ಬೆಂಗಳೂರು: ಸಾರ್ವಜನಿಕರಿಗೆ ನ್ಯಾಯವನ್ನು ನೀಡಬೇಕಾದರೆ ಪೂರ್ವಪರ ಆಲೋಚನೆ, ವಾದ ಪ್ರತಿವಾದವನ್ನು ಆಲಿಸಿ ನ್ಯಾಯ ನೀಡಿದಾಗ ಮಾತ್ರ ನ್ಯಾಯಾಂಗಕ್ಕೆ ಗೌರವ ಸಿಗುತ್ತದೆ ಎಂದು ಹೈ ಕೋರ್ಟ್ ನ ನ್ಯಾಯಮೂರ್ತಿ ಶಿವ ಶಂಕರೇಗೌಡರು ಅಭಿಮತ ವ್ಯಕ್ತಪಡಿಸಿದರು.
ಬೆಂಗಳೂರಿನ ಭಾರತ್ ಸ್ಕೌಟ್ಸ್ and ಗೈಡ್ಸ್ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಒಕ್ಕಲಿಗ ಬ್ರಿಗೇಡ್ ಸಂಸ್ಥಾಪಕರಾದ ನಂಜೇಗೌಡ ನಂಜುಂಡ ಅವರು ಹಮ್ಮಿಕೊಂಡಿದ್ದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಸಾಗಿ ಸಾಧನೆ ಮಾಡಿದ ಸಾಧಕರಿಗೆ ಅಭಿನಂದನೆ ಹಾಗು ಹೈಕೋರ್ಟ್ ನ ವಿಶ್ರಾಂತ ನ್ಯಾಯ ಮೂರ್ತಿ ಚಂದ್ರಶೇಖರಯ್ಯ ಅವರಿಗೆ ಜೀವಮಾನ ಸಾಧನೆಯ ಅಭಿನಂದನಾ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದವರು, ಒಂದು ಕಾಲದಲ್ಲಿ ನ್ಯಾಯಾಂಗದ ಬಗ್ಗೆ ಗೌರವ ಇತ್ತು, ಆದರೆ ಬರಬರುತ್ತಾ ಎಲ್ಲೋ ಒಂದು ಕಡೆ ಅದು ಕಡಿಯಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ. ನ್ಯಾಯಾಲಯಕ್ಕೆ ಸಮಸ್ಯೆ ಅಂತ ಬಂದವರಿಗೆ ಕಾನೂನಿನ ಅಡಿಯಲ್ಲಿ ಏನೆಲ್ಲ ಸಹಾಯ ಬೇಕು ಅದೆಲ್ಲ ಮಾಡುವುದು ಜಡ್ಜ್ ಗಳ ಕರ್ತವ್ಯ, ಅದನ್ನು ಬಿಟ್ಟು ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಇನ್ನೊಂದು ನ್ಯಾಯ ಮಾಡುತ್ತಿರುವುದು ನ್ಯಾಯಾಂಗದ ಮೇಲೆ ಕಪ್ಪು ಚುಕ್ಕೆ ಬೀಳುತ್ತಿವೆ.
ಆದರೆ ಈಗಿನ ವಕೀಲರು, ಪಿರ್ಯಾದುದಾರರು, ಕೆಲವರು ಕಾನೂನನ್ನ ಕೈಗೆತ್ತಿಕೊಂಡು ಇಸ್ಟ ಬಂದಂಗೆ ವರ್ತನೆ ನಡೆಯುತ್ತಿರುವುದು ನ್ಯಾಯಾಲಯದ ಘನತೆಗೆ ಚ್ಯುತಿ ಬಂದಂತೆ ಆಗುತ್ತಿದೆ. ಹೀಗಾಗಿ ಈಗಿನ ಯುವ ಸಮೂಹ ಅನ್ಯ ಮಾರ್ಗ ಹಿಡಿಯದೇ ಸದ್ಗುಣ ಮಾರ್ಗಗಳಲ್ಲಿ ಓದಾಗ ಮಾತ್ರ ಸನ್ಮಾರ್ಗ ಕಾಣಲು ಸಾಧ್ಯ ಎಂದರು.
ಜೀವ ಮಾನ ಸಾಧನೆ ಪ್ರಶಸ್ತಿ ಪಡೆದು ಹೈ ಕೋರ್ಟ್ ನ ವಿಶ್ರಾಂತ ನ್ಯಾಯ ಮೂರ್ತಿ ಚಂದ್ರಶೇಖರಯ್ಯ ಮಾತನಾಡಿ, ನಾನು ಕೆಳಹಂತದಿಂದ ಮೇಲಿನ ದೊಡ್ಡ ಹುದ್ದೆಗೆ ಬಂದವನು, ಅದರಲ್ಲಿ ಉಪ ಲೋಕಾಯುಕ್ತನಾಗಿ,ರಾಜ್ಯಗ್ರಾಹಕ ವ್ಯಾಜ್ಯ ವ್ಯವಹಾರಗಳ ನ್ಯಾಯಾಧಿಕರಣದ ಅಧ್ಯಕ್ಷರು, ಹೈ ಕೋರ್ಟ್ ನ ನ್ಯಾಯಾಧೀಶರಾಗಿ ವಿವಿಧ ಕಡೆ ಸೇವೆ ಸಲ್ಲಿಸಿದ್ದೇನೆ, ಇದರ ಮಧ್ಯೆ ಸಾಕಷ್ಟು ಏಳು ಬೀಳುಗಳು ನಡೆದಿರುವುದನ್ನು ಅನುಭವಿಸಿಕೊಂಡು ಬಂದಿದ್ದೇನೆ. ಸದಾನಂದ ಗೌಡರು ಸಿಎಂ ಆಗಿದ್ದಾಗ ನನ್ನ ಉಪ ಲೋಕಾಯುಕ್ತರನ್ನಾಗಿ ಮಾಡಿದ್ದುನ್ನು ನೆನೆಪಿಸಿಕೊಂಡರು.
ಅಲ್ಲದೆ ನಾನು ಕಾರ್ಯ ನಿರ್ವಹಿಸುವ ಹುದ್ದೆಯಲ್ಲಿ ಸಾಕಷ್ಟು ಸವಾಲುಗಳು ಎದುರಾದವು, ಅದಕ್ಕೆ ನಾವು ಅಂಜದೆ, ಅದಕ್ಕೆ ಪರಿಹಾರ ಹುಡುಕುವ ದಾರಿಯನ್ನು ಕಂಡುಕೊಂಡು ಸರಿಯಾದ ಮಾರ್ಗದಲ್ಲಿ ಸಾರ್ವಜನಿಕರಿಗೆ ನ್ಯಾಯವನ್ನು ಒದಗಿಸಿದ್ದೇನೆ ಎಂಬ ನಂಬಿಕೆ ನನಗಿದೆ, ಆದರೆ ಅದಕ್ಕೆ ನಾನು ಎಷ್ಟು ಅರ್ಹನು ಎಂಬ ಬಗ್ಗೆ ನನಗಂತೂ ತಿಳಿದಿಲ್ಲ, ಆದರೂ ನನಗೆ ಜೀವ ಮಾನ ಸಾಧನೆ ಮಾಡಿದ್ದೇನೆ ಎಂದು ಸನ್ಮಾನ ಕಾರ್ಯಕ್ರಮ ಮಾಡಿದರು, ಸಂತೋಷವಾಗಿದೆ ಎಂದರು. ಜೀವನದಲ್ಲಿ ಅಸತ್ಯದ ಕಡೆ ವಾಲುವುದು ಬಹಳ ಸುಲಭ, ಆದರೆ ಸತ್ಯ ನೋಡಬೇಕಾದರೆ ಪೇಚಿಗೆ ಸಿಲುಕಿಸಿದಂತೆ ಆಗುತ್ತದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಯಾರು ಕಷ್ಟ ಪಟ್ಟು, ಶ್ರದ್ಧೆ, ಪರಿಶ್ರಮದಿಂದ ಮೇಲೆ ಬರುತ್ತಾರೋ ಅವರಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳು ಇವೆ, ಅದಕ್ಕೆ ಬಸವಣ್ಣ ಹೇಳಿರುವುದು ಕಾಯಕವೇ ಕೈಲಾಸ ಅಂತ, ನಾಗರಿಕ ಸೇವೆಯಲ್ಲಿ ಪಾಸಾದವರು ಸುಮ್ಮನೆ ಆಗಿಲ್ಲ, ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.
ಆಡಂಬರದ ಅಟಕ್ಕೆ ಓದುವುದು ವ್ಯರ್ಥ, ಸಾಧನೆಯ ಗುರಿಯನ್ನು ಇಟ್ಟುಕೊಂಡು ಅಧ್ಯಯನ ಮಾಡಿದರೆ ಒಂದಲ್ಲ ಒಂದು ದಿನ ಫಲ ಸಿಗುತ್ತದೆ, ಅದಕ್ಕೆ ಉಧಾರಣೆ ಸಮಾಜದ ಕೆಲವರು ಐಎಎಸ್ ಪಾಸು ಮಾಡಿರುವುದು ಮುಂದಿದೆ. ನೀವು ಸಹ ಅವರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಒಕ್ಕಲಿಗ ಸಮಾಜ ಮತ್ತಷ್ಟು ಬಲಿಸ್ಟವಾಗಲು ಕಾರಣವಾಗುತ್ತದೆ. ಮಂಡ್ಯದಲ್ಲಿ ಈ ಭಾರಿ ಸಾಕಷ್ಟು ಸಂಖ್ಯೆಯಲ್ಲಿ UPSC ಯಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ.
ಮಹಾರಾಷ್ಟ್ರದಲ್ಲಿ ಡಿಸಿ ಯಾಗಿರುವ ಪ್ರದೀಪ್ ಪ್ರಭಾಕರ್, ಹಾಗು ಮಂಜು ಶ್ರೀ ಅವರು ಕೆಳಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾರು ಮಾಡಲು ಮುಂದೆ ಬಾರದೆ ಇದ್ದಾಗ, ಅಂತಹ ಕೆಲಸವನ್ನು ಮಾಡಿಕೊಟ್ಟಾಗ ಸಂತ್ರಸ್ತರ ಮೊಗದಲ್ಲಿ ಮಂದ ಹಾಸ ಬೆಳಗಿಸಲಾಗಿದೆ, ಎಂದು ಕೆಲ ಕಹಿ ಘಟನೆಗಳನ್ನು ನೆನಪಿಸಿಕೊಂಡರು ಅವರಿಗೆ ಒಕ್ಕಲಿಗ ಯುವ ಬ್ರಿಗೇಡ್ ನಿಂದ ಸನ್ಮಾನಿಸಲಾಯಿತು.
ಇನ್ನು ಇದೇ ವೇಳೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಸಮಾಜದ ಸಾಧಕರಾದ ನಾಗೇಂದ್ರ ಬಾಬು, ಶಶಾಂಕ್, ಸುಮಾ, ನಾವ್ಯಾ, ಚಂದನ್, ಡಾ.ವಿವೇಕ್, ಲೇಖನ್, ರಕ್ಷಿತ್ ಗೌಡ,ರಾಹುಲ್ ಗೌಡ ಅರಿಗೆ ಸನ್ಮಾನವನ್ನು ಮಾಡಲಾಯಿತು.
ಹೊರನಾಡು ಹೆಮ್ಮೆಯ ಸಾಧಕರಾದ ಥೈಲ್ಯಾಂಡ್ ನ ಕಿಂಗ್ ಮೊಂಗ್ ಕುಟ್ ನ ತಂತ್ರಜ್ಞಾನ ವಿವಿಯ ಪ್ರಾಧ್ಯಾಪಕ ಡಾ.ಸಂಜಯ್ ಮಾವಿನ ಕೆರೆ ರಂಗಪ್ಪ,ಕತಾರ್ ನ ಭಾರತೀಯ ಸಾಂಸ್ಕೃತಿಕ ಕೇಂದ್ರ ಸಾಂಸ್ಕೃತಿಕ ಕಾರ್ಯದರ್ಶಿ ಸುಮಾಮಹೇಶ್ ಗೌಡ ಅವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸದಾನಂದ ಗೌಡ ,ಎಂಎಲ್ಸಿ ಸಿಟಿ ರವಿ,ರಾಜಸ್ಥಾನ ಐಜಿಪಿ ರಾಘವೇಂದ್ರ ಸುಹಾಸ್, ಐಪಿಎಸ್ ಅಧಿಕಾರಿ ಸಜೀತ್ ಸೇರಿದಂತೆ ನ್ಯಾಯಾಧೀಶರು, ಒಕ್ಕಲಿಗ ಯುವ ಬ್ರಿಗೇಡ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.