ಬೆಂಗಳೂರು: ಜೆಇಇ ಅಡ್ವಾನ್ಸಡ್ 2024 ಫಲಿತಾಂಶದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ ಎಲೆನ್ ಕರಿಯರ್ ಇನ್ಸ್ಟಿಟ್ಯೂಟ್ ಮಕ್ಕಳ ವಿಜಯೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡಿಕೊಳ್ಳಲಾಯಿತು ಎಂದು ಎಲಿನ್ ಸಂಸ್ಥೆಯ ದಕ್ಷಿಣ ಭಾರತ ವಲಯವು ಮುಖ್ಯಸ್ಥರಾದ ಮಹೇಶ್ ಯಾದವ್ ತಿಳಿಸಿದ್ದಾರೆ.
ಈ ಸಂಬಂಧ ಜಯನಗರ ಮೂರನೇ ಬ್ಲಾಕ್ ನಲ್ಲಿರುವ ಎಲೆ ನ್ ಕೆರಿಯರ್ ಇನ್ಸ್ಟಿಟ್ಯೂಟ್ ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಅಭಿನಂದಿಸಿ ಮಾತನಾಡಿದರು. ಒಟ್ಟು 5 ವಿದ್ಯಾರ್ಥಿಗಳು ಉನ್ನತ 100 ಶ್ರೇಣಿಯಲ್ಲಿ ಉತ್ತಮ ಸ್ಥಾನವನ್ನು ಗಳಿಸಿದ್ದಾರೆ, ವಿದ್ಯಾರ್ಥಿಗಳ ಈ ಯಶಸ್ಸಿನ ಸಾಧನೆಯಲ್ಲಿ ಸಂಸ್ಥೆಯ ಸಮರ್ಪಣೆ ಮತ್ತು ಶ್ರೇಷ್ಠತೆಯು ಒಳಗೊಂಡಿದೆ. ಪ್ರತಿಷ್ಠಿತ ಐಐಟಿ ಮದ್ರಾಸ್ ಸಂಸ್ಥೆಯು ಜೆಇಇ ಅಡ್ವಾನ್ಸಡ್ 2024 ಫಲಿತಾಂಶವನ್ನು ಈಗಾಗಲೇ ಬಿಡುಗಡೆ ಮಾಡಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಎಲೆನ್ ಕರಿಯರ್ ಇನ್ಸ್ಟಿಟ್ಯೂಟ್ ಈ ವರ್ಷವೂ ಅಸಾಧಾರಣ ಫಲಿತಾಂಶದಿಂದ ತನ್ನ ಸಾಮರ್ಥ್ಯವನ್ನಯ ಸಾಬೀತು ಪಡಿಸಿದೆ.
1.AIR 15 : ಷಾನ್ ಥಾಮಸ್ ಕೋಶೈ (2ನೇ ತರಗತಿ )
2.AIR 30 : ಸಾಗರ್. ವಿ (3ನೇ ತರಗತಿ )
3 AIR 36 : ವಿದೀಪ್ ರೆಡ್ಡಿ (3ನೇ ತರಗತಿ )
4 AIR .37 : ಆಂಶುಲ್ ಗೋಯಲ್ (2ನೇ ತರಗತಿ)
5 AIR .80 : ಅಭಿನವ್ ಪಿ.ಜೆ (4ನೇ ತರಗತಿ ) ತಮ್ಮದ ಆದಂತಹ ಸಾಧನೆಯನ್ನು ಮಾಡಿ ರಾಜ್ಯ ದೇಶಕ್ಕೆ ಹೆಸರು ತಂದಿದ್ದಾರೆ.
ಇನ್ನು ಹಲವಾರು ವಿಧ್ಯಾರ್ಥಿಗಳು ಉನ್ನತ 500 ಶ್ರೇಣಿಯಲ್ಲಿ ಸ್ಥಾನಗಳಿಸಿರುವುದು ಸಂಸ್ಥೆಯ ಶ್ರೇಷ್ಠತೆಯನ್ನು ತೋರಿಸಿದೆ. ವಿಧ್ಯಾರ್ಥಿಗಳ ಅಧ್ಬುತ ಫಲಿತಾಂಶವು ಅವರ ಕಠಿಣ ಪರಿಶ್ರಮ, ನಿರ್ಣಯ, ಪೋಷಕರ ಬೆಂಬಲ. ಹಾಗು ಎಲೆನ್ ಸಂಸ್ಥೆಯ ಅನುಭವಿ ಅಧ್ಯಾಪಕರ ಸ್ವಯಂ ಕೌಶಲ್ಯ ಪೋಷಕರ ಎಲೆನ್ ಸಂಸ್ಥೆಯ ಮೇಲಿರುವ ಪೋಷಕರ ನಂಬಿಕೆಗೆ ಮತ್ತು ಎಲೆನ್ ಅನುಭವಿ ಅಧ್ಯಾಪಕರ ಗಮನಾರ್ಹ ಸಾಧನೆ ಮತ್ತು ಮಾರ್ಗದರ್ಶನಕ್ಕೆ ತನ್ನ ಹೃತ್ಪೂರ್ವಕ ಅಭಿನಂದನೆಯನ್ನು ವ್ಯಕ್ತಪಡಿಸಿದ್ದಾರೆ.
ಎಲೆನ್ ಕರಿಯರ್ ಇನ್ಸ್ಟಿಟ್ಯೂಟ್ ಬೆಂಗಳೂರು ತನ್ನ ಶೈಕ್ಷಣಿಕ ಶ್ರೇಷ್ಠತೆಯ ನಿರಂತರ ಮಾನದಂಡದಿಂದ ವಿಧ್ಯಾರ್ಥಿಗಳನ್ನು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತಿದೆ.ಎಲೆನ್ ಕರಿಯರ್ ಇನ್ಸ್ಟಿಟ್ಯೂಟ್ ಬೆಂಗಳೂರು ಅತ್ಯುತ್ತಮ ಶ್ರೇಣಿ ಸಾಧಿಸಿರುವ ಎಲ್ಲಾ ವಿಧ್ಯಾರ್ಥಿಗಳಿಗೆ ಮನಃಪೂರ್ವಕ ಅಭಿನಂದನೆಯನ್ನು ಮತ್ತು ತುಂಬು ಹೃದಯದ ಹಾರೈಕೆಯನ್ನು ವ್ಯಕ್ತಪಡಿಸಿದೆ.
ಜೇಇಇ ಪರೀಕ್ಷೆಯಲ್ಲಿ ದೇಶಕ್ಕೆ ರಾಜ್ಯಕ್ಕೆ ಹೆಸರು ತಂದಿರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು, ಜಿಎ ಪರೀಕ್ಷೆಯನ್ನು ನಾವು ಬಹಳ ಸಲವಾಗಿ ಅರ್ಥಮಾಡಿಕೊಂಡು ಅಲ್ಲವೇ ದಿನನಿತ್ಯದ ಕಠಿಣ ಪರಿಶ್ರಮದಿಂದ ಪರೀಕ್ಷೆ ಬರೆಯುವ ಮೂಲಕ ಸ್ವಲ್ಪ ಮಟ್ಟಿಗೆ ಸಾಧಿಸಿದ್ದೇವೆ ಎನ್ನುವ ಗುರಿಯನ್ನು ಹೊಂದಿದ್ದೇವೆ ಎಂದರು, ಅವಿರತ ಪರಿಶ್ರಮ ಹಾಗೂ ಸಂಸ್ಥೆಯ ಅಧ್ಯಾಪಕರ ಪರಿಶ್ರಮದಿಂದ ಜೇಇಇ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು, ಅದೇ ರೀತಿ ನಾವು ಪೋಷಕರು ಸಹ ಸಂಸ್ಥೆಗೆ ನಿರಂತರವಾಗಿ ಸಂಪರ್ಕ ಸಾಧಿಸಿ ಮಕ್ಕಳ ಭವಿಷ್ಯದ ಬೆಳವಣಿಗೆಯ ಬಗ್ಗೆ ಹಾಗೂ ಅಧ್ಯಯನದ ಬಗ್ಗೆ ಕಾಳಜಿ ವಹಿಸಿದ್ದು ಮತ್ತೊಂದು ವಿಶೇಷವಾಗಿದೆ ಎಂದುರು, ಮುಂದೆ ಮೆಡಿಕಲ್ ನಲ್ಲಿ ಅಧ್ಯಯನ ಮಾಡಿ ಉತ್ತಮ ಸಾಧನೆ ಮಾಡಲಾಗುತ್ತದೆ ಎಂದು ಇದೆ ವೇಳೆ ಮಕ್ಕಳ ತಮ್ಮ ಕನಸನ್ನು ತಿಳಿಸದರು.
ಜೇಇಇ ಅಡ್ವಾನ್ಸ್ಡ್ 2024ರ ಪರೀಕ್ಷೆಯಲ್ಲಿ ಟಾಪರ್ ಆಗಿರುವ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಲಾಯಿತು.