ಬೆಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ರವರು ದೂರದೃಷ್ಟಿ ಚಿಂತನೆಯ ನಾಯಕ, ಅತಿ ಕಿರಿಯ ವಯಸ್ಸಿನ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಮಾಜಿ ಪ್ರಧಾಮಂತ್ರಿಗಳಾದ ದಿವಂಗತ ರಾಜೀವ್ ಗಾಂಧಿಯವರ ಪುಣ್ಯ ಸ್ಮರಣಾರ್ಥ ಅಂಗವಾಗಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಮಂಜುನಾಥ್ ಗೌಡ ರವರ ನೇತ್ರತ್ವದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.
ಮಾಜಿ ಪ್ರಧಾನಿ ರಾಜೀವ್ ಗಾಂಧಿರವರ ಬಾವಚಿತ್ರಕ್ಕೆ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಮತ್ತು ಕಾರ್ಯಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥ್ ಗೌಡರು ಪುಷ್ಪನಮನ ಸಲ್ಲಿಸಿ, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಮಾತನಾಡಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರವರು ದೂರದೃಷ್ಟಿ ಚಿಂತನೆಯ ನಾಯಕ, ಅತಿ ಕಿರಿಯ ವಯಸ್ಸಿನ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದರು.ರಾಜೀವ್ ಗಾಂಧಿಯರವರ ನನ್ನ ನಡುವೆ ನಿಕಟ ಬಾಂಧ್ಯವವಿತ್ತು , ನನ್ನ ಹೋರಾಟ, ಸಂಘಟನೆಯಲ್ಲಿ ಯಶ್ವಸಿಯಾಗಲು ಅವರು ಸ್ಪೂರ್ತಿಯಾಗಿದ್ದಾರೆ.
ಯುವ ಕಾಂಗ್ರೆಸ್ ರಾಜೀವ್ ಗಾಂಧಿರವರ ಪುಣ್ಯಸ್ಮರಣೆ ಸಂದರ್ಭದಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಉತ್ತಮ ಕೆಲಸ ಮಾಡುತ್ತಿದೆ.ಕಿಂಗ್ ಮೇಕರ್ ಆಗುವ ಭ್ರಮೆಯಲ್ಲಿ ಮಾಜಿ ಕುಮಾರಸ್ವಾಮಿರವರು ಇದ್ದಾರೆ. ಅಸೂಯೆ ಇದ್ದವರಿಗೆ ಮದ್ದು ಇಲ್ಲ ಎಂದು ಹೇಳಿದರು.
ಹೆಚ್.ಎಸ್.ಮಂಜುನಾಥ್ ಗೌಡರವರು ಮಾತನಾಡಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರವರ ಸರಳ, ಸಜ್ಜನ ರಾಜಕಾರಣಿ. 40ನೇ ವಯಸ್ಸಿನಲ್ಲಿ ಪ್ರಧಾನಿಯಾಗಿ ಉತ್ತಮ ಆಡಳಿತ ದೇಶಕ್ಕೆ ನೀಡಿದರು.ರಾಜೀವ್ ಗಾಂಧಿರವರು ಯುವ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದರು.ವಿಜ್ಞಾನ, ತಂತ್ರಜ್ಞಾನ ಕೈಗಾರಿಕೆ ಮತ್ತು ಕೃಷಿಯಲ್ಲಿ ಆಧುನಿಕತೆ ಸ್ಪರ್ಶ ನೀಡಿ ದೇಶದ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದರು.
ರಾಜೀವ್ ಗಾಂಧಿರವರು ಯುವ ಸಮೂದಾಯಕ್ಕೆ ಆಶಾಕಿರಣರಾಗಿದ್ದರು.ಪೆರಂಬದೂರುನಲ್ಲಿ ಬಹಿರಂಗ ಪ್ರಚಾರದಲ್ಲಿ ಉಗ್ರರ ದಾಳಿಯಿಂದ ಹತ್ಯೆಯಾದರು.ದೇಶದ ಏಕತೆ,ಸಮಗ್ರತೆಗೆ ಶ್ರೀಮತಿ ಇಂದಿರಾ ಗಾಂಧಿ ರವರು ರಾಜೀವ್ ಗಾಂಧಿರವರು ತಮ್ಮ ಪ್ರಾಣವನ್ನೆ ಬಲಿದಾನ ಮಾಡಿದರು.ಇಂದು ದೇಶದಲ್ಲಿ ಉಗ್ರವಾದ , ಕೋಮುವಾದ ಆಶಾಂತಿ ತಲೆದೂರಿದೆ.ದೇಶದಲ್ಲಿ ಮತ್ತೋಮ್ಮೆ ಶಾಂತಿ ನೆಲಸಬೇಕು ಎಂದರೆ ಯುವ ಸಮುದಾಯ ಈ ನಿಟ್ಟಿನಲ್ಲಿ ಸಂಘಟಿತರಾಗಬೇಕು. ದಿವಂಗತ ರಾಜೀವ್ ಗಾಂಧಿರವರ ಆದರ್ಶ, ಮಾರ್ಗದರ್ಶನದಲ್ಲಿ ಶಾಂತಿ, ಸೌಹರ್ದತೆಯ ಮತ್ತು ಬಲಿಷ್ಠ ಭಾರತ ಕಟ್ಟೋಣ ಎಂದು ಹೇಳಿದರು.
500ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು, ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ರಕ್ತದಾನ ಶಿಬಿರಕ್ಕೆ ರೆಡ್ ಕ್ರಾಸ್ ಸಂಸ್ಥೆಯವರು ಸಹಕಾರ ನೀಡಿದರು