ಬೆಂಗಳೂರು: 2024ರ ಜೂನ್ ತಿಂಗಳಲ್ಲಿ ನಡೆಯುವ ಕರ್ನಾಟಕ ವಿಧಾನ ಪರಿಷತ್ತಿನ ಸ್ಥಾನಕ್ಕೆ ಕ್ರೈಸ್ತ ಧರ್ಮಕ್ಕೆ ಸೇರಿರುವ ಡೇವಿಡ್ ಸಿಮೆಯೋನ್ರವರಿಗೆ ಮೊದಲ ಆಧ್ಯತೆಯ ಮೇಲೆ ಆಯ್ಕೆ ಮಾಡಬೇಕು ಎಂದು ಕರ್ನಾಟಕ ಕ್ರೈಸ್ತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪೃಥ್ವಿಪೌಲ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡೇವಿಡ್ ಸಿಮೆಯೋನ್ರವರು ಕಳೆದ ಸುಮಾರು ವರ್ಷಗಳಿಂದ ಕ್ರೈಸ್ತ ಸಮುದಾಯದ ಜನಪರ ನಾಯಕರಾಗಿದ್ದು, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದಲ್ಲದೇ ಸಮಾಜದ ಎಲ್ಲಾ ಸಮುದಾಯದ ಏಳಿಗೆಗೆ ಸದಾ ದುಡಿಯುತ್ತಾ ಬಂದಿರುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ ಸಮುದಾಯಕ್ಕೆ ಅನೂಕೂಲವಾಗುವ ಹಿನ್ನೆಲೆ , ಹಾಗು ರಾಜಕೀಯ ಕ್ರಿಯಾಶೀಲ ವಾಗಿರುವ ಕಾರಣಕ್ಕೆ, ಈ ಭಾರಿಯ ಪರಿಷತ್ ಚುನಾವಣೆಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಿರೋಮಣಿ ಮಾಲೆಗಾಂವ್ ಮಾತನಾಡಿ ಡೆವಿಡ್ ಸಿಯೂಮನ್ ಅವರು ಕ್ರೈಸ್ತ ಸಮುದಾಯದ ಧೀಮಂತ ನಾಯಕರಾಗಿದ್ದು, ಕರ್ನಾಟಕದ ಕಟ್ಟ ಕಡೆಯ ಕ್ರೈಸ್ತ ಜನರಿಗೂ ಚಿರಪರಿಚಿತರಾಗಿದ್ದು, ಸಮುದಾಯಕ್ಕೆ ಯಾವುದೇ ತೊಂದರೆಯಾದಲ್ಲಿ ಮೊದಲಿಗರಾಗಿ ಸ್ಪಂಧಿಸುವ ವ್ಯಕ್ತಿಯಾಗಿರುತ್ತಾರೆ. ಸರ್ಕಾರದ ಅತ್ಯುನ್ನತ ಹುದ್ದೆಯಾದ ಮೇಲ್ಮನೆ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಅಲ್ಪಸಂಖ್ಯಾತರಲ್ಲಿ ಕ್ರೈಸ್ತರು ಸಹ ಸರ್ಕಾರದ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಪಡೆಯುವಲ್ಲಿ, ಜಾಗೃತಿ ಮೂಡಿಸುವಲ್ಲಿ ಮೊದಲಿಗರಾಗಿರುತ್ತಾರೆ. ಇಡೀ ರಾಜ್ಯಾಧ್ಯಂತ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ.
ಪ್ರಸ್ತುತ ಕಾಂಗ್ರೆಸ್ ಪಕ್ಷಕ್ಕೆ ಹಗಲಿರುಳು ದುಡಿದು ಕ್ರೈಸ್ತ ಸಮುದಾಯದ ನಾಯಕರುಗಳನ್ನು ಪಕ್ಷಕ್ಕೆ ಕರೆತಂದು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಮೊದಲಿಗರಾಗಿರುತ್ತಾರೆ.ಆದುದರಿಂದ ತಾವುಗಳು ದಯಮಾಡಿ ಸಮುದಾಯದ ಹಿತರಕ್ಷಣೆಗೋಸ್ಕರ ಜನಪರ ಕಾಳಜಿ ಉಳ್ಳವರಾದ ಡೇವಿಡ್ ಸಿಮೆಯೋನ್ ರವರಿಗೆ ಪ್ರಥಮ ಆಧ್ಯತೆಯ ಮೇರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಸ್ಥಾನವನ್ನು ಕಲ್ಪಿಸಿಕೊಟ್ಟು ರಾಜ್ಯದ ಕ್ರೈಸ್ತರ ಏಳಿಗೆಗೆ ಅನುಕೂಲ ಮಾಡಿಕೊಡುವಂತೆ ನಾವುಗಳು ಹೃದಯಪೂರ್ವಕವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷಕಾಗಿ ಹಲವು ವರ್ಷಗಳಿಂದ ದುಡಿದಿದ್ದಾರೆ. ಅವರ ಪಕ್ಷ ನಿಷ್ಟೆ, ಅವಿರತ ಕಾಯಕದ ಹಿನ್ನೆಲೆಯಲ್ಲಿ, ಗುರುತಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರೈಸ್ತ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿ ಮಾಡಬೇಕು ಮನವಿ ಮಾಡಿದರು. ಅವರಿಗೆ ರಾಜಕೀಯ ಅನುಭವ ವಿದ್ದು, ಸ.ಉದಾಯ ಎಲ್ಲಾ ರಂಗದಲ್ಲಿ ಹಿಂದುಳಿದಿರುವ ಕಾರಣ ಮುನ್ನೆಲೆಗೆ ತರಲು ಡೆವಿಡ್ ಸೂಕ್ತ ಅಭ್ಯರ್ಥಿ ಎಂಬುದನ್ನು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರೈಸ್ತ ಸಮುದಾಯದ ಅನೇಕ ಸಂಘನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.