ಬೆಂಗಳೂರು: 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಯೋಗದ ಮಹತ್ವವನ್ನು ಸಾರ್ವಜನಿಕರಿಗೆ ಇನ್ನಷ್ಟು ತಲುಪುವ ಉದ್ದೇಶದಿಂದ ಯೋಗ ದಿನದ ಪೂರ್ವಭಾವಿಯಾಗಿ “ಯೋಗೋತ್ಸವ” ಎಂಬ ವಿನೂತನ ಕಾರ್ಯಕ್ರಮವನ್ನು ಆಯುಶ್ ಇಲಾಖೆಯು ಹಮ್ಮಿಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಯೋಗೋತ್ಸವದ ಕರ್ಟನ್ ರೈಸರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು, ಸಕಲ ರೋಗಗಳಿಗೂ ಯೋಗಾಸನ ರಾಮಬಾಣ, ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿದರೆ ಮನಸ್ಸು, ದೇಹದ ಮೇಲೆ ನಿಯಂತ್ರ ಮಾಡಿದರೆ, ಆರೋಗ್ಯ ಸುಧಾರಿಸುತ್ತದೆ. ಪೂರ್ವಜರು ಸೃಷ್ಟಿ ಮಾಡಿರುವ ಪದ್ಧತಿ, ಟ್ರಾನ್ಸ್ಟಿಸಿ ಯೂನಿವರ್ಸಿಟಿ ಅವರು ತಾಳೆಗಾರಿಯಲ್ಲಿ ಇದ್ದ ಯೋಗ ಪದ್ಧತಿ ಬಗ್ಗೆ ಪುಸ್ತಕಗಳನ್ನು ಹೊರತಂದಿದ್ದಾರೆ. ಇದರಿಂದ ನಮ್ಮ ಇಲಾಖೆಯಲ್ಲಿ ಓದುವ, ಸಂಶೋಧನೆ ಮಾಡುವ ಮಕ್ಕಳಿಗೆ ಅನುಕೂಲವಾಗಲಿದೆ, ಆಯುರ್ವೇದದಲ್ಲಿ ಬರುವ ಅಂಶಗಳನ್ನು ಈ ಪುಸ್ತಕದಲ್ಲಿ ಅಡಗಿಸಲಾಗಿದೆ, ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಲಿ ಎಂದು ತಿಳಿಸಿದರು.
ಪ್ರತಿ ವರ್ಷ ಯೋಗ ದಿನಾಚರಣೆ ವಿಧಾನಸೌಧದಲ್ಲಿ ಮಾತ್ರ ಮಾಡುವ ಕೆಲಸವಾಗಬಾರದು, ಬದಲಿಗೆ, ಇಲಾಖೆ ಆಯುಕ್ತರು ಹೊಸ ಚೈತನ್ಯ ತುಂಬುತ್ತಿರುವುದು ಹೆಗ್ಗಲಿಕೆಯಾಗಿದೆ. ನಮಗೂ ಕೂಡ ಯೋಗದ ಮೇಲೆ ನಂಬಿಕೆ ಇದೆ, ಅದರ ಬಗ್ಗೆ ಪರಿಚಯ ಇದೆ ಅದರ ಬಗ್ಗೆ ಕೆಲಸ ಮಾಡುವುದನ್ನು ತೋರಿಸಿದಾಗ ಯೋಗ ಅಭ್ಯಾಸವನ್ನು ಎಲ್ಲರೂ ಮಾಡಲು ಮುಂದಾಗುತ್ತಾರೆ. ಯೋಗ ಪದ್ಧತಿಯನ್ನು ಎಲ್ಲರಿಗೂ ಮುಟ್ಟಿಸುವ ಕೆಲಸ ಆಗಬೇಕು ಎಂದರು.
ಇದರ ಜೊತೆಗೆ ದೇಶದ ಪದ್ಧತಿ, ಯುನಾನಿ, ಅಲೋಪತಿ, ಯೋಗ ಸೇರಿದಂತೆ ಎಲ್ಲವನ್ನೂ ತೆಗೆದುಕೊಂಡು ಒಳ್ಳೆ ಅಂಶಗಳನ್ನು ನೀಡಬೇಕು, ಇವುಗಳ ಯಾವುದನ್ನು ಸಹ ತಿರಸ್ಕರಿಸುವ ಗೋಜಿಗೆ ಹೋಗಬಾರದು, ಎಲ್ಲವೂ ಸಹ ಬೇಕಾಗುತ್ತದೆ ಹಾಗೂ ಸನ್ನಿವೇಶಗಳಿಗೆ ಅನುಕೂಲವಾಗುವಂತೆ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಆಯುಷ್ ಇಲಾಖೆ ಆಯುಕ್ತರಾದ ಡಾ.ಶ್ರೀನಿವಾಸ್ ಮಾತನಾಡಿ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಆಯುಷ್ ಇಲಾಖೆಯಿಂದ ಯೋಗೋತ್ಸವ ದಿನಾಚರಣೆ ಮಾಡಲಿದ್ದಾರೆ. 10 ದಿನಗಳ ಕಾಲ ಕಾರ್ಯಕ್ರಮ ಆಯೋಕನೆ ಮಾಡಲಾಗಿದೆ.
ಇದರಲ್ಲಿ ಅಪಾರ್ಟ್ಮೆಂಟ್ ಸಂಘ, ಯೋಗ ಕೇಂದ್ರಗಳ ಸೇರಿಕೊಂಡು ಆಯುಷ್ ಇಲಾಖೆಯಿಂದ ಸೇರಿಕೊಂಡು ಯೋಗ ಹೇಳಿ ಕೊಡುವ ಕೆಲಸ ಮಾಡಿಕೊಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಾಲ್ , ಜೈನ್ ಸಂಘ, ಯೋಗ ಸಂಸ್ಥೆಗಳು, ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆ, ವ್ಯಾಸ ಸಂಸ್ಥೆ, ಯೋಗ, ಯುನಾನಿ, ಪದ್ಧತಿಯನ್ನು ತಿಳಿಯುವ ವಿಶೇಷ ಕಾರ್ಯವಾಗಿದೆ.
ಯೋಗ ಬಗ್ಗೆ ದೇಶದಲ್ಲಿ ವಿಶೇಷ ಸ್ಥಾನ ಸಿಕ್ಕಿದೆ, ವಿಶ್ವದ ಯಾವ ಮೂಲೆಗೆ ಹೋದರೂ ಸಹಾ ಯೋಗ ಮಾಡುವ ಜನ ಇದ್ದಾರೆ, ಯೋಗ ಸವಿಸ್ತಾರವಾಗಿ ವಿಶ್ವದಲ್ಲಿ ಬೆಳೆದಿದೆ, ಇದರ ಪೂರ್ತಿ ಪ್ರಯೋಜ ನಮ್ಮ ದೇಶದಲ್ಲಿ ಬೆಳೆಸಬೇಕು, ಈ ಬಗ್ಗೆ ಜನರಿಗೆ ಮುಟ್ಟಿಸುವ ಕೆಲಸವಾಗಬೇಕು, 160 ಕೋಟಿ ಜನ ನಮ್ಮ ಆಸ್ತಿ, ಅದಕ್ಕೆ ಕೊಡುಗೆ ನೀಡಬೇಕು, ನಮ್ಮ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಬೇಕು.
ಆರೋಗ್ಯ ಕೆಡಿಸುವ ಯುವಕರಿದ್ದಾರೆ, ಆಹಾರಪದ್ದತಿ ಗಳು ನಮ್ಮ ಆರೋಗ್ಯದ ಆಮೇಲೆ ದುಷ್ಪರಿಣಾಮ ಬೀರುತ್ತದೆ. ಅಂತಹ ಕಡೆ ಎಲ್ಲರೂ ಎಚ್ಚರ ವಹಿಸಬೇಕಾಗಿದೆ.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು /ಸಂಘ ಸಂಸ್ಥೆ ಯೋಗೋತ್ಸವದಲ್ಲಿ ಭಾಗವಹಿಸುತ್ತಿದ್ದು, ಈ 04 ಸಂಸ್ಥೆಗಳಲ್ಲಿ ಸುಮಾರು 4 ಲಕ್ಷ ಮಂದಿ ರಾಜ್ಯಾದ್ಯಂತ ಯೋಗ ಪ್ರದರ್ಶನವನ್ನು ಮಾಡುವುದರ ಮೂಲಕ ಯೋಗೋತ್ಸವನ್ನು ಆಚರಿಸಲಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಆಯುಶ್ಇಲಾಖೆಯಿಂದ ಆರೋಗ್ಯಕರ ಜೀವನ ಶೈಲಿಯ ಕುರಿತು ಮಾಹಿತಿ ಹಾಗೂ ಆಯುಶ್ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುವುದು.
ಬೆಂಗಳೂರಿನಲ್ಲಿನ ಬೆಂಗಳೂರು ಅಪಾಟೆರ್ಂಟ್ ಅಸೋಸಿಯೇಷನ್, ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆ, ಜೈನ್ ಯುನಿರ್ವಸಿಟಿ, ಲೂಲು ಮಾಲ್ ಹಾಗೂ ಮಾಲ್ ಆಫ್ ಏಷ್ಯ, ಸ್ಥಳಗಳಲ್ಲಿ ಯೋಗ ತರಬೇತಿ, ಆಯುಶ್ ವೈದ್ಯ ಪದ್ಧತಿಗಳ ಕುರಿತು ಅರಿವು ಹಾಗೂ ಆಯುಶ್ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯುಶ್ಇಲಾಖಾ ವತಿಯಿಂದ ನಡೆಸಲಾಗುವುದು.
ಈ ಕಾರ್ಯಕ್ರಮಗಳಿಗೆ ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಗಂಗೋತ್ರಿ ಟ್ರಸ್ಟ್, ಶ್ರೀ ಪತಂಜಲಿ ಯೋಗಾಶ್ರಮ ಟ್ರಸ್ಟ್, ಸಂಯಮ ಟ್ರಸ್ಟ್ ಹಾಗೂ ಇನ್ನಿತರ ಖಾಸಗಿ ಯೋಗ ಸಂಸ್ಥೆಗಳು ಅಗತ್ಯ ಸಹಕಾರವನ್ನು ನೀಡಲಿವೆ ಎಂದು ಆಯುಷ್ ಇಲಾಖೆಯ ಯೋಗ ಮತ್ತು ನ್ಯಾಚುರೋಪತಿ ಉಪನಿರ್ದೇಶಕರು ತಿಳಿಸಿದ್ದಾರೆ.