮ.ಸಾ.ಸಂಸ್ಥೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಜಿ.ಟಿ.ಪ್ರಭಾಕರ ರೆಡ್ಡಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ಆಚರಣೆ), ಎ.ಎನ್.ಗಜೇಂದ್ರ ಕುಮಾರ್, ಮುಖ್ಯ ತಾಂತ್ರಿಕ ಅಭಿಯಂತರರು, ಎ.ಪ್ರಿಯಾಂಕ, ಗಣಕ ವ್ಯವಸ್ಥಾಪಕರು, ಪ್ರತಿಮಾ.ಎಸ್.ವಿ, ವಿಭಾಗೀಯ ಸಂಚಾರ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂ.ಮ.ಸಾ.ಸಂಸ್ಥೆಯು ಈವರೆವಿಗೂ ಹಲವು ಭಾ.ಆ.ಸೇ., ಕ.ಆ.ಸೇ. ತಂಡಗಳು ಮತ್ತು ಇತರೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅಧಿಕಾರಿಗಳಿಗೆ ತರಬೇತಿಯನ್ನು ಆಯೋಜಿಸಿದೆ.