ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಬೆಳ್ಳಿತೆರೆಗೆ ಆರ್.ಚಂದ್ರಕಾಂತ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ ತೂಫಾನ್ ಬರುತ್ತಿದ್ದು, ಅದಕ್ಕೂ ಮುನ್ನ ಬುಧವಾರ ಮೂವೀಯ ಫಸ್ಟ್ ಲುಕ್ ಅನ್ನು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ರಿಲೀಸ್ ಮಾಡಲಾಯಿತು.
ತೂಫಾನ್ ಸಿನಿಮಾದ ಮೂವಿ ಕ್ಲಿಪ್ ಬಿಡು ಬಿಡುಗಡೆ ಬಗ್ಗೆ ನಿರ್ದೇಶಕ ಆರ್ ಚಂದ್ರಕಾಂತ್ ಅವರು ಮಾತನಾಡಿ, ಟೀಸರ್ ಬಿಡುಗಡೆಯಲ್ಲಿ ಕೆಜಿಎಫ್ ಸಿನಿಮಾ ತರ ಇದ್ದರು ಸಹ ಆದರೆ ಕೆಜಿಎಫ್ ಮಾದರಿಯಾಗಿ ಸಿನಿಮಾ ನಿರ್ಮಾಣ ಮಾಡಿಲ್ಲ, ಒಬ್ಬ ತಂದೆ ಹಾಗೂ ಮಗನ ಸಂಬಂಧ ಇರುವ ಬಗ್ಗೆ ಇಡೀ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು. ಇದೊಂದು ಬಿಗ್ ಬಜೆಟ್ ಸಿನಿಮವಾಗಿದ್ದು ಸಿನಿಮಾದ ನಿರ್ಮಾಣ, ಸಂಭಾಷಣೆ,ಲೈಟಿಂಗ್ ಸಂಕಲನ, ಸೇರಿದಂತೆ ಪಾತ್ರಕ್ಕೆ ತಕ್ಕಂತೆ ಪಾತ್ರ ವರ್ಗದವರು, ಸಹಕಲಾವಿದರು ಸಿನಿಮಾದಲ್ಲಿ ಪಾತ್ರಗಳಿಗೆ ಅಚ್ಚುಕಟ್ಟಾಗಿ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ಸಿನಿಮಾ ಸಂಪೂರ್ಣವಾಗಿ ಮುಗಿದಿಲ್ಲ ಇನ್ನು ಮುಂದಿನ ದಿನಗಳಲ್ಲಿ ಇದನ್ನು ಬೇರೆ ಹಂತಕ್ಕೆ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಕನ್ನಡ ಚಿತ್ರರಂಗ ಉಳಿಸಲು ನಿರ್ಮಾಪಕಿ ಮನವಿ
ತೂಫಾನ್ ಸಿನಿಮಾದ ನಿರ್ಮಾಪಕಿಯಾದ ಶರೀಫ ಬೇಗಂ ನಡಾಫ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಕನ್ನಡ ಸಿನಿಮಾಗಳ ಬಗ್ಗೆ ಹಾಗೂ ಚಿತ್ರಮಂದಿರಗಳ ಕುಂದುಕೊರತೆಗಳ ಬಗ್ಗೆ ಮಾತನಾಡುತ್ತಿರುವ ಜನರು ಒಬ್ಬ ಆಟೋ ಡ್ರೈವರ್ ಮಗ ಇವನು ಚಿತ್ರದಲ್ಲಿ ನಾಯಕ ನಟನಾಗಿ ಬೆಳೆದಿರುವ ಹುಡುಗನ ಬಗ್ಗೆ ತೂಫಾನ್ ನಂತಹ ಸಿನಿಮಾಗಳನ್ನು ಕನ್ನಡದ ಅಭಿಮಾನಿಗಳು ಹಾಗೂ ರಾಜ್ಯ ಜನತೆ ಗೆಲ್ಲಿಸುವ ಮೂಲಕ ಕನ್ನಡ ಸಿನಿಮಾ ಹಾಗೂ ಚಿತ್ರರಂಗವನ್ನು ಉಳಿಸಬೇಕಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲ ನಾರಾಯಣಸ್ವಾಮಿ ಮಾತನಾಡಿ, ನಾವು ಇಂತಹ ಸಿನಿಮಾ ಕಾರ್ಯಕ್ರಮಗಳಿಗೆ ಹೆಚ್ಚು ಭಾಗವಹಿಸುವುದಿಲ್ಲ ಕಾರಣ ನಮ್ಮದ ಕಾನೂನಿನ ಕೆಲಸಗಳಿಗೆ ಹೆಚ್ಚು ಹೊತ್ತು ಕೊಡುತ್ತೇವೆ, ಕನ್ನಡ ಚಿತ್ರರಂಗ, ಭಾಷೆ ಹಾಗೂ ಥಿಯೇಟರ್ ಗಳು ಬಗ್ಗೆ ಜನರು ಮುಚ್ಚುತ್ತವೆ,ಅಭಿಮಾನ ಇಲ್ಲ ಎನ್ನುವ ಎಲ್ಲೆಡೆ ಮಾತನಾಡಿಕೊಳ್ಳುವವರೇ ಹೆಚ್ಚು! ಇಂತಹ ಸಂದಿಗ್ತ ಪರಿಸ್ಥಿತಿಯಲ್ಲಿ ಕನ್ನಡ ಭಾಷೆ, ಸಿನಿಮಾಗಳ ಉಳಿಸುವ ಬೆಳೆಸುವ ಬಗ್ಗೆ ಮಾಧ್ಯಮಗಳ ಪಾತ್ರ ಹೆಚ್ಚು ಇದೆ ಎಂದು ತಿಳಿಸಿದರು. ಮಾಧ್ಯಮಗಳಿಂದ ಕನ್ನಡ ಚಿತ್ರರಂಗ, ಕಲಾವಿದರು ಸಿನಿಮಾದಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗದವರು ಉಳಿಯಬೇಕಾದರೆ ಮಾಧ್ಯಮಗಳ ಹಾಗೂ ಮಾಧ್ಯಮದವರ ಪಾತ್ರ ಅತ್ಯಂತ ಅವಶ್ಯಕತೆ ಇದೆ ಎಂದು ಇದೇ ವೇಳೆ ತಿಳಿಸಿದರು.
ಒಂದು ಸಿನಿಮಾ,ನಿರ್ದೇಶಕ ಕ್ಲಿಕ್ ಆಗಲು ಚಿತ್ರಕಥೆ,ಸಂಭಾಷಣೆ ಕಾನ್ಸೆಪ್ಟ್ ಮುಖ್ಯ: ಕವಿರಾಜ್
ತೂಫಾನ್ ಸಿನಿಮಾದ ವಿಡಿಯೋ ಕ್ಲಿಪ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿರಾಜ್ ಅವರು ತೂಫಾನ್ ಸಿನಿಮಾದ ಬಗ್ಗೆ ಮಾತನಾಡಿದರು, ಒಬ್ಬ ಸಿನಿಮಾದ ನಿರ್ದೇಶಕ ಎಂದರೆ ಕೇವಲ ಪೋಸ್ಟರ್ ಡಿಸೈನ್ ಕೆಳಗೆ ಒಂದೆರಡು ಫೋಟೋಗಳಿಗೆ ಕ್ಯಾಪ್ಷನ್ನು ಕೊಟ್ಟು ಚಿತ್ರ ಮಾಡುವುದಲ್ಲ, ಬದಲಿಗೆ ಒಳ್ಳೆ ಚಿತ್ರಕಥೆ, ಸಂಭಾಷಣೆ, ಕಾನ್ಸೆಪ್ಟ್ ಬೇಕಾಗುತ್ತದೆ, ಆಗಿದ್ದಾಗ ಮಾತ್ರ ಒಬ್ಬ ಉತ್ತಮ ನಿರ್ದೇಶಕ ಆಗಲು ಸಾಧ್ಯ, ಅವರು ಒಂದು ಕನಸು ಇಟ್ಟುಕೊಂಡರೆ ನಾನು ನಿರ್ದೇಶಕನಾಗಬೇಕೆಂದು ಕನಸಿತ್ತು ಅದು ಈಗ ನೆರವೇರಿದೆ ಎಂದರು, ಇವೆಲ್ಲವೂ ಸಹ ನಿರ್ದೇಶಕನಲ್ಲಿನ ಗುಣಗಳು ಇರಬೇಕು ಎಂದರು.
ಕೆಜಿಎಫ್, ತೂಫಾನ್ ಸಿನಿಮಾ ಎರಡು ಬೇರೆ ಬೇರೆ: ರೋಷನ್
ಇನ್ನು ತೂಫಾನ್ ಸಿನಿಮಾದ ನಾಯಕನಟ ರೈಸಿಂಗ್ ಸ್ಟಾರ್ ರೋಷನ್ ಮಾತನಾಡಿ, ತೂಫಾನ್ ಸಿನಿಮಾ ಇದೊಂದು ದೊಡ್ಡ ಮಟ್ಟದ ಹಾಗೂ ಬಿಗ್ ಬಜೆಟ್ ಸಿನಿಮವಾಗಿದೆ, ಮೂವಿ ಕ್ಲಿಪ್ ನಲ್ಲಿ ಕೆಜಿಎಫ್ ರೀತಿಯಲ್ಲಿ ತೋರಿಸಿದರು ಸಹ ಆದರೆ ತೂಫಾನ್ ಗೂ ಕೆಜಿಎಫ್ ಸಿನಿಮಾಗು ಯಾವುದೇ ರೀತಿಯ ಸಂಬಂಧ ಇಲ್ಲ ಎಂದರೆ, ಕೆಜಿಎಫ್ ಸಿನಿಮಾ ನೆ ಬೇರೆ ತೂಫಾನ್ ನಿರ್ಮಾಣವೇ ಬೇರೆ. ಹೀಗಾಗಿ ಕನ್ನಡ ನಾಡಿನಲ್ಲಿ ಕನ್ನಡ ಚಿತ್ರರಂಗಕ್ಕೆ ಹಾಗೂ ಥಿಯೇಟರ್ಗಳಿಗೆ ಬೇಡಿಕೆ ಇಲ್ಲದಿರುವ ಸಂದರ್ಭದಲ್ಲಿ ಚಿತ್ರ ಮಂದಿರಗಳಲ್ಲಿ ಇಂಥ ಸಿನಿಮಾನ,ನಮ್ಮನ್ನು ನೀವೆಲ್ಲರೂ ಬೆಳಸಬೇಕಾಗಿದೆ, ಇನ್ನು ಸಿನಿಮಾ ನಿರ್ಮಾಣ ಮುಗಿದಿಲ್ಲ ಇನ್ನು ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯಾಗಿ ತೋರಿಸಲು ಪ್ರಯತ್ನ ಮಾಡುತ್ತೇವೆ, ಸಿನಿಮಾದ ಬಜೆಟ್ ಬಗ್ಗೆ ರಿವೀಲ್ ಮಾಡಲ್ಲ, ಮುಂದಿನ ದಿನಗಳಲ್ಲಿ ನಾವೇ ಹೇಳುತ್ತೇವೆ ಎಂದು ಮಾಧ್ಯಮಗಳ ಮುಂದೆ ಮನವಿ ಮಾಡಿಕೊಂಡರು.
ಇನ್ನು ತೂಫಾನ್ ಸಿನಿಮಾದಲ್ಲಿ ನಾಯಕಿ ನಟಿ ಆಗಿರುವ ಅನುಷಾ ರೈ ಮಾತನಾಡಿ, ನಾನು ಈ ಸಿನಿಮಾದಲ್ಲಿ ಮೂರು ರೋಲ್ಗಳಲ್ಲಿ ಕಾಣಿಸಿಕೊಂಡಿದ್ದೇನೆ, ಮೊದಲನೆಯದು ಪ್ರೀತಿಯ ಲುಲ್ ನಲ್ಲಿ, ಎರಡನೆಯದು ರಗಡ್ ಲುಕ್ ನಲ್ಲಿ ಮತ್ತೊಂದು ರಾಜರ ಆಸ್ಥಾನದಲ್ಲಿರುವ ರಾಣಿಯ ಪಾತ್ರದಲ್ಲಿ ನಟಿಸಿದ್ದೇನೆ ಎಂದರು. ಟಿಫನ್ ಸಿನಿಮಾದಲ್ಲಿ ಇಡೀ ಚಿತ್ರತಂಡ ಹಾಗೂ ನಿರ್ಮಾಪಕರು ನಿರ್ದೇಶಕರು ನಾಯಕ ನಟ ಸೇರಿದಂತೆ ಎಲ್ಲರೂ ಸಹ ನಮಗೆ ಸಾಕಷ್ಟು ಪ್ರೋತ್ಸಾಹವನ್ನು ನೀಡಿದ್ದಾರೆ ಅದೇ ರೀತಿ ಸಿನಿಮಾ ಮೂಡಿಬಂದ ಮೇಲೆ ನಮಗೆ ಮತ್ತಷ್ಟು ಪ್ರೋತ್ಸಾಹ ಬೇಕಾಗಿದೆ ಎಂದು ನಾಡಿನ ಜನರಲ್ಲಿ ಹಾಗೂ ಸಿನಿ ಪ್ರೇಕ್ಷಕರನ್ನು ಮನವಿ ಮಾಡಿಕೊಂಡರು.
ತೂಫಾನ್ ಚಿತ್ರ ತಂಡಕ್ಕೆ ಅಭಿನಂದನೆಗಳ ಸುರಿಮಳೆ
ತೂಫಾನ್ ಸಿನಿಮಾದ ಚಿತ್ರತಂಡಕ್ಕೆ ಬೆಂಗಳೂರಿನಲ್ಲಿರುವ ಮಾಜಿ ಸೈನಿಕರ ತಂಡದಿಂದ ಸಿನಿಮಾ ಬಗ್ಗೆ ಹಾಗೂ ಅನಿಸಿಕೆಗಳನ್ನು ವ್ಯಕ್ತಪಡಿಸಿ ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಅದೇ ರೀತಿ ನಾಯಕನಟ ರೋಷನ್ ಅವರ ಬೆಂಬಲಿಗರು ಹಾಗೂ ಕೋಲಾರದ ಅಭಿಮಾನಿಗಳು ತೂಫಾನ್ ಸಿನಿಮಾದ ಮೂವಿ ಲುಕ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ, ಇಡೀ ಚಿತ್ರ ತಂಡಕ್ಕೆ ಹಾಗೂ ರೋಷನ್ ಅವರಿಗೆ ಅಭಿಮಾನವನ್ನು ಮೆರೆದರು.ಎಸ್ ಆರ್ movies banner ನ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತದೆ.
ಇನ್ನು ತೂಫಾನ್ ಸಿನಿಮಾದ ಮೂವಿ ಕ್ಲಿಪ್ ಬಿಡುಗಡೆ ಕಾರ್ಯಕ್ರಮಕ್ಕೆ ನಿರ್ದೇಶಕ ಸಿಂಪಲ್ಸುನಿ, ನಟ ಪ್ರಮೋದ್,ಸೂರ್ಯ, ವಿಲನ್ ಆಗಿ ಪ್ರವೀಣ್, ವಿಲನ್ ಆಗಿ ಭೀಷ್ಮರಾಮಯ್ಯ, ಪೊಲೀಸ್ ಅಧಿಕಾರಿಯಾಗಿ ಅಶ್ವಿನ್ಹಾಸನ್, ಸಿನಿಮಾ ಸಂಕಲನ ಮಾಡಿದವ ಉಮೇಶ್ ಸೇರಿ ಹಲವಾರು ಸಿನಿಮಾ ಅಭಿಮಾನಿಗಳು ಭಾಗಿಯಾಗಿದ್ದರು.