ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಟೋ ಚಾಲಕರು, ಲಾರಿ ಚಾಲಕರು, ಲೋಡರ್ಸ್, ಕ್ಲೀನರ್ ಹಾಗೂ ಘನತ್ಯಾಜ್ಯ ವಾಹನ ಚಾಲಕರನ್ನು ಡಿಪಿಎಸ್ ಪದ್ಧತಿಯಲ್ಲಿ ನಿಯೋಜನೆ ಮಾಡಬೇಕೆಂದು ಬೆಂಗಳೂರು ಮಹಾನಗರ ಪಾಲಿಕೆ ನೀಡಬೇಕೆಂದು ಪೌರಕಾರ್ಮಿಕರ ಮೇಲ್ವಿಚಾರಕರ ಚಾಲಕರ ಸಹಾಯಕರ ಲೀಡರ್ಸ್ ರವರ ಕಾಯಂಬತ್ತಾಯ ಕ್ರಿಯಾ ಸಮಿತಿಯಿಂದ ಅಗ್ರಹಾರ ಮಾಡಲಾಯಿತು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ಸುಬ್ಬರಾಯುಡು ಮಾತನಾಡಿ, ಬಿಬಿಎಂಪಿ ಲೋಡರ್ಸ್ ಕ್ಲೀನರ್ ಹಾಗೂ ಘನತ್ಯಾಜ್ಯ ವಾಹನ ಚಾಲಕರು ಸುಮಾರು 11 ಸಾವಿರ ಇದ್ದು, ಇವರನ್ನು ನೇರ ನೇಮಕಾತಿಯಲ್ಲಿ ಕಾಯಂ ಮಾಡುವಂತೆ 2020 ರಿಂದ ಸರ್ಕಾರಕ್ಕೆ ಹಾಗು ಪಾಲಿಕೆಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಇವರುಗಳು ಪಾಲಿಕೆಯಲ್ಲ ಸುಮಾರು 20 ರಿಂದ 30 ವರ್ಷಗಳ ಕಾಲ ಘನ ತ್ಯಾಜ್ಯ ಸಾಯಿಸುವ ಸ್ವಚ್ಛತಾ ಸೇವೆಯಲ್ಲಿ ನಿರಂತರವಾಗಿ ದುಡಿದಿದ್ದಾರೆ ಎಂದರು.
ಗುತ್ತಿಗೆದಾರ ಪದ್ಧತಿಯನ್ನು ನೇರ ನೇಮಕಾತಿಯನ್ನಾಗಿ ಮಾಡಿಕೊಳ್ಳಬೇಕೆಂದು ಉಚ್ಚ ನ್ಯಾಯವೇ ಆದೇಶ ಹೊರಡಿಸಿದೆ, ಆದರೆ ಇವೆಲ್ಲವನ್ನೂ ಸಹ ಗಾಳಿಗೆ ತೂರಿ ಬಿಬಿಎಂಪಿ ಅಧಿಕಾರಿಗಳು ಸ್ವಚ್ಛತಾ ಕಾರ್ಮಿಕರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. 2018ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರ ಕಾಲದಲ್ಲಿ ಗುತ್ತಿಗೆ ಪೌರಕಾರ್ಮಿಕರನ್ನು ಕುತ್ತಿಗೆ ಫಲದಿಂದ ರದ್ದುಪಡಿಸಿ ನೇರವಾಗಿ ಅನ್ಯಾಯ ನಗರಸಭೆ ಪುರಸಭೆ ಹಾಗೂ ನಗರಪಾಲಿಕೆಗಳಲ್ಲಿ ನಿವೇದಿಸಿಕೊಂಡು ಆ ಸಂಸ್ಥೆಗಳೇನಿರಬೇಕಾದ ಪದ್ಧತಿಯಲ್ಲಿ ಸಂಬಳವನ್ನು ನೀಡಬೇಕೆಂದು 2017ರಂದು ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದರು ಆದರೆ ಕಸವನ್ನು ಸಾಗಿಸುವ ಸ್ವಚ್ಛತಾ ಕಾರ್ಮಿಕರನ್ನು ಕಾನೂನು ಬಹಿರವಾಗಿ ಗುತ್ತಿಗೆಯ ಆಧಾರದ ಅಡಿಯಲ್ಲಿ ತೀರ್ಮಾನ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ ಎಂದರು.
ಒಂದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರಿಗೆ ಬಂದುವ ನಿಲುವನ್ನು ತೆಗೆದುಕೊಂಡಿರುವ ಅಧಿಕಾರಿಗಳ ಕ್ರಮ ಸರಿಯಾದ ಕ್ರಮವಲ್ಲ. ಈ ಸಂಬಂಧ ಪೌರಕಾರ್ಮಿಕರ ಸಂಘಗಳು ಅನೇಕ ಬಾರಿ ತಕರಾರು ಆಕ್ಷೇಪಣೆ ಮತ್ತು ದೂರುಗಳನ್ನು ಪಾಲಿಕೆಗೆ ಸರ್ಕಾರಕ್ಕೆ ನೀಡಿದ್ದರು ಸಹಾ ಪರಿಗಣಿಸಿರುವುದಿಲ್ಲ.
ಸ್ವಚ್ಛತಾ ಕಾರ್ಮಿಕರಾದ ಆಟೋ ಚಾಲಕರು ಲಾರಿ ಚಾಲಕರು ಲೀಡರ್ಸ್ ಕ್ಲೀನರ್ ಹಾಗೂ ಘನತ್ಯಾಜ್ಯ ವಾಹನ ಚಾಲಕರಗಳ ವಿಚಾರವಾಗಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಸರ್ಕಾರ ಡಿಪಿಎಸ್ ಪದ್ದತಿ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅಂದರೆ ನೀತಿ ಸಮಿತಿ ಮುಗಿದ ನಂತರ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕ್ರಿಯಾ ಸಮಿತಿಯ ಹಿರಿಯ ಉಪಾಧ್ಯಕ್ಷರಾದ ಡಿ ನರಸಿಂಹ, ಪ್ರಧಾನ ಕಾರ್ಯದರ್ಶಿ ಎಂಸಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಕೆಬಿ ನರಸಿಂಹ ಪ್ರಧಾನ ಕಾರ್ಯದರ್ಶಿ ಇತರರು ಉಪಸ್ಥಿತರಿದ್ದರು.