ಬೆಂಗಳೂರು: ಸ್ನಾತಕೋತ್ತರ, ಪದವಿ, ಡಿಪ್ಲೊಮಾ, ಪಿ.ಜಿ.ಡಿಪ್ಲೊಮಾ ಮತ್ತು ಪ್ರಮಾಣಪತ್ರ ಕಾರ್ಯಕ್ರಮಗಳಿಗೆ ಜುಲೈ 2024 ರ ಅವಧಿಗೆ ಇಗ್ನೋ ಪ್ರವೇಶಾತಿಯನ್ನು ಘೋಷಿಸಿದೆ ಎಂದು ಇಗ್ನೋ ಹಿರಿಯ ಪ್ರಾದೇಶಿಕ ನಿರ್ದೇಶಕಿ,ಡಾ.ಎಸ್.ರಾಧಾ ತಿಳಿಸಿದರು.
ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ ಅವರು, ಇಗ್ನೋ ಎಜುಕೇಷನ್ ಸಂಸ್ಥೆ ಕೆಲವು ಉಪಯುಕ್ತ ಮತ್ತು ಉದ್ಯೋಗ ಆಧಾರಿತ ಹೊಸ ಕಾರ್ಯಕ್ರಮಗಳಾದ ಕನ್ಸ್ಟ್ರಕ್ಷನ್ ಮ್ಯಾನೇಜ್ಮೆಂಟ್ (MBACN), ಲಾಜಿಸ್ಟಿಕ್ಸ್ & ಸಪ್ಲೈ ಚೈನ್ ಮ್ಯಾನೇಜ್ಮೆಂಟ್ (MBALS), ಅಗ್ರಿ ಬಿಸಿನೆಸ್ (MBAABM), ಕಾರ್ಪೊರೇಟ್ ಆಡಳಿತ (MBACG), ಹೆಲ್ತ್ ಕೇರ್ ಮತ್ತು ಆಸ್ಪತ್ರೆ ನಿರ್ವಹಣೆ (MBAHCHM) ಕ್ಷೇತ್ರಗಳಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಗೃಹ ವಿಜ್ಞಾನದಲ್ಲಿ ಸಮುದಾಯ ಅಭಿವೃದ್ಧಿ ಮತ್ತು ವಿಸ್ತರಣೆ ನಿರ್ವಹಣೆ (MSCHSC),ಭಗವದ್ಗೀತಾ ಅಧ್ಯಯನದಲ್ಲಿ ಎಂ.ಎ(MABGS),ವಿಶೇಷ ಶಿಕ್ಷಣದಲ್ಲಿ ಮಾಸ್ಟರ್ ಆಫ್ ಎಜುಕೇಶನ್ (M.Ed)ಇತ್ಯಾದಿ ಸ್ನಾತಕೋತ್ತರ ಕಾರ್ಯಕ್ರಮಗಳು;ಪದವಿ ಹಂತದಲ್ಲಿ ವಿಶೇಷ ಶಿಕ್ಷಣ(B.Ed);ವಿಪತ್ತು, ಅಪಾಯ ಕಡಿತ ಮತ್ತು ನಿರ್ವಹಣೆ (PGDDRRM), ಪುನರ್ವಸತಿ ಮನೋವಿಜ್ಞಾನ(PGDRPC)ಇತ್ಯಾದಿ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮಗಳು; ಕೃಷಿ ವೆಚ್ಚ ನಿರ್ವಹಣೆ (DACM), ತೋಟಗಾರಿಕೆ ಅಭಿವೃದ್ಧಿ(DHORT), ಫ್ಯಾಷನ್ ವಿನ್ಯಾಸ ಮತ್ತು ಚಿಲ್ಲರೆ ವ್ಯಾಪಾರ (DFDR)ಇತ್ಯಾದಿ ಡಿಪ್ಲೊಮಾ ಕಾರ್ಯಕ್ರಮಗಳು ಮತ್ತು ಬಾಲ್ಯದ ವಿಶೇಷ ಶಿಕ್ಷಣವನ್ನು ಸಕ್ರಿಯಗೊಳಿಸುವ ಸೇರ್ಪಡೆ -ಶ್ರವಣ ದೋಷ (CESEIHI), ಸೇರ್ಪಡೆ ಸಕ್ರಿಯಗೊಳಿಸುವಿಕೆ -ದೃಷ್ಟಿ ದೋಷ (CESEIVI), ಸೇರ್ಪಡೆ ಸಕ್ರಿಯಗೊಳಿಸುವಿಕೆ -ಬೌದ್ಧಿಕ ಅಸಾಮರ್ಥ್ಯ (CESEIID) ಇತ್ಯಾದಿ ಪ್ರಮಾಣಪತ್ರ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಆನ್ಲೈನ್ ಅರ್ಜಿಯನ್ನು ಸಲ್ಲಿಸಲು https://ignouadmission.samarth.edu.in/ ಗೆ ಭೇಟಿ ನೀಡಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನ ಕೇಂದ್ರದ ಆಯ್ಕೆಯೊಂದಿಗೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು.
ಪ್ರವೇಶ ಪರೀಕ್ಷೆ ಇಲ್ಲದೆ ನೇರವಾಗಿ ಅಡ್ಮಿಷನ್!
ಪ್ರವೇಶ ಪರೀಕ್ಷೆಯಿಲ್ಲದೆ ಎಂಬಿಎಗೆ ಇಗ್ನೋ ನೇರ ಪ್ರವೇಶವನ್ನು ಒದಗಿಸುತ್ತಿದೆ ಎಂದು ಹಿರಿಯ ಪ್ರಾದೇಶಿಕ ನಿರ್ದೇಶಕಿ ಡಾ.ಎಸ್.ರಾಧಾ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ವಿಶೇಷತೆಯ ಆಯ್ಕೆಯನ್ನು ಆರಿಸಿಕೊಳ್ಳಬಹುದು. ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರುವ SC/ST ವಿದ್ಯಾರ್ಥಿಗಳು ಆಯ್ದ ಕಾರ್ಯಕ್ರಮಗಳಲ್ಲಿ ಶುಲ್ಕ ವಿನಾಯಿತಿಯನ್ನು ಪಡೆಯಬಹುದು ಮತ್ತು ಅರ್ಹ ವಿದ್ಯಾರ್ಥಿಗಳು ಪ್ರವೇಶ ದೃಢೀಕರಣದ ನಂತರ https://scholarships.gov.in/ ಮತ್ತು ವಿದ್ಯಾಲಕ್ಷ್ಮಿ ಪೋರ್ಟಲ್ನಲ್ಲಿ ಶಿಕ್ಷಣ ಸಾಲದಲ್ಲಿ ಭಾರತ ಸರ್ಕಾರದ ಮೆರಿಟ್ ಸ್ಕಾಲರ್ಶಿಪ್ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದರು.