ಬೆಂಗಳೂರು: ಗೃಹ ಬಳಕೆಯ ಸಿಲಿಂಡರ್ಗಳ ವ್ಯಾಪಕ ಬಳಕೆಯನ್ನು ನಿಲ್ಲಿಸಲು ಹಾಗೂ ಅದರಿಂದಾಗುವ ಸ್ಪೋಟದ ವಿಚಾರವಾಗಿ ಸರ್ಕಾರದ ಕವನ ಸೆಳೆಯಲು ಗ್ರಾಹಕ ದಕ್ಷತ ಕಲ್ಯಾಣ ಫೌಂಡೇಶನ್ ನಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಕರ್ನಾಟಕ ವಿಭಾಗದ ಮುಖ್ಯಸ್ಥರಾದ ಚೇತನ್ ಕುಮಾರ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯ ಸ್ಥರೇಂದ್ರಗಳ ಬೆಲೆಗಳು ಸುಮಾರು ನೂರರಷ್ಟು ಹೆಚ್ಚಾಗಿರುವುದರಿಂದ ವಾಣಿಜ್ಯ ಸಂಸ್ಥೆಗಳು ಗೃಹ ಬಳಕೆಗಳನ್ನು ಅಂದರೆ 14 ಕೆಜಿ ಸಿಲಿಂಡರ್ ಗಳನ್ನು ವ್ಯಾಪಕವಾಗಿ ಬಳಸಿದ ಪ್ರಾರಂಭಿಸಿದೆ ಕೆಲವು ಕಡೆ ಸಿಲೆಂಡರ್ 19 ಕೆಜಿ ವಾಣಿಜ್ಯ ಸಿಲಿಂಡರ್ ಆಗಿ ಪರಿವರ್ತಿಸಲಾಗುತ್ತದೆ ಇದು ಅಕ್ರಮವಾಗಿ ನಡೆಯುತ್ತಿರುವ ವಿಚಾರ ಎಂದರು, ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡಲಾಗುತ್ತದೆ ಎಂದರು.
ಇದಲ್ಲದೆ ಅಕ್ರಮವಾಗಿ ಸಿಲಿಂಡರ್ಗಳ ರೀಫಿಲ್ಲಿಂಗ್ ಹಾಗೂ ಸ್ಫೋಟ ಸಂಭವಿಸುವ ವಿಚಾರವಾಗಿ ಸರ್ಕಾರ ದಿಟ್ಟ ನಿಲುವನ್ನು ತೆಗೆದುಕೊಳ್ಳಬೇಕು ಎಂದರು. ಗೃಹಬಳಕೆಯ ಸಿಲಿಂಡರ್ ಗಳನ್ನು ವಾಣಿಜ್ಯೀಕರಣಗೊಳಿಸಲು ಬಳಸಿಕೊಳ್ಳುತ್ತಿರುವುದು ವ್ಯಾಪಕವಾಗಿ ಅಕ್ರಮ ನಡೆಸಲಾಗುತ್ತದೆ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ತಿಳಿಸಿದರು.
ಹೆಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಸಿಲಿಂಡರ್ ರೇಫೈಲಿಂಗ್ ದಂದೆ!
ರಾಜ್ಯದಲ್ಲಿ ವಾಣಿಜ್ಯ ಕೆಲಸ ಕಾರ್ಯಗಳಿಗೆ ಹೆಚ್ಚು ಗ್ಯಾಸ್ ಬಳಕೆಯಾಗುವ ಹಿನ್ನೆಲೆ ಗೃಹಬಳಕೆಯ ಗ್ಯಾಸ್ ಕಡೆ ಕಣ್ಣು ಬಿದ್ದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ, ಅದರಲ್ಲಿ ಮೈಸೂರು, ಕೋಲಾರ, ಬೆಂಗಳೂರು, ಆನೇಕಲ್, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ದಂದೆ ನಡೆಯುತ್ತಿದೆ. ಆದರೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ. ಕೆಲವು ಕಡೆ ಗ್ರಾಹಕ ದಕ್ಷತೆ ಕಲ್ಯಾಣ ಸಂಸ್ಥೆಯವರು ಅಕ್ರಮದಲ್ಲಿ ತೊಡಗಿರುವವನ್ನು ಹಿಡಿದು ಸಂಬಂಧಿಸಿದವರಿಗೆ ಒಪ್ಪಿಸುವ ಕೆಲಸ ಮಾಡಿದ್ದಾರೆ.
ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ,
ಸ್ಪೋಟಕಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಾಣಿಜ್ಯ ಉದ್ದೇಶಗಳಿಗೆ ಹೆಚ್ಚು ಗ್ಯಾಸ್ ಬಳಸಿಕೊಳ್ಳುತ್ತಿದ್ದಾರೆ. ಹಾಗು ಹೆಚ್ಚು ಬೆಲೆ ಇರುವ ಕಾರಣ ಇದರಿಂದ ಗೃಹ ಬಳಕೆಯ ಗ್ಯಾಸ್ ವಾಣಿಜ್ಯದ ಕಡೆ ಮಾರಾಟವಾಗುತ್ತಿವೆ. ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದರು. ಇದಕ್ಕೆ ನಾವೆಲ್ಲರೂ ಪಣತೊಟ್ಟು ಕಡಿವಾಣ ಹಾಕಬೇಕೆಂದರು.
ಗ್ಯಾಸ್ ಸಿಲಿಂಡರ್ ಗಳಿಗೆ QR ಕೋಡ್ ಹಾಕಿ ಅಕ್ರಮ ತಪ್ಪಿಸಿ!
ಇನ್ನು ಸರ್ಕಾರ ಗ್ಯಾಸ್ ತುಂಬುವ ವೇಳೆ ಸಿಲಿಂಡರ್ ಎಸ್ಟು ಪ್ರಮಾಣದಲ್ಲಿದೆ ಎಂಬುದನ್ನು ಕೂಲಂಕುಶವಾಗಿ ಪರಿಶೀಲಿಸಿ ಜಾಗರತೆಯಿಂದ ಮಾಡಲಾಗುತ್ತದೆ. ಅದೇರೀತಿ ಗ್ರಾಹಕರಿಗೆ ಕೊಡುವಾಗಲು ಏಕೆ ಇಂತಹ ನಿಲುವು ತೆಗೆದುಕೊಂಡಿಲ್ಲ. ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ, 19 ಕೆಜಿ ತೂಕದ ಸಿಲಿಂಡರ್ ಅನ್ನು 14 ಮಾಡುವ ಕಲೆ ಇದಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಸಿಲಿಂಡರ್ಗಳಿಗೆ QR ಕೋಡ್ ಹಾಕುವುದರಿಂದ ಗ್ಯಾಸ್ ಸಿಲಿಂಡರ್ ನಲ್ಲಿ ಸಂಸ್ಥೆ ಬರುವುದಿಲ್ಲ. ಹಾಗು ಅಕ್ರಮ ನಡೆಸ್ಸಲು ಸಾಧ್ಯ ಆಗುವುದಿಲ್ಲ.
ಫೌಂಡೇಶನ್ ನ ಉತ್ತರ ಕರ್ನಾಟಕದ ಮುಖ್ಯಸ್ಥ ಅರುಣಾ ಮಾತನಾಡಿ, ರಾಜ್ಯದಲ್ಲಿ ಅಡುಗೆ ಸಿಲಿಂಡರ್ ನಲ್ಲಿ ನಡೆಯುತ್ತಿರುವ ಗೋಲ್ ಮಾಲ್ ನಲ್ಲಿ ಸರ್ ಸಾರ್ವಜನಿಕರಿಗೆ ಅಪಾರವಾಗಿ ನಷ್ಟ ವಾಗುತ್ತಿದೆ. .ಮಾರುಕಟ್ಟೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಗಳ ಅವ್ಯವಹತವಾಗಿ ದೊರೆಯುತ್ತಿವೆ, ಕೆಲ ಗ್ಯಾಸ್ ಏಜೆನ್ಸಿ, ತೈಲ ಕಂಪನಿಗಳು ಹೆಚ್ಚುವರಿಯಾಗಿ ಸಿಲಿಂಡರ್ ತೆಗೆದುಕೊಳ್ಳುತ್ತಿರುವುದೂ ಸಾಕಷ್ಟು ಅವ್ಯವಹಾರಕ್ಕೆ ಕಾರಣವಾಗಿದೆ ಎಂದರು.
ಸಾಕಷ್ಟು ಬಾರಿ ಮನೆಯಲ್ಲಿ ಸಿಲಿಂಡರ್ ಸ್ಪೋಟ ವಾಗಿರುವ ಉದಾಹರಣೆಗಳು ಇವೆ. ಇದರಿಂದ ಜನವರಿ ಪ್ರದೇಶದಲ್ಲಿ ಗೋಡೌನ್ ಮಾಡದೆ, ನಿರ್ಜನ ಜಾಗದಲ್ಲಿ ಮಾಡಿ ವಹಿವಾಟು ನಡೆಸಬೇಕು. ಕಡಿಮೆ ಬೆಲೆಗೆ ಗೃಹಬಳಕೆಯ ಗ್ಯಾಸ್ ಕೊಂಡುಕೊಂಡು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ಕಳ್ಳ ಜಾಲ ಬೆಳಕಿಗೆ ಬಂದಿದೆ.
ಫೌಂಡೇಶನ್ ಜಾಗೃತಿ ಅಭಿಯಾನ
ಗ್ಯಾಸ್ ಸಿಲಿಂಡರ್ ಖರೀದಿಸುವಾಗ ಮುಂಜಾಗ್ರತೆ ವಹಿಸಬೇಕಾಗಿದೆ, ದೇಶಿ ಸಿಲಿಂಡರ್ ಖರೀದಿಸುವಾಗ, ವಿತರಿಸುವಾಗ ಅದರ ಸೀಲ್ ಪರಿಶೀಲಿಸಿ, ಖಾಲಿ ಹಾಗು ಪೂರ್ಣ ಇರುವ ಸಿಲಿಂಡರ್ ಪರಿಶೀಲಿಸಿ, ಶಾಂಪೂ, ಸಾಬೂನಿನ ಮೂಲಕ ಗ್ಯಾಸ್ ಲೀಕ್ ಆಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿ ಕೊಳ್ಳಿ.
ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನು ಮಾಡುತ್ತಿದ್ದು, ಅದಕ್ಕೆ ಸರ್ಕಾರ ಜಾಗ್ರತೆ ವಹಿಸಿ, ರಿಫಿಲಿಂಗ್ ಅಕ್ರಮದಲ್ಲಿ ಭಾಗಿಯಾಗಿರುವರನ್ನು ಬಂಧಿಸಿ ಶಿಕ್ಷೆ ನೀಡಬೇಕು.