ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಅಭೂತ ಪೂರ್ವವಾಗಿ ಗೆಲುವನ್ನು ಸಾಧಿಸಿದ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರಿಂದ 101 ತೆಂಗಿನ ಕಾಯಿ ಈಡುಗಾಯಿ ಒಡೆಯುವ ಮೂಲಕ ಹರಕೆ ತೀರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಅವರು ತಿಳಿಸಿದರು.
ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯ ಜಲಿಗೇರಮ್ಮ ದೇವಸ್ಥಾನದ ಮುಂದೆ 101 ತೆಂಗಿನ ಕಾಯಿ ಹರಕೆ ಈಡುಗಾಯಿ ಒಡೆದು ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದವರು, ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟದಿಂದ ಅಭೂತಪೂರ್ವಕವಾಗಿ ರಾಜ್ಯದಲ್ಲಿ ಅತಿ ಹೆಚ್ಚು ಸೀಟುಗಳನ್ನು ಗೆಲ್ಲುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಾಲ್ಕನೇ ಬಾರಿಗೆ ಪ್ರಧಾನಿ ಮಾಡಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಜೆಡಿಎಸ್ ಗರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಕೃಷಿ ಖಾತೆಯನ್ನು ನೀಡಿ ರೈತರ ಗುದ್ದಾರಕ್ಕೆ ಹಾಗೂ ಸಮಸ್ಯೆಗಳಿಗೆ ಪರಿಹಾರ ನೀಡುವ ಏಕೈಕ ವ್ಯಕ್ತಿಯನ್ನಾಗಿ ಪರಿಗಣಿಸಬೇಕೆಂದು ಪ್ರಧಾನ ಮಂತ್ರಿ ಅವರಲ್ಲಿ ಜೆಡಿಎಸ್ ಕಾರ್ಯಕರ್ತರು ಮನವಿ ಮಾಡಿಕೊಂಡರು. ದಿನದಲ್ಲಿ ಕುಮಾರಸ್ವಾಮಿಯವರಿಗೆ ಕೃಷಿ ಮಂತ್ರಿ ನೀಡಿದರೆ ರೈತರಿಗೆ ಆಗುತ್ತಿರುವ ಸಮಸ್ಯೆಗಳು ತೊಂದರೆಗಳ ಬಗ್ಗೆ ಅವಲೋಕಿಸಿ ದಿಟ್ಟ ಆಳ್ವಿಕೆ ಮಾಡಲಿದ್ದಾರೆ ಎಂದು ಅಭಿವ್ಯಕ್ತಪಡಿಸಿದರು.
ಇನ್ನು ಇದೆ ವೇಳೆ ಜೆಡಿಎಸ್ ಸೇವಾದಳದ ರಾಜ್ಯಧ್ಯಕ ಬಸವರಾಜ ಪದಯಾತ್ರೆಯವರು ಮಾತನಾಡಿ, ಚುನಾವಣೆಯಲ್ಲಿ ಕಾರ್ಯಕರ್ತರು ಬಯಸಿದ್ದನ್ನು ಹೆಚ್ಡಿ ಕುಮಾರಸ್ವಾಮಿಯವರು ನೆರವೇರಿಸಿದ್ದಾರೆ. ಕೇಂದ್ರದಲ್ಲಿ ಮೋದಿ ಸಂಪುಟದಲ್ಲಿ ಕುಮಾರಸ್ವಾಮಿಯವರಿಗೆ ಕೃಷಿ ಖಾತೆಯನ್ನು ನೀಡುವ ಮೂಲಕ ರೈತರ ಆಶಾದಾಯಕ ವ್ಯಕ್ತಿಯನ್ನಾಗಿ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಜಯಂತಿ ಮಾಡಿಕೊಂಡರು ಅಲ್ಲದೆ ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಅವರು ಮಣ್ಣಿನ ಮಗನಾಗಿ ಕೃಷಿಕರ ಬಗ್ಗೆ ಅಪಾರವಾದಂತ ಕಾಳಜಿ ಬಂದಿದ್ದ ಧೀಮಂತ ನಾಯಕನಾಗಿದ್ದರು ಎಂದು ಸ್ಮರಿಸಿಕೊಂಡರು.
ಇನ್ನು ಕಾರ್ಯಕ್ರಮದ ಹರಕೆ ಈಡೇರಿಕೆಯ ನೇತೃತ್ವವನ್ನು ವಹಿಸಿದ ಜೆಡಿಎಸ್ ನ ಯುವ ಘಟಕದ ಮುಖಂಡ ಹಾಗು ಸಂಘದ ಪ್ರಧಾನ ಕಾರ್ಯದರ್ಶಿ ಸುಗಮ್ ಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಮ್ಮ ಊಹೆಗಳನ್ನು ಪುಡಿಪುಡಿ ಮಾಡಿದ್ದಾರೆ, ಈ ಮೂಲಕ ಚುನಾವಣೆಯಲ್ಲಿ ಗೆದ್ದಿದ್ದಾರೆ, ಗೆಲ್ಲುವುದಕ್ಕೂ ಮುನ್ನ ಕರ್ನಾಟಕ ಜಾತ್ಯತೀತ ಜನತಾ ಯುವಶಕ್ತಿ ಸಂಘದಿಂದ ದೇವಾಲಯದಲ್ಲಿ ಹರಕೆಯನ್ನು ಮಾಡಿಕೊಳ್ಳಲಾಗಿದ್ದು ಅದನ್ನು ಈಗ ಈಡೇರಿಸಿದ್ದೇವೆ ಎಂದರು.
ಮುಂದೆ ದಿನಗಳಲ್ಲಿ ಕೇಂದ್ರದಲ್ಲಿ ಕುಮಾರಸ್ವಾಮಿಯವರಿಗೆ ಕೃಷಿ ಖಾತೆಯನ್ನು ನೀಡುವ ಮೂಲಕ ರಾಜ್ಯದ ಕೃಷಿಕರ ಅಭಿವೃದ್ಧಿಗೆ ಮೋದಿಯವರು ಸಹಕಾರ ನೀಡಬೇಕೆಂದು ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಕಾರ್ಯಕರ್ತರ ಎಲ್ಲರು ಸೇರಿಕೊಂಡು ಮನವಿ ಮಾಡಿಕೊಂಡರು.
ಹರಕೆ ತೀರಿಸುವ ಕಾರ್ಯಕ್ರಮದಲ್ಲಿ ಜೆಡಿಎಸ್ ನಗರ ಘಟಕದ ಉಪಾಧ್ಯಕ್ಷರಾದ ರೇವಣ್ಣ, ಚಂದ್ರಶೇಖರ್, ಹನುಮಂತಪ್ಪ, ಸಂಘದ ಅಧ್ಯಕ್ಷರಾದ ಲಿಂಗರಾಜು ಶಿವಕುಮಾರ್ ರಂಗಪ್ಪ ನಾಯಕ ಚಂದ್ರಶೇಖರ್ ನಿರಂಜನ್ ಎಲ್ಲಪ್ಪ ಮಹಿಳಾ ರಾಜ್ಯ ಘಟಕದ ರಾಜ್ಯಾಧ್ಯಕ್ಷ ಪವಿತ್ರ ಸೇರಿದಂತೆ ಸಂಘದ ಪದಾಧಿಕಾರಿಗಳು ಇದೆ ವೇಳೆ ಉಪಸ್ಥಿತರಿದ್ದರು.