ಹಾಸನ : ಗಿಡಮರಗಳಿದ್ದರೆ ನಾವು, ಹಸಿರೀಕರಣ ಇಂದು ಬಹಳ ಅಗತ್ಯವಾಗಿದೆ. ಪರಿಸರ ನೈರ್ಮಲ್ಯ ಹಾಗೂ ಪ್ರಕೃತಿ ಕಾಳಜಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಜೆ.ಪಿ.ಡೆವಲರ್ಸ್ ಅಂಡ್ ಬಿಲ್ಡರ್ ಮಾಲಿಕ ನಟೇಶ್ ದಾಸರಕೊಪ್ಪಲು ಭಿಪ್ರಾಯಪಟ್ಟರು.
ಅವರು ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೆಂಪೇಗೌಡ ಲೇಔಟ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಕೆಂಪೇಗೌಡ ಲೇಔಟ್ ನಿವಾಸಿಗಳು ಸ್ವಯಂ ಪ್ರೇರೇತರಾಗಿ ಬಡಾವಣೆಯ ಪ್ರಗತಿ ಹಾಗೂ ಹಸಿರೀಕರಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಇಲ್ಲಿನ ರಸ್ತೆಯ ಇಕ್ಕೆಲಗಳು ಮತ್ತು ಪಾರ್ಕಿನ ಜಾಗಗಳಲ್ಲಿ ಇವತ್ತು ವಿವಿಧ ಗಿಡಗಳನ್ನು ನೆಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಗಿಡಗಳನ್ನು ಹಾಕುವುದಕ್ಕಿಂತ ಅವುಗಳನ್ನು ಪೋಷಿಸುವುದು ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಈ ಕೆಲಸವನ್ನು ಇಲ್ಲಿನ ನೂತನ ಅಭಿವೃದ್ಧಿ ಸಮಿತಿ ನಿರ್ವಹಿಸುತ್ತದೆ ಎಂಬ ಭರವಸೆಯಿದೆ ಎಂದರು.
ಬಡಾವಣೆಯ ಮುಖ್ಯ ರಸ್ತೆ ಸೇರಿದಂತೆ ಅಡ್ಡರಸ್ತೆ, ಪಾರ್ಕಿನ ಬದಿಗಳಲ್ಲಿ ಮಹಾಗನಿ, ಹಲಸು, ಬೇವು, ಹೊಂಗೆ, ಕೂಳಿ, ನೇರಳೆ, ತ್ಯಾಗ, ಹಿಪ್ಪೆ, ಪಾಮ್, ಸಿಲ್ವರ್, ಹೆಬ್ಬೇವು ಮುಂತಾದ ೨೦೦ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಕೆಂಪೇಗೌಡ ಲೇಔಟ್ ಅಭಿವೃದ್ಧಿ ಸಂಘದ ಅಧ್ಯಕ್ಷ ರಘು ಜಿ.ಸಿ, ಕಾರ್ಯದರ್ಶಿ ತೋಟಪ್ಪ ಎಂ, ಖಜಾಂಚಿ ಎಸ್.ಆರ್.ಕಿರಣ್, ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಎಚ್.ಜಿ.ಕಾಂಚನಮಾಲ, ಆರ್.ಜಿ.ಗಿರೀಶ್, ರಂಗಭೂಮಿ ಕಲಾವಿದ ಜಯಶಂಕರ್ ಬೆಳಗುಂಬ, ನಿವಾಸಿಗಳಾದ ರಾಜಶೇಖರ್, ರಾಧಕೃಷ್ಣ, ರಂಜನ್ ಟಿ.ಎಂ, ಧನಂಜಯ್, ಮಹಾಲಿಂಗಪ್ಪ, ಕೃಷ್ಣಮೂರ್ತಿ, ರಕ್ಷಿತ್, ಲೋಕೇಶ್, ಶ್ರೀನಿವಾಸ್, ಜನನಿ ಫೌಂಡೇಷನ್ ಪದಾಧಿಕಾರಿಗಳಾದ ಎಚ್.ಎಸ್.ಭಾನುಮತಿ, ಸುನೀತ, ಪೂರ್ವಿ, ದುಂಬಿತ್, ಹಾಸನಾಂಬ ನಗರದ ನಿವಾಸಿಗಳಾದ ರಾಜೇಂದ್ರ, ಕೃಷ್ಣಪ್ಪ ಕೆ.ಇ.ಬಿ, ಮಲ್ಲಿಕಾರ್ಜುನ ಮುಂತಾದವರು ಹಾಜರಿದ್ದರು.