ಇಂದೋರ್: ಕೆಎಸ್ಆರ್ಟಿಸಿ ನಿಗಮದ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಕ್ಕಾಗಿ ಮಧ್ಯ ಪ್ರದೇಶ ನಾಯಕತ್ವ ಪ್ರಶಸ್ತಿ-2024 ಲಭಿಸಿರುತ್ತದೆ.
ಇಂದೋರ್ ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ಆರ್. ಎಲ್. ಭಾಟಿಯ, ಸಂಸ್ಥಾಪಕರು ವರ್ಲ್ಡ್ ಸಿಎಸ್ಆರ್ ಡೇ ಮತ್ತು ವರ್ಲ್ಡ್ ಸಸ್ಟೈನ್ಬಿಲಿಟಿ ಹಾಗೂ ಡಾ. ಅಲೋಕ್ ಪಂಡಿತ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಫನ್ ಅಂಡ್ ಜಾಯ್ ಮತ್ತು ಕಾರ್ಯ ನಿರ್ವಾಹಣಾ ನಿರ್ದೇಶಕರು ಸಿ.ಎಂ.ಓ ಏಷ್ಯಾ ರವರು, ನಿಗಮಕ್ಕೆ ಪ್ರಶಸ್ತಿ ಪ್ರಧಾನ ಮಾಡಿದರು.
ಕಾರ್ಯಕ್ರಮದಲ್ಲಿ ಜೆ ಆಂಥೋಣಿ ಜಾರ್ಜ್, ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ) ಹಾಗೂ ಜಿ.ಎನ್ ಲಿಂಗರಾಜು, ಮುಖ್ಯ ಭಧ್ರತಾ ಮತ್ತು ಜಾಗೃತಾಧಿಕಾರಿ, ಕ.ರಾ.ರ.ಸಾ.ನಿಗಮ, ಕೇಂದ್ರ ಕಛೇರಿ ರವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.