ಬೆಂಗಳೂರು: ಚೆನ್ನೈ ಅಮೃತ ಶಿಕ್ಷಣ ಸಮೂಹ ಸಂಸ್ಥೆಗಳ ಸುದೀರ್ಘ 14 ವರ್ಷಗಳ ಹೋಟೆಲ್ ಮ್ಯಾನೇಜ್ಮೆಂಟ್ ಶಿಕ್ಷಣದಲ್ಲಿ ಗುರುತಿಸಿಕೊಂಡಿದ್ದು ಇದೀಗ ಎವಿಏಷನ್ ಹೊಸ ಕೋರ್ಸ್ ಆರಂಭ ಮಾಡುವ ಮೂಲಕ ತನ್ನ ಹೆಜ್ಜೆ ಗುರುತನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ ಎಂದು ಚೆನ್ನೈ ಅಮೃತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಆರ್ ಭೂಮಿನಾಥನ್ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಅತಿ ಹೆಚ್ಚು ಹೆಸರು ಗಳಿಸಿರುವ ಸಂಸ್ಥೆಗಳಲ್ಲಿ ಒಂದಾಗಿದ್ದು, ಸುಮಾರು 25 ಸಾವಿರ ಮಕ್ಕಳಿಗೆ ವಿವಿಧ ಉದ್ಯೋಗಳನ್ನು ನೀಡುವ ಮೂಲಕ ಹೆಗ್ಗಳಿಕೆ ಪಡೆದಿದೆ. ಇದೀಗ ಯೂನಿವರ್ಸಿಟಿ ಕಾಲೇಜ್ ಆಫ್ ಏವಿಯೇಷನ್ ಮಲೇಷ್ಯಾ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಲೇಜ್ ಸ್ಥಾಪಿಸುವ ಮೂಲಕ ವಾಯುಯಾನ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಬರೆಯಲು ಮುಂದಾಗಿದೆ.
ಯುನಿಕ್ಯಾಮ್ ಮತ್ತು ಬರ್ಮಿಗ್ಯಾಮ್ ಅಕಾಡಮಿ ಸಿಂಗಪುರದೊಂದಿಗೆ ಪೋರ್ಚಿಂಗ್ ಗ್ಲೋಬಲ್ ಟೈಸ್ ಇತ್ತೀಚೆಗೆ 2ಅಂತರರಾಷ್ಟ್ರೀಯ ಮಟ್ಟದಲ್ಲಿ MOU ಗೆ ಸಹಿಹಾಕಿದ್ದಾರೆ. ವಾಯುಯಾನ ಕಲೇಜಿನಲ್ಲಿ ಬಿಎಸ್ಸಿ, ಬಿಏ,ಡಿಪ್ಲೊಮೊ ಎವಿಯೇಷನ್, ಪ್ರವಾಸ ಮ್ಯಾನೇಜ್ಮೆಂಟ್ ಹೀಗೆ ಹತ್ತುಹಲವು ಕೋರ್ಸ್ ಗಳ ಆಫರ್ ಮಾಡಲಾಗಿದೆ ಎಂದರು. ಇದರ ಜೊತೆಗೆ ಹಲವು ಮೌಲ್ಯವರ್ಧಿತ ಕೋರ್ಸ್ ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಎವಿಟೇಷನ್ ಗೆ ಸಂಬಂಧಿಸಿ ದಂತೆ 2 ವರ್ಷಗಳ ಕೋರ್ಸ್ ಇದಾಗಿದೆ, ಯೂನಿಕ್ಯಾಮ್ ನಲ್ಲಿ 1 ವರ್ಷ ಅಧ್ಯಯನ ಮತ್ತು ಅಭ್ಯಾಸದೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿದೆ. ಸಂಸ್ಥೆಯ ಮುಖ್ಯ ಉದ್ದೇಶ ಎಂದರೆ ವಾಯುಯಾನದಲ್ಲಿ ನಮ್ಮ ಸಂಸ್ಥೆಯ ಮಕ್ಕಳು ಬೆಳೆಯಬೇಕು ಉತ್ತಮ ಹುದ್ದೆಗಳಿಗೆ ದಾಪುಗಾಲು ಇಡಬೇಕು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಏರ್ಪೋರ್ಟ್ ನಲ್ಲಿ ಒಟ್ಟು 60ಕ್ಕೂ ಹೆಚ್ಚು ವಿವಿಧ ಇಲಾಖೆಗಳಲ್ಲಿ ಉದ್ಯೋಗ ಅವಕಾಶಗಳು ದೊರೆಯುತ್ತವೆ, ಮಕ್ಕಳು ಅತ್ಯಾಧುನಿಕ ಸೌಲಭ್ಯದಲ್ಲಿ ಅಧ್ಯಯನ,ಅರೆಕಾಲಿಕ ಹುದ್ದೆಗಳೊಂದಿಗೆ ಅಧ್ಯಯನ ಮಾಡುವಾಗ ಅವಧಿಯಲ್ಲಿ 8ರಿಂದ 15 ಸಾವಿರ ಸಂಭಾವನೆ, ಸಂವಹನಕ್ಕೆ ಅಂದರೆ ಹಿಂದಿ, ಇಂಗ್ಲಿಷ್ ಗೆ ಮೊದಲ ಆದ್ಯತೆ, ತಮ್ಮ ಅಧ್ಯಯನದ ಅವಧಿಯಲ್ಲಿಯೇ ಏರ್ಪಾಟು ಗಳಲ್ಲಿ ಕೆಲಸಗಳ ಅನುಭವನ್ನು ಪಡೆಯಲಿದ್ದಾರೆ ಎಂದರು.
ಚೆನ್ನೈ ಅಮೃತಾ ಶಿಕ್ಷಣ ಸಂಸ್ಥೆ ಸಿಂಗಾಪುರ,ಯುಕೆ, ಮಲೇಶ್ಯ,ಬರ್ಮಿಂಗ್ ಹ್ಯಾಮ್ ನೊಂದಿಗೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅಲ್ಲದೆ ಕೋರ್ಸ್ ಮುಗಿದ ಮೇಲೆ 100ಕ್ಕೆ 100ರಷ್ಟು ಉದ್ಯೋಗಗಳು ದೊರಕಿಸಿಕೊಡುವ ಜವಾಬ್ದಾರಿ ಸಂಸ್ಥೆ ಮೇಲಿರುತ್ತದೆ, ಇದರ ಜೊತೆಗೆ ಮಕ್ಕಳ ಇಡೀ ಜೀವನದ ಉದ್ದಕ್ಕೂ ಸಹ ಕೆಲಸದ ವಿಚಾರವಾಗಿ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತದೆ ಎಂದರು.
ಚೆನ್ನೈ ಅಮೃತ ಶಿಕ್ಷಣ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡಲು ಬೇರೆ ಶಿಕ್ಷಣ ಸಂಸ್ಥೆಗಳ ಹಾಗೆ ಹಣ ಪೀಕುವ ಕೆಲಸ ಮಾಡಿಲ್ಲ, ಬದಲಿಗೆ ಕೇವಲ 1ರಿಂದ 2 ಲಕ್ಷ ವರ್ಗೆ ವಿಧ್ಯಾಭ್ಯಾಸ ಮುಗಿಸಬಹುದು ಎಂದು ತಿಳಿಸಿದರು.
ಬೆಂಗಳೂರಿನ ಮಾರಿಯೊಟ್ಸ್ಯಾರ್ಡ ಮಾನವ ಸಂಪನ್ಮೂಲ ಸಹಾಯಕ ನಿರ್ದೇಶಕ ಸಿ. ಸುಮಿಶ್ ಮೋಹನ್ ಮತ್ತು ಬೆಂಗಳೂರಿನ ಚಾನೆಲರಿ ಪೆವಿಲಿಯನ್ನು ರೊಮಿಲ್ಲಾ ಘೋಷ್ ಮಾನವ ಸಂಪನ್ಮೂಲ ವವಸಾಪಕರು ಚೆನೈಸ್ ಅಮೀರ್ತಾ ಅವರ ಅಸಾಧಾರಣ ಕೊಡುಗೆಗಳಿಗಾಗಿ ಶಾಘಿಸಿದರು ಮತ್ತು ಅವರ ವೃತಿಫರ ವಿಶೇಷತೆಗಾಗಿ ಅವರ ವಿದಾರ್ಥಿಗಳನ್ನು ಶಾಘಿಸಿದರು. ಅಲ್ಲದೆ ತಾಳ್ಮೆಯಿಂದ ಕೆಲಸ ಮಾಡಬೇಕು ಅದರ ಜೊತೆಗೆ ಶ್ರದ್ಧೆ ಇದ್ದಾಗ ಮಾತ್ರ ಎಲ್ಲವೂ ಸಿಗುತ್ತದೆ. ಅಂತ ಸಾಧನೆಗಳನ್ನು ಮಾಡಲು ಮುಂದಾಗಬೇಕು, ಯಾವುದೇ ಕಾರಣಕ್ಕೂ ದುಡುಕ ಬಾರದು ಎಂದು ಮುಂಬರುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಲ್ಲದೆ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನ , ಬೆಳ್ಳಿ, ಕಂಚಿನ ಪದಕಗಳನ್ನು ಪಡೆಯುವ ಮೂಲಕ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಿಇಒ ಕವಿತಾ ನಂದಕುಮಾರ್, ಸಿಎಡಿ ಲಿಯೋ ಪ್ರಸತ್, ಡಾ.ಮಿಲನ್ ಡೀನ್, ವಿಶ್ವವಿದ್ಯಾಲಯಗಳ ವ್ಯವಹಾಗಳ ಮುಖ್ಯಸ್ಥರು ಭಾನುಮತಿ,ದೀಪೇಶ್ ರಾಜ್ ಸೇರಿದಂತೆ ಸಂಸ್ಥೆಯ ಅನೇಕರು ಇದೇ ವೇಳೆ ಉಪಸ್ಥಿತರಿದ್ದರು.