ಬೆಂಗಳೂರು: ಭೂಮಿ ಮೇಲೆ ಇರುವ ಪ್ರಾಣಿ, ಪಕ್ಷಿ, ಜಲಚರಗಳಿಗೆ ಹೀಗೆ ವಾಸಿಸುವ ಹಕ್ಕು ಇದೆಯೋ ಹಾಗೆ ಮನುಷರಾದವರಿಗೆ ಭೂಮಿ ಮೇಲೆ ಜೀವಿಸುವ ಹಕ್ಕು ಇದೆ ಎಂದು ಪ್ರತಿಪಾದಿಸಿದವರು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಎಂದು ವೈದ್ಯೆ ಹಾಗು ಸಾಹಿತಿ ಡಾ. ಹೆಚ್ ಎಸ್ ಅನುಪಮಾ ಅವರು ತಿಳಿಸಿದರು.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಹಾಗು ಕವಿನಿನಿ ಪರಿಶಿಷ್ಟ ಜಾತಿ ಹಾಗೂ ಪಂಗಡ ನೌಕರರ ಸಂಘದ ವತಿಯಿಂದ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವೈದ್ಯೆ ಹಾಗು ಸಾಹಿತಿ ಡಾ.ಅನುಪಮ ಹೆಚ್ ಎಸ್ ಮಾತನಾಡಿ, ಅಂಬೇಡ್ಕರ ಅವರು ಮಾನವ ಹಕ್ಕುಗಳಿಗೆ ಹೋರಾಟ ಮಾಡಿದವರು. ಮನುಷ್ಯನಿಗೆ ಬೇಕಾಗುವ ಸಮಾನ ಹಕ್ಕುಗಳು ಹಾಗು ಸಮಾನತೆ ಬಗ್ಗೆ ಹೋರಾಟ ಮಾಡಿದ ವ್ಯಕ್ತಿ, ಪ್ರಾಣಿ, ಪಕ್ಷಿ,ಜಲಚರಗಳಿಗೆ ಇರುವ ಹಕ್ಕುಗಳಿದ್ದಂತೆ ನಮಗೂ ಭೂಮಿ ಮೇಲೆ ಅನುಭವಿಸುವ ಹಕ್ಕಿದೆ. ಇವೆಲ್ಲವನ್ನೂ ಕಾನೂನುಬದ್ಧವಾಗಿ ಹಕ್ಕುಗಳನ್ನು ಪಡೆದವರು ಆಗಿದ್ದರು.
ಭಾರತದ ರೂಪಾಯಿ ಎದುರು ಬ್ರಿಟನ್ ಪೌಂಡ್ ಹೇಕೆ ತನ್ನ ಮೌಲ್ಯ ಹೆಚ್ಚಳ ಮಾಡಿಕೊಂಡಿಲ್ಲ, ಎಂಬುದರ ಬಗ್ಗೆ ಅವರ phd ಪ್ರಬಂಧ ಥೀಸಿಸ್ ನಲ್ಲಿ ಮಂಡಿಸಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಸತ್ಯವನ್ನು ಹೇಳಿದ್ದಾರೆ. ಪ್ರಜಾಪ್ರಭುತ್ವ ಏಲ್ಲಿದೆ ಎಂಬುದನ್ನು ಹುಡುಕುವ ಪರಿಸ್ಥಿತಿ ಬಂದೊದಗಿದೆ.
ಅಂಬೇಡ್ಕರ ಅವರು ಗೌರವಯುತವಾಗಿ ಆಳ್ವಿಕೆಯ ವ್ಯಕ್ತಿ, ಗುಲಾಮರನ್ನು ಗುಮಾರೆಂದು ಕರೆಯಿರಿ ಎಂದು ಅಂಬೇಡ್ಕರ ಅವರೇ ಹೇಳಿದ್ದಾರೆ ಕಾರಣ ಆಗುಲಾಮರಿಗೆ ಗುಲಾಮರೆಂದು ಹೇಳಿದಾಗ ಸ್ವಲ್ಪ ಎಚ್ಚತ್ತುಕೊಳ್ಳುತ್ತಾರೆ ಎಂದಿದ್ದಾರೆ.
ಅಂಬೇಡ್ಕರ ಅವರ ಕಾಲದಲ್ಲಿ 1984ರಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗ ಗೆಲ್ಲುವುದು ಕಾಡ್ತಾ ಇದ್ದರೂ ಸಹಾ ಅವರು ಅಂಜದೆ ಬಲಿಷ್ಠ ಪಕ್ಷಗಳ ಎದುರು ವಿಪಕ್ಷಗಳಾಗಿ ಕಾರ್ಯ ಮಾಡುವ ಕೆಲಸವನ್ನು ಸಿಗಲಿ ಎಂಬುದನ್ನು ಹೇಳುತ್ತಿದ್ದರು. ಅಂಬೇಡ್ಕರ್ ಅವರು ಸಂವುದಾಹ ಶಿಲ್ಪಿ ಅಲ್ಲದೆ ಒಬ್ಬ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಲ್ಕೈದು ಪತ್ರಿಕೆಗಳನ್ನು ಮಾಡಿ ಸಮಾಜದಲ್ಲಿ ಕ್ರಾಂತಿಯನ್ನು ಬರವಣಿಗೆಯಲ್ಲಿ ಬದಿದ್ದೆಬ್ಬಿಸಿದ್ದಾರೆ ಎಂದರು.
ಅಂಬೇಡ್ಕರ ಅವರು ಎರಡು ಧರ್ಮಗಳನ್ನು ಪ್ರತಿಪಾದಿಸಿದ್ದರು, ಹಿಂದೂ ಧರ್ಮದಲ್ಲಿ ಇರುವ ಅಷ್ಪೃಶ್ಯತೆ ಇರುವುದನ್ನು ತೊಲಗಿಸಲು ಹೋರಾಟ ಮಾಡಿದ್ದಾರೆ. ಅಂದಿನ ಕಾಲದಲ್ಲಿಯೇ ಹಿಂದೂ ಧರ್ಮವನ್ನು ಆಮೂಲಾಗ್ರವಾಗಿ ಪ್ರತಿಪಾದಿಸಿದವರು ಅಂಬೇಡ್ಕರ್ ಅವರು. ಹಲವು ದೇವಾಲಯಗಳಲ್ಲಿ
ಅಷ್ಪೃಶ್ಯತೆ ತೊಲಗಿಸಲು ಸಾವಿರಾರು ಜನರನ್ನು ಶಾಂತಿಯುತವಾಗಿ ಸೇರಿಸಿ ದೇವಾಲಯ ಪ್ರವೇಶಕ್ಕೆ ಸಿದ್ಧಪಡಿಸಿದ್ದರು. ಅದೇ ಕಾಲದಲ್ಲಿ ಕೋರ್ಟ್ ಕೆಳವರ್ಗದವರು ದೇವಾಲಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದು ಜಾರಿಗೆ ತಂದಾಗ ಅಲ್ಲಿಯೇ ಬಿಟ್ಟರು.
ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಲು, ಅಂಬೇಡ್ಕರ ಅವರು ಸಾಕಷ್ಟು ಸಮಸ್ಯೆ, ಕಷ್ಟಗಳನ್ನು. ಅನುಭವಿಸಿದ್ದಾರೆ,ಅವೆಲ್ಲದರ ಪರಿಣಾಮವಾಗಿ ಕರಡು ಸಮಿಯ ಅಧ್ಯಕ್ಷರನ್ನಾಗಿ ಮಾಡಿ ಬಾಬು ರಾಜೆ ದ್ರ ಪ್ರಸಾದ್ ಅವರಿಗೆ ಕರಡು ಪ್ರತಿಯನ್ನು ನೀಡಿದರು.
ಕಾರ್ಯಕ್ರಮದ ಅಥಿತಿಯಾಗಿ ಭಾಗವಹಿಸಿ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ಚಿನ್ನಸ್ವಾಮಿ ಸೋಸಲೆ ಮಾತನಾಡಿ, ಬೇರೆಯವರು ಯಾರೆಂದು ನನಗೆ ಗೊತ್ತಿರುತ್ತದೆ ಆದರೆ ನಾವು ಏನು ಎಂಬುದನ್ನು ತಿಳಿಯುವ ಪರಿಪಾಠ ತಿಳಿಯುವುದಿಲ್ಲ. ದೇಹದಲ್ಲಿ ಅಂಬೇಡ್ಕರ್ ಆಶಯ ಇಟ್ಟುಕೊಂಡು ಹೊರಭಾಗದಲ್ಲಿ ವಿರೋಧಿ ಇಟ್ಟುಕೊಂಡರೆ ಅದು ಸಾಹೇಬರ ಅವರಿಗೆ ಮಾಡಿದ ಅಲಮಾನ. ಧರ್ಮದ ಅರಿವನ್ನು ಬಿಟ್ಟು ಅಧರ್ಮದ ಕಡೆ ಮನಸ್ಸು ಮಾಡಿರುವುದು ಅಜ್ಞಾನದ ಪರಮಾವಧಿಯಾಗಿದೆ.
ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಆಮೇಡ್ಮೆಂಟ್ ಬಗ್ಗೆ ಯಾರಿಗೂ ಅರಿವಿಲ್ಲ, ಪ್ರಜಾಪ್ರಭುತ್ವದಲ್ಲಿ ಧರ್ಮ ಸೋತು ಜಾತಿ ಮಾತ್ಮಾಡಿತ್ತಿದೆ. ರಾಷ್ಟ್ರೀಯತೆ ಎಂದರೆ ಯಾರು ರಾಷ್ಟ್ರಕ್ಕಾಗಿ ದುಡಿಯುತ್ತಾರೋ ಅದು ರಾಷ್ಟ್ರೀಯತೆ ಆಗಿರುತ್ತದೆ. ಜಲಾಸ್ಪೃಶ್ಯತೆ ಬಗ್ಗೆ ಅಂಬೇಡ್ಕರ ಅವರು ಬೃಹತ್ ಹೋರಾಟ ಮಾಡಿದ್ದಾರೆ, ಜಲಿಯನ್ ವಾಲಾಬಾಗ್ ಗಿಂತಲೂ ಸಹಾ ನೂರರಷ್ಟು ಹೆಚ್ಚು ಒಟ್ಟು ಇದೆ, ಸಂಸ್ಕೈರವನ್ನು ಕಲಿತು ಮನುಸ್ಮೃತಿಯನ್ನು ಸುಡುವ ಮೂಲಕ ತೊಲಗಿಸಿದವರು ಅಂಬೇಡ್ಕರ್, ಮುಸ್ಲಿಂ, ಕ್ರಿಶ್ಚಿಯನ್ ,ಬೌದ್ಧ ಹೀಗೆ ಎಲ್ಲ ಧರ್ಮಕ್ಕೂ ಒಂದು ಚೌಕಟ್ಟು, ಬದ್ಧತೆ ಇದೆ, ಆದರೆ ಹಿಂದೂಧರ್ಮಕ್ಕೆ ಯಾವುದೇ ಬದ್ಧತೆ, ಚೌಕಟ್ಟು ಇಲ್ಲದಿರುವುದು ಎದ್ದುಕಾಣುತ್ತದೆ ಅದಕ್ಕೆ ಪ್ರಮುಖ ಕಾರಣ ಅಸಂಖ್ಯಾತ ಜಾತಿಗಳ ಸಾಗರ.
ದೇವಾಲಯಗಳಲ್ಲಿ ಕಣ್ಣು ಮುಚ್ಚಿಕೊಂಡು ದೇವರಿಗೆ ಪ್ರಾರ್ಥನೆ ಮಾಡುತ್ತಾರೆ, ಆದರೆ ಸಂವಿಧಾನವನ್ನು ಕನ್ನು ಮುಚ್ಚಿಕೊಂಡು ಅಲ್ಲ ಕಣ್ಣು ತೆರೆದು ನೋಡಿದಾಗ ಮಾತ್ರ ಅದರ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಕೆಲಸವಾಗುತ್ತದೆ ಎಂದರು.
ನಿಗಮದಲ್ಲಿ ಉದ್ಯೋಗಿಗಳ ಮಕ್ಕಳು sslc ಹಾಗು ಪಿಯುಸಿ ಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ನೂರಾರು ಮಕ್ಕಳಿಗೆ 5 ಗ್ರಾಂ ಚಿನ್ನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಇಲಾಖೆಯ ಆಯುಕ್ತರಾದ ಗೌರವ ಗುಪ್ತ, ಸಂಘದ ಅಧ್ಯಕ್ಷರಾದ ಚಂದ್ರಶೇಕರ್ ,ಭೀಮಯ್ಯ ನಾಯಕ್,, ದಿವಾಕರ್, ನಾಗರಾಜ್, ಮಂಜು, ಮಿರ್ಜಾ ಕುಮಾರ್ ಸೇರಿ ಹಲವರು ಭಾಗಿ.