ಬೆಂಗಳೂರು: ವಾಲ್ಮೀಕಿ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಕರನ್ ಆತ್ಮಹತ್ಯೆ ವಿಚಾರವಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ₹88 ಕೋಟಿಯ ಅನಧಿಕೃತ ವರ್ಗಾವಣೆಗೆ ಸಂಬಂಧಿಸಿದ ಹಗರಣದಲ್ಲಿ ಮೃತ ಅಧಿಕಾರಿ ಮೂವರನ್ನು ಹೆಸರಿಸಿದ್ದಾರೆ. ಸುಖ ಸುಮ್ಮನೆ ತನಿಖೆಗೂ ಮುನ್ನವೇ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರನ್ನು ಪ್ರಕರಣದಲ್ಲಿ ಹೊಣೆಗಾರರನ್ನಾಗಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ ಚಳುವಳಿ ರಾಜಣ್ಣ ಆಗ್ರಹಿಸಿದರು.
ಬೆಂಗಳೂರಿನ ಮೌರ್ಯ ವೃತ್ತದಲ್ಲಿ ವಿವಿಧ ಸಂಘಸಂಸ್ಥೆಗಳ ಮುಖಂಡರು ಸೇರಿಕೊಂಡು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಪ್ರಕರಣದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು ಭಾನುವಾರ ಮೃತಪಟ್ಟಿದ್ದು, ಹಗರಣದ ಕುರಿತು ರಾಜ್ಯ ಸರ್ಕಾರ ಸಿಓಡಿ ತನಿಖೆಗೆ ವಹಿಸಿದ್ದರೂ ಸಹ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಪ್ರತಿಪಕ್ಷ ಬಿಜೆಪಿ ಮತ್ತು ಜನತಾ ದಳ (ಜಾತ್ಯತೀತ) ಒತ್ತಾಯಿಸಿವೆ. ಈ ಸಂಬಂಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಪ್ರಕರಣವು ಬ್ಯಾಂಕ್ ಹಾಗು ನಿಗಮದ ಅಧಿಕಾರಿಗಳ ನಡುವೆ ನಡೆದಿರುವ ಘಟನೆಯಾಗಿದೆ, ಅದನ್ನು ಬಿಟ್ಟು ಮಂತ್ರಿಗಳ ಮೇಲೆ ಗದಾಪ್ರಹಾರ ನಡೆಸಲು ಮುಂದಾಗಿದ್ದಾರೆ. ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು,ಮಾಡಿಕೊಂಡಿದ್ದಾರೆ ಅದು ಅವರ ರಣಹೇಡಿತನ, ಅದಕ್ಕೆ ಸರ್ಕಾರದಿಂದ ಮಾಡುವ ಕೆಲಸವನ್ನು ಮಾಡುತ್ತಾರೆ ಮಾಡಲಿ. ಅಧಿಕಾರಿಗಳು ಹಾಗೂ ಬ್ಯಾಂಕ್ ಅವರು ಸೇರಿಕೊಂಡು ಗೇಮ್ ಆಡಿದ್ದಾರೆ ಎಂದರು.
ಬೆಂಗಳೂರಿನ ಪಾಲಿಕೆ ಕಚೇರಿಯಲ್ಲಿ ಅಕೌಂಟ್ಸ್ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಚಂದ್ರಶೇಖರನ್ (48) ಭಾನುವಾರ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ತಮ್ಮ ಡೆತ್ ನೋಟ್ನಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ.ಪದ್ಮನಾಭ, ಅಕೌಂಟ್ಸ್ ಅಧಿಕಾರಿ ಪರಶುರಾಮ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಸುಚಿಸ್ಮಿತಾ ಅವರೇ ನನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ ಎಂದರು.
ನಿಗಮದಿಂದ ಯೂನಿಯನ್ ಬ್ಯಾಂಕ್ಗೆ ₹88 ಕೋಟಿ ಅನಧಿಕೃತ ವರ್ಗಾವಣೆಗೆ ಕಾರಣವಾದ ಸಹಿಯನ್ನು ನಕಲಿಯೇ ಅಥವಾ ಅಸಲಿ ಎಂದು ಖಚಿತಪಡಿಸಿಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸಿಓಡಿ ತನಿಖೆ ನಡೆಸುತ್ತಿದ್ದಾರೆ, ಹಣಕಾಸು ಇಲಾಖೆ ಅಧಿಕಾರಿಗಳು ಮೇ 28ರಂದು ಪಾಲಿಕೆ ಕಚೇರಿಗೂ ಭೇಟಿ ನೀಡಿ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಪಾಲಿಕೆಗೆ ಇದುವರೆಗೆ ₹ 28 ಕೋಟಿ ಅನಧಿಕೃತ ವಹಿವಾಟು ವಾಪಸು ಬಂದಿದ್ದು, ಉಳಿದ ₹ 60 ಕೋಟಿ ಪಡೆಯುವ ನಿರೀಕ್ಷೆಯಲ್ಲಿದೆ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಈಶ್ವರಪ್ಪ,ವಿಜಯೇಂದ್ರ ಪ್ರಕರಣದಲ್ಲಿ ಆಗಿದ್ದೇನು?
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಗ್ರಾಮಾಭಿವೃದ್ಧಿ ಇಲಾಖೆಯಲ್ಲಿ 40% ಕಮಿಷನ್ ಗೆ ಸಂಬಂಧಿಸಿದಂತೆ ಈಶ್ವರಪ್ಪ ಅವರ ಮೇಲೆ ನೇರವಾಗಿ ಆರೋಪ ಮಾಡಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ, ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಿತು?, ಯಾರಿಗೆ ಶಿಕ್ಷೆ ಆಗಿದೆ? ಅವರದೇ ಸರ್ಕಾರದಲ್ಲಿ ಹಗ್ಗಜಗ್ಗಾಟ ಮಾಡಿ ಅಂತಿಮವಾಗಿ ಸರ್ಕಾರ ಬೀಳಬೇಕಾದರೆ ರಾಜಿನಾಮೆ ನೀಡಿದರು. ಇದರ ಜೊತೆಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಕಡತಗಳಿಗೆ ಸಹಿ ಹಾಗು 40 %ಕಮಿಷನ್ ಗೆ ಸಂಬಂಧಿಸಿದಂತೆ ಪ್ರಕರಣ ಮುಚಿಹಾಕಿದ್ದು ಯಾರಿಗೂ ಗೊತ್ತಿಲ್ಲವೆ, ಇವೆಲ್ಲವನ್ನೂ ತಮ್ಮಲ್ಲಿಯೇ ಇಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿರುವುದು ಎಸ್ಟು ಸೂಕ್ತವಾಗಿದೆ. ಮೊದಲು ಬಿಜೆಪಿಯವರ ಉಳುಕನ್ನು ಮುಚ್ಚಿಕೊಳ್ಳಲು ನಂತರ ಬೀರೆಯರಿಗೆ ಹೇಳಿದರೆ ಮರ್ಯಾದೆ, ಬಿಜೆಪಿಯವರಿಗೆ ಮೊದಲು ನೈತಿಕತೆ ಇಲ್ಲ ಬೇರೆಯವರ ಬಗ್ಗೆ ಚುಚ್ಚಿ ಮಾತನಾಡುವ ಜಾಯಮಾನವನ್ನು ಬೆಳೆಸಿಕೊಂಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚಂದ್ರಶೇಖರನ್ ಪತ್ನಿಗೆ ಉದ್ಯೋಗ ನೀಡಲಿ!
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆ ಅನುಕಂಪದ ಆಧಾರದ ಮೇಲೆ ಸರ್ಕಾರ ಆತನ ಪತ್ನಿ ಕವಿತಾಗೆ ಸರ್ಕಾರದಲ್ಲಿ ಉದ್ಯೋಗ ನೀಡಿ ಜೀವನ ನಡೆಸಲು ಆಧಾರ ಮಾಡಿಕೊಡಲಿ, ಅದರಲ್ಲಿ ನಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಅನತಃ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ನನಗೆ ನ್ಯಾಯ ಒದಗಿಸಿಕೊಡಿ, ನನ್ನ ಪತಿಯ ಸಾವಿಗೆ ಕಚೇರಿಯಲ್ಲಿ ಅಧಿಕಾರಿಗಳು ಅಧಿಕ ಒತ್ತಡ ನೀಡಿದ್ದಾರೆ, ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಭಾರತೀಯ ಪರಿವರ್ತನಾ ಸಂಘ ಅಧ್ಯಕ್ಷ ಹಾಗು ವಕೀಲ ಪ್ರೊ.ಹರಿರಾಮ್ ಮಾತನಾಡಿ, ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಸರ್ಕಾರ ಸಿಓಡಿ ತನಿಖೆಗೆ ಆದೇಶ ನೀಡಿದೆ, ಹೀಗಾಗಿ ವರದಿ ಬರಲಿ ನಂತರ ಯಾರು ತಪ್ಪು ಮಾಡಿದರೂ ತಪ್ಪೇ ಅವರಿಗೆ ಶಿಕ್ಷೆ ಆಗಲಿ, ಅದನ್ನು ಬಿಟ್ಟು ಸಚಿವರನ್ನು ಹೊಣೆಗಾರರನ್ನಾಗಿ ಮಾಡಿ ರಾಜಿನಾಮೆಗೆ ಬಿಜೆಪಿಯವರು ಒತ್ತಾಯಿಸುತ್ತಿರುವುದು ಯಾವ ನ್ಯಾಯ?
ಕಾನೂನಿನ ಅಡಿಯಲ್ಲಿ ಪಾರದರ್ಶಕವಾಗಿ ತನಿಖೆ ನಡೆದು ಯಾರ ಮೇಲೆ ಆಪಾದನೆ ಸಾಬೀತಾಗುತ್ತೋ ಆಗ ಅವರಿಗೆ ಶಿಕ್ಷೆಯಾಗಬೇಕು, ಆತ್ಮಹತ್ಯೆಗೆ ಶರಣಾಗಿರುವ ಅಧಿಕಾರಿ ಬರೆದಿದ್ದಾರೆ ಎನ್ನಲಾದ ಮರಣ ಪತ್ರದಲ್ಲಿ ನಿಗಮದ ಎಂಡಿ ಹೆಸರು ಉಲ್ಲೇಖಿಸಿದ್ದಾರೆ, ಇದರಲ್ಲೂ ಅಧಿಕಾರಿಗಳ ಕುಮ್ಮಕ್ಕು ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪ್ರಕರಣದಲ್ಲಿ ರಾಜಕೀಯ ಕೆಸರೆರಚಾಟ ಮಾಡುತ್ತಿದ್ದಾರೆ. ನಿಗಮದ ಎಂಡಿ ಗೆ, ಮಂತ್ರಿಗಳಿಗೆ ಹೇಳಿದ್ದರೆಯೇ ಎಂಬ ಬಗ್ಗೆ ತನಿಖೆ ಸೂಕ್ತ ರೀತಿಯಲ್ಲಿ ಯಾಗಬೇಕು ಎಂದು ಒತ್ತಾಯ ಮಾಡಿದರು.
ಪ್ರಕರಣದಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆದಿದೆ, ಬಡವರ ಪಾಲಿನ ಹಣವನ್ನು ಬ್ಯಾಂಕ್ ಅವರು ಸೇರಿಕೊಂಡು ಮಾಡಿದ್ದಾರೆ, ಅದಕ್ಕೆ ತಕ್ಕ ಶಾಸ್ತಿಯಾಗಬೇಕು. ಇದರಲ್ಲಿ ನಿಜವಾದ ಅಪರಾಧಿಗಳು ಯಾರು ಎಂಬುದನ್ನು ತನಿಖೆಯಿಂದ ಬರಬೇಕಿದೆ. ಇದರಲ್ಲಿ ಕಾಂಗ್ರೆಸ್ ಸರ್ಕಾರ ಕೈಚೆಲ್ಲಿ ಕೂತರೆ ನಾಲಾಯಕ್ ಹಣೆಪಟ್ಟಿ ಕಟ್ಟಿಕೊಳ್ಳುತ್ತದೆ ಎಂದರು. ಸಚಿವ ನಾಗೇಂದ್ರ ಅವರ ಕುಮ್ಮಕ್ಕಿನಿಂದ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂಬ ಆರೋಪಕೆ ಯಾವುದೇ ಸಾಕ್ಷಿ ಇಲ್ಲ ಸುಖಾಸುಮ್ಮನೆ ಇಲ್ಲಸಲ್ಲದ ಗದ್ದಲ ಮಾಡುತ್ತಿದ್ದಾರೆ.
ವಾಲ್ಮೀಕಿ ನಿಗಮದ ಸಮಸ್ಯೆ ಅಲ್ಲ ಎಲ್ಲಾ ನಿಗಮದ ಸಮಸ್ಯೆ!
ವಾಲ್ಮೀಕಿ ಅಭಿವೃದ್ದಿ ನಿಗಮದ ಅಧೀಕ್ಷಕ ಸಾವಿನಿಂದ ಇಡೀ ಅಕ್ರಮದ ವಾಸನೆ ಜೋರಾಗಿ ಬಡಿಯುತ್ತಿದೆ, ಇದು ಕೇವಲ ವಾಲ್ಮೀಕಿ ನಿಗಮದಲ್ಲಿ ಅಲ್ಲದೆ, ಇತರ ನಿವಮಗಳಲ್ಲಿಯೂ ಇದೇ ಪರಿಸ್ಥಿತಿ ಇದೆ, ನಿಗಮಗಳು ಇರುವುದು ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಲಸೋಲ ನೀಡುವ ಅವರನ್ನು ಮುನ್ನೆಲೆಗೆ ತರುವ ಹಿನ್ನೆಲೆ, ಇದರಲ್ಲಿ ಮಂತ್ರಿಗಳು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಅಲ್ಲಿರುವ ಅಧಿಕಾರಿಗಳು ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ಕಂಡುಬಂದಿದೆ.
ಈಗಾಗಲೇ ಬ್ಯಾಂಕ್ ಮೇಲೆ ಎಫ್ಐಆರ್ ದಾಖಲಾಗಿದೆ, ಉಳಿದ ಹಣವನ್ನು ರಿಕವರಿ ಮಾಡಿಕೊಳ್ಳಾಗಿದೆ, ನಿಗಮದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣ ನು ಸಿಐಡಿಗೆ ವಹಿಸಲಾಗಿದೆ ಎಂದರು.
ಮಾಧ್ಯಮ ಪ್ರತಿಕೆಯೇ ವೇಳೆ ಅಹಿಂದ ಸಂಘಟನೆಯ ಒಕ್ಕೂಟದ ಹೋರಾಟಗಾರ ದಲಿತ ರಮೇಶ್, ಎಸ್ಸ್ ಆರ್ ನಾಯಕ್ ಸೇರಿದಂತೆಇತರರು ಉಪಸ್ಥಿತರಿದ್ದರು.