ಬೆಂಗಳೂರು: ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರಿಯಾದ ಜೋಯಾಲುಕ್ಕಾಸ್ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಮತ್ತೆ ವಿಸ್ತರಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೆಜ್ಜೆಗುರುತು ಮೂಡಿಸಿದೆ. ಕಮ್ಮನಹಳ್ಳಿಯಲ್ಲಿ 2ನೇ ಬೃಹತ್ತಾದ ಆಭರಣ ಮಳಿಗೆಯ ಭವ್ಯ ಅನಾವರಣ ನಡೆಯಿತು.
ಕಮ್ಮನಹಳ್ಳಿಯಲ್ಲಿ ಜೋಯಾಲುಕ್ಕಾಸ್ 2ನೇ ಮಳಿಗೆ ಅದ್ದೂರಿ ಉದ್ಘಾಟನೆಯನ್ನು ಚಲನಚಿತ್ರ ನಟಿ ನೇಹಾ ಸಕ್ಸೇನಾ ಮಾಡಿ ಮಾತನಾಡಿ, ಕಮ್ಮನಹಳ್ಳಿಯಲ್ಲಿ 2ನೇ ಜೋಯಲ್ಲೂಕಾಸ್ ಆಭರಣ ಮಳಿಗೆಯಲ್ಲಿ ವಿಶೇಷವಾಗಿ, ವಿನ್ಯಾಸದ, ತರಹವೇರಿ ಆಭರಣಗಳ ಸಂಗ್ರಹ ಇದ್ದು, ಆಭರಣ ಪ್ರಿಯರು ಕೂಡಲೇ ಡಿಸ್ಕೌಂಟ್ ಇರುವ ಆಭರಣಗಳನ್ನು ಕೊಂಡು ಕೊಳ್ಳಬಹುದು. ಸೀಮಿತದ ಅವಧಿಯಲ್ಲಿ ಚಿನ್ನ, ವಜ್ರ, ಅನರ್ಥ್ಯ ಹರಳು ಮತ್ತು ಬೆಳ್ಳಿ ಅಭರಣಗಳ ಮಜೂರಿಯ ಮೇಲೆ ಫ್ಲಾಟ್ ಶೇ. 50% ವಿಶೇಷ ರಿಯಾಯಿತಿಯಾಗಿದೆ. ಗ್ರಾಹಕರು ತಮ್ಮ ನೆಚ್ಚಿನ ಆಭರಣಗಳನ್ನು ಸರಿಗಟ್ಟಲಾಗದ ಬೆಲೆಯಲ್ಲಿ ಖರೀದಿಸಲು ಇದು ಸೂಕ್ತ ಸಮಯವಾಗಿದೆ ಎಂದರು.
ಜಾಗತಿಕವಾಗಿ ಲಕ್ಷಾಂತರ ಜನರ ಹೃದಯವನ್ನು ಸೆರೆಹಿಡಿಯುವ ಮೂಲಕ, ವಿಶ್ವದ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ಬೆಂಗಳೂರಿನ ನಿವಾಸಿಗಳನ್ನು ಅತ್ಯಾಧುನಿಕತೆ ಮತ್ತು ನವೀನ ಶೈಲಿಯ ಆಭರಣಗಳೊಂದಿಗೆ ತನ್ನ ಹೊಸ ಶೋರೂಮ್ನ ಭವ್ಯತೆಯನ್ನು ಅನುಭವಿಸಲು ಆಭರಣಪ್ರಿಯರನ್ನು ಆಹ್ವಾನಿಸುತ್ತಿದೆ.
ಚಿನ್ನ, ವಜ್ರ, ಪ್ಲಾಟಿನಂ, ಅನರ್ಥ್ಯ ಹರಳು, ಮುತ್ತು ಮತ್ತು ಬೆಳ್ಳಿಯಿಂದ ರಚಿಸಲಾದ ಸಾಂಪ್ರದಾಯಿಕ, ಸಮಕಾಲೀನ ಮತ್ತು ಆಧುನಿಕ ವಿನ್ಯಾಸದ ಆಭರಣಗಳ ಸಂಗ್ರಹ ಆಕರ್ಷಣೀಯವಾಗಿದೆ.
ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜೋಯ್ ಆಲುಕ್ಕಾಸ್ ಮಾತನಾಡಿ, ನಮ್ಮ ಉತ್ಸಾಹಿ ಗ್ರಾಹಕರ ಬೆಂಬಲ ಮತ್ತು ನಂಬಿಕೆಗೆ ಧನ್ಯವಾದಗಳನ್ನು ಅರ್ಪಿಸಿದರು. ಕಮ್ಮನಹಳ್ಳಿಯಲ್ಲಿ ನಮ್ಮ ಎರಡನೇ ಬೃಹತ್ ಶೋರೂಮ್ ಅನ್ನು ಅನಾವರಣಗೊಳಿಸಿ ನಾವು ರೋಮಾಂಚನಗೊಂಡಿದ್ದೇವೆ. ಹೊಸ ಪರಿಪೂರ್ಣ ಕರಕುಶಲತೆಯೊಂದಿಗೆ ಅತ್ಯುತ್ತಮ ವಿನ್ಯಾಸವನ್ನು ತರುವ ನಮ್ಮ ಬದ್ಧತೆಯನ್ನು ಹೆಚ್ಚಿಸಿದೆ. ಪ್ರತಿಯೊಬ್ಬ ಗ್ರಾಹಕರಿಗೆ ಅವರ ಖರೀದಿ ಅನುಭವವನ್ನು ಉನ್ನತೀಕರಿಸಲು ಮತ್ತು ಪ್ರತಿಯೊಬ್ಬರೂ ನಮ್ಮ ಪ್ರೀಮಿಯಂ ಸಂಗ್ರಹಗಳನ್ನು ಅನ್ವೇಷಿಸಲು ಮತ್ತು ಉನ್ನತ ಗ್ರಾಹಕ ಸೇವೆಯನ್ನು ಅನುಭವಿಸುವಂತಾಗಲು ಅವರ ಪ್ರತಿ ವಿಶೇಷ ಕ್ಷಣವನ್ನು ನಾವು ಸ್ವಾಗತಿಸುತ್ತೇವೆ.
ಹೊಸ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸೆಲೆಬ್ರಿಟಿಗಳು, ಸಂಸ್ಥೆಯ ಸಿಬ್ಬಂದಿವರ್ಗ ದವರು ಉಪಸ್ಥಿತರಿದ್ದರು.