ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನೀಲಕಂಠ ಆರ್ ಗೌಡ ಅವರಿಗೆ ವಿಶ್ವ ಕನ್ನಡ ಕಲಾ ಒಕ್ಕೂಟ ಹಾಗೂ ಸಮಾನಮನಸ್ಕಾರ ವೇದಿಕೆ ಅವರಿಂದ ಬೆಂಬಲ ಸೂಚಿಸಲಾಗಿದ್ದು, ಅವರನ್ನು ಬೆಂಬಲಿಸಿ ಚುನಾವಣೆಯಲ್ಲಿ ಗೆಲ್ಲಿಸಿ ಕೊಡಬೇಕೆಂದು ವಿಶ್ವಕನ್ನಡ ಕಲಾ ಕೂಟದ ಅಧ್ಯಕ್ಷರಾದ ಸುರೇಶ್ ಬಾಬು ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ 3ರಂದು ನಡೆಯಲಿರುವ ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನೀಲಕಂಠ ಆರ್ ಗೌಡ ಅವರು ಸ್ಪರ್ಧೆ ಮಾಡಿದ್ದು, ಅವರ ಸೇವೆ ಹಾಗೂ ಬಡವರ ಮೇಲಿರುವ ಸಹಾಯದ ಮನೋಭಾವ ಎಲ್ಲರಿಗೂ ಪ್ರೀತಿಪೂರ್ವಕವಾಗಿದೆ. ಎಲ್ಲಾ ವರ್ಗಗಳ ದವರ ಯೋಗ ಕ್ಷೇಮ ಕಾಪಾಡುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ, ಶಿಕ್ಷಣ ಹಾಗೂ ಆರೋಗ್ಯ ಸೇವೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ನೀಲಕಂಠ ಅವರು ಸಾಕಷ್ಟು ಶ್ರಮಿಸುತ್ತಾರೆ.
ಅಭ್ಯರ್ಥಿ ನೀಲಕಂಠ ಗೌಡ ಅವರ ಗ್ಯಾರಂಟಿ ಯೋಜನೆ:
ಬೆಂಗಳೂರು ಪದವೀದರರ ಕ್ಷೇತ್ರದ ಚುನಾವಣೆ ವಿಚಾರವಾಗಿ ಅವರು ಪ್ರಣಾಳಿಕೆ ಒಂದನ್ನು ಸಿದ್ಧಪಡಿಸಿದ್ದು ಅದರಲ್ಲಿ ಮುಖ್ಯವಾಗಿ ಹಲವು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದಾರೆ, ಅದರಲ್ಲಿ ಮೊದಲನೇದಾಗಿ ಭ್ರಷ್ಟಾಚಾರ ಮಾಡುವುದಿಲ್ಲ, ಅಧಿಕಾರ ದುರುಪಯೋಗ, ಸ್ವಾರ್ಥ ರಾಜಕಾರಣ ಮಾಡುವುದಿಲ್ಲ. ಧ್ವನಿ ಇಲ್ಲದವರ ವಿಶೇಷವಾಗಿ ಪದವೀಧರರ ಶಿಕ್ಷಣ ಕ್ಷೇತ್ರದಲ್ಲಿರುವ ತಾರತಮ್ಯ ವಿರುದ್ಧ ನಮ್ಮ ಹೋರಾಟ ನಡೆಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ನೀಲಕಂಠ ಗಡ ಅವರು ರಾಜಕೀಯ ಕುಟುಂಬದ ಹಿನ್ನೆಲೆ ಉಳ್ಳವರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರಜ್ಞಾನ ಉಳ್ಳವರಾಗಿದ್ದಾರೆ, ಆದರೂ ಸಹ ಯಾವುದೇ ಪಕ್ಷಭೇದವಿಲ್ಲದೆ ಎಲ್ಲಾ ಕ್ಷೇತ್ರದಲ್ಲಿ ಸಹ ತಮಾಷೆಗೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. 2008 ರಿಂದ 2013ರ ವರೆಗೆ ರಾಜ್ಯ ಒಕ್ಕಲಿಗರ ಸಂಘದಲ್ಲಿ ಚುನಾಯಿತ ನಿರ್ದೇಶಕರಾಗಿ ಅಲ್ಲಿನ ಅನೇಕ ಶಾಲಾ ಕಾಲೇಜುಗಳು ಆಡಳಿತ ಮಂಡಳಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾರೆ. ಇವರೊಬ್ಬ ಜಾತ್ಯತೀತ ನಿಲುವಿನ ವ್ಯಕ್ತಿಯಾಗಿದ್ದಾರೆ.
ಕಲಾ ಕೋಟದ ಉಪಾಧ್ಯಕ್ಷ ಹಲ್ಲೆಗೆರೆ ಕೃಷ್ಣ ಮಾತನಾಡಿ, ನೀಲಕಂಠಗೌಡ ಅವರು ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ತಣ್ಣಗಾದ ಚಾಪನ್ನು ಮೂಡಿಸಿದ್ದಾರೆ ಪದವೀಧರರ ಹಾಗೂ ಶಿಕ್ಷಕರಿಗೆ ನ್ಯಾಯ ಒದಗಿಸಲು ಸಾಕಷ್ಟು ಹಗಲಿಗಳು ಶ್ರಮಿಸಿದ್ದು ಇವರನ್ನು ಈ ಬಾರಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಆಯ್ಕೆ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಹಾಗೂ ಶಿಕ್ಷಣ ವಿದ್ಯಾವಂತರಲ್ಲಿ ಮನವಿ ಮಾಡಿದರು.
ಇನ್ನು ಇದೇ ಬೆಲೆ ಅಮಾನ್ಯ ಪಕ್ಷದ ರಾಜ್ಯ ಮುಖಂಡ ಚೆನ್ನಪ್ಪ ಗೌಡ ನಲ್ಲೂರ್ ಮಾತನಾಡಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಆಶಯಗಳಿಗೆ ಪೂರಕವಾಗಿ ಪಾರದರ್ಶಕವಾಗಿ ಹಾಗೂ ರೈತ ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡಬೇಕು ಎಂಬ ಮನಸ್ಸಿರುವವರು ನೀಲಕಂಠ ಗೌಡ ಅವರು. ಸಾಮಾಜಿಕ ಜವಾಬ್ದಾರಿಯನ್ನು ರಿತು ಕೊಡಗಿನಲ್ಲಿ ಪರಿಸರ ವಿಕೋಪ ಹೋದಾಗ ಸಂತ್ರಸ್ತರಿಗೆ ಕರೋನ ಸಂಕಷ್ಟದಲ್ಲಿ ಮಲಗಿದ್ದ ಅನೇಕ ಕಲಾವಿದರಿಗೆ ವಿವಿಧ ಮೂಲಗಳಿಂದ ದೇಣಿಗೆ ಸಂಗ್ರಹಿಸಿ ಅವರ ಕಷ್ಟದಲ್ಲಿ ಭಾಗಿಯಾಗಿರುವುದು ನೆನಪಿಸಿಕೊಳ್ಳಬೇಕು, ಇಂದಿಗೂ ಸಹ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದನ್ನು ನೋಡಬಹುದಾಗಿದೆ.
ಒಟ್ಟಾರೆಯಾಗಿ ಬೆಂಗಳೂರು ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ನೀಲಕಂಠ ಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ಅವರನ್ನು ಬೆಂಬಲಿಸಿ ಆಯ್ಕೆ ಮಾಡಬೇಕೆಂದು ಒಕ್ಕೂಟದ ಪರವಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.