ಬೆಂಗಳೂರು: ಗ್ರಾಮೀಣದಲ್ಲಿರುವ ಪ್ರತಿಭಾವಂತ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಹಿನ್ನೆಲೆ ಕೃಷಿಕ ಸರ್ವೋದಯ ತರಬೇತಿ ಸಂಸ್ಥೆಯನ್ನು ರಜತೆಯಲ್ಲಿಡೆ ಸ್ಥಾಪಿಸಲಾಗುತ್ತದೆ, ಅದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಹಾಗು ಟ್ರಸ್ಟಿ ತಿಮ್ಮೇಗೌಡ ತಿಳಿಸಿದರು.
ಐಎಎಸ್ ಗೆ ತರಬೇತಿ ನೀಡುವ ನೂತನ ಸಂಸ್ಥೆ ಕೃಷಿ ಸರ್ವೋದಯ ಫೌಂಡೇಶನ್ ಚಂದ್ರಲೇಔಟ್ ನಲ್ಲಿ ಉದ್ಘಾಟನೆಯನ್ನು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಉದ್ಘಾಟನೆ ಮಾಡಿದರು.
ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಆದ್ಯತೆ
ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಹಾಗು ಟ್ರಸ್ಟಿ ತಿಮ್ಮೇಗೌಡ ಮಾತನಾಡಿ, 1992 ರಲ್ಲಿ ಕೃಷಿಕ್ ಸರ್ವೋದಯ ಸಂಸ್ಥೆ ಪ್ರಾರಂಭವಾಯಿತು, ಸಂಸ್ಥೆಯ ಮುಖ್ಯ ಉದ್ದೇಶವೆಂದರೆ ಗ್ರಾಮೀಣದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್ ತರಬೇತಿ ನೀಡುವ ಸಲುವಾಗಿ ಸ್ಥಾಪಿಸಲಾಗಿದೆ, ಈಗಾಗಲೇ ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದು ಸಾಕಷ್ಟು ಜನ, ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಅತ್ಯಂತ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ, ಕರ್ನಾಟಕ ಹಾಗು ಭಾರತದ ಆಡಳಿತ ಸೇವೆಯ ಹುದ್ದೆಯಲ್ಲಿದ್ದಾರೆ. 32 ವರ್ಷಗಳಿಂದ ಇಂತಹ ಸೇವೆಯನ್ನು ಮಾಡಿಕೊಂಡು ಬಂದಿದೆ. ಮುಂದೆಯೂ ಅನೇಕ ಯೋಜನೆಗಳನ್ನು ಹಾಕಿಕೊಂಡು ಬರಲಾಗುತ್ತದೆ ಎಂದರು.
ರಾಜ್ಯದಲ್ಲಿ 6 ಶಾಖೆಗಳಿದ್ದು, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹಾಸನ, ಮಂಡ್ಯ,ತುಮಕೂರುನಲ್ಲಿದೆ, ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಹೊಸ ಶಾಖೆ ತೆರೆಯಲು ಉತ್ಸುಕರಾಗಿದ್ದಾರೆ, 1400 ಜನರಿಗೆ 1 ಕೋಟಿಗಿಂತಲು ಹೆಚ್ಚು ವಿದ್ಯಾರ್ಥಿ ವೇತನ ನೀಡಲಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ಹಾಗು ನಿರಂತರವಾಗಿ ನಡೆಸಿಕೊಂಡು ಹೋಗಲಾಗುತ್ತದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಮಾರ್ಟ್ ಆಗಿ ಓದಿ:ವಿನಯ್ ಕುಮಾರ್
ಇನ್ ಸೈಟ್ ಸಂಸ್ಥೆಯ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ನಾನು ಮೊದಲು ಐಎಎಸ್, kas ಪರೀಕ್ಷೆ ಬರೆದು ಕಡಿಮೆ ಅಂತರಗಳಲ್ಲಿ ಕೆಲಸ ಕಳೆದುಕೊಂಡೆ, ಆಗ ನನಗೆ ಮಾರ್ಗದರ್ಶನ ನೀಡಿದ್ದು ಮೈಸೂರಿನಲ್ಲಿದ್ದ ಕೃಷಿಕ್ ಸರ್ವೋದಯ ಸಂಸ್ಥೆಯಲ್ಲಿ, ನನಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಲು ಸಂಸ್ಥೆಯ ಆಡಳಿತ ಮಂಡಳಿ ಅವಕಾಶ ನೀಡಿದ ಫಲವಾಗಿ ನಾನು ವೆಬ್ಸೈಟ್ ನಲ್ಲಿ ವಿಶೇಷವಾಗಿ ಆನ್ಲೈನ್ ಪ್ರಶ್ನೆಗಳನ್ನು ನೀಡಲು ಮುಂದಾದಾಗ ಹಲವು ವಿದ್ಯಾರ್ಥಿಗಳು ಆನ್ಲೈನ್ ನಲ್ಲಿಯೇ ಟೆಸ್ಟ್ ಬರೆಯುತ್ತಿದ್ದರು, ಆನ್ಲೈನ್ ನಲ್ಲಿಯೇ ಮೌಲ್ಯ ಮಾಪನ ಮಾಡುತ್ತಿದೆ, ಒಂದುಸಲ ನಾನು ಒಂದು ಕೋಚಿಂಗ್ ಕೇಂದ್ರ ಆರಂಭ ಮಾಡಬೇಕೆಂಬ ಆಸೆಯಾದಾಗ ವಿಜಯನಗರದಲ್ಲಿನ ಖಾಸಗಿ ಶಾಲೆಯಲ್ಲಿ ಆರಂಭ ಮಾಡಿದಾಗ 300 ಜನ ನನ್ನ ಬಗ್ಗೆ ಗೊತ್ತುಗುರಿ ಇಲ್ಲದೆ ಒಪ್ಪಿಗೆ ಸೂಚಿಸಿದರು, ಆಗ ನನಗೆ ಒಂದು ಕ್ಷಣ ಭ್ಯಯವಾಗಿತ್ತು, ವಿಶೇಷ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ವರ್ಷದಿಂದ ವರ್ಷಕ್ಕೆ ಫಲಿತಾಂಶ ಹೆಚ್ಚಾಗಿ ಇದೀಗ ಬೆಂಗಳೂರು, ನವದೆಹಲಿ, ಜಮ್ಮು ಶ್ರೀನಗರ, ಧಾರವಾಡದಲ್ಲಿ ಶಾಖೆಗಳನ್ನು ತೆರೆಯಲು ಸಾಧ್ಯವಾಯಿತು, ಮುಂದಿನದಿನಗಳಲ್ಲಿ ದಾವಣಗೆರೆಯಲ್ಲಿ ಮತ್ತೊಂದು ಶಾಖೆ ತೆರೆಯಲು ಚಿಂತಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಮಕ್ಕಳಿಗೆ ಹೇಗೆಲ್ಲಾ ತರಬೇತಿ ನೀಡಬೇಕು, ಕಚೇರಿಯಲ್ಲಿ ಪರೀಕ್ಷೆಗಳು ಹೇಗೆ ನಡೆಯಬೇಕು, ಓದುವ ಅಭ್ಯಾಸಗಳನ್ನು ಹೇಗೆಲ್ಲ ರೂಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಬಹಳ ವಿವರವಾಗಿ ಹೇಳಿದರು. ಪ್ರಸ್ತುತ ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ 4 ರಿಂದ 5 ಜನ ವಿದ್ಯಾರ್ಥಿಗಳು ಅಲ್ ಇಂಡಿಯ ರ್ಯಾಂಕ್ ನಲ್ಲಿ ಪಾಸಾಗಿದ್ದಾರೆ. ವಿವಿಧ ಹುದ್ದೆಯಲ್ಲಿದ್ದಾರೆ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಮಾರ್ಕ್ಸ್ ತೆಗೆಯುವ ಬರದಲ್ಲಿ ಪರಿಷೆಯಲ್ಲಿ ಎಡವಿ ತಪ್ಪು ಮಾಡಿಕೊಳ್ಳುತ್ತಾರೆ, ಅದಕ್ಕೂ ಮುನ್ನ ಭಾಷೆ ಬಗ್ಗೆ ಹಿಡಿತವಿರಬೇಕು, ಇಂಟರ್ವ್ಯೂ ನಲ್ಲಿ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ, ನಮ್ಮ ಸುತ್ತಮುತ್ತಲಿನ ಬಗ್ಗೆಯೇ ಪ್ರಶ್ನೆಗಳನ್ನು ಕೇಳುತ್ತಾರೆ ಅದರ ಬಗ್ಗೆ ಅರಿವಿರಬೇಕು, ಹಗಲು ರಾತ್ರಿ ಕೆಡಿಸಿಕೊಂಡು ಓದುವುದು ಸರಿಯಾದ ಕ್ರಮವಲ್ಲ, ಅದರ ಬದಲಿಗೆ ಸ್ಮಾರ್ಟ್ ಆಗಿ ಅಧ್ಯಯನ ಮಾಡಬೇಕು, ಆಗ ಮಾತ್ರ ನಮ್ಮ ಗುರಿ ಸಾಧಿಸಲು ಸಾಧ್ಯವಾಗುತ್ತದೆ, ಮುಂದಿನ ದಿನಗಳಲ್ಲಿಯೂ ಸಹಾ 100 ಜನರನ್ನು ಸಿವಿಲ್ ಸರ್ವಿಸ್ ನಲ್ಲಿ ತೇರ್ಗಡೆ ಮಾಡಲು ಗುರಿ ಇದೆ, ಅದನ್ನು ಮಾಡುತ್ತೇನೆ ಎಂದು ಮುಂಬರುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅದೇ ರೀತಿ ಕೃಷಿಕ್ ಸರ್ವೋದಯ ಸಂಸ್ಥೆಯ ಜೊತೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದರು.
ಟ್ರಸ್ಟಿಗಳು ಇಳಿ ವಯಸ್ಸಿನಲ್ಲೂ ಹೆಚ್ಚು ಖುಷಿಯಾಗಿದ್ದಾರೆ: ಸ್ವಾಮೀಜಿ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ಟ್ರಸ್ಟ್ ನಲ್ಲಿ ಇಳಿ ವಯಸ್ಸಿನವರ ಸಂಖ್ಯೆ ಹೆಚ್ಚಿದ್ದರೂ ಸಹಾ ಅವರು ಕೆಲಸ ಕಾರ್ಯ ಮಾಡುವಲ್ಲಿ ಎಷ್ಟು ಖುಷಿಯಾಗಿದ್ದಾರೆ. ಬದುಕಿನಲ್ಲಿ ಸುಖವನ್ನು ಬಯಸುವವರು ಕರ್ಮವನ್ನು ಹೆಚ್ಚು ಮಾಡಬೇಕು. ಹೀಗಾಗಿಯೇ ಟ್ರಸ್ಟ್ ನವರು ಹೆಚ್ಚು ಹೆಚ್ಚು ಕರ್ಮವನ್ನು ಮಾಡುತ್ತಿರುವುದರಿಂದ ಹೆಚ್ಚು ಸಂತೋಷವಾಗಿದ್ದಾರೆ. ಅಧಿಕಾರವಿದ್ದಾರೆ ನೊಂದವರಿಗೆ,ಕಣ್ಣೀರನ್ನು ಹೊರೆಸುವ ಕೆಲಸ ಮಾಡಲು ಸಾಧ್ಯ ಅದನ್ನು ಕೃಷಿಕ್ ಸರ್ವೋದಯ ಸಂಸ್ಥೆ ಮಾಡುತ್ತಿದೆ. ಯುವಕರಿಗೆ ತರಬೇತಿ ಕೊಡುವ ಸಂಸ್ಥೆಯನ್ನು ತೆರೆಯುವ ಹುಮ್ಮಸ್ಸನ್ನು ಕೃಷಿಕ್ ಸಂಸ್ಥೆ ಮಾಡುತ್ತಿದೆ. ಒಬ್ಬ ವ್ಯಕ್ತಿ ನಮ್ಮ ಬದುಕನ್ನು ಪೂರೈಸಿದ ಮೇಲೆ ಬೇರೆಯವರಿಗೆ ಅವಕಾಶವನ್ನು ನೀಡಬೇಕು ಎಂದರು. ವಿವೇಕಾನಂದರ ಕಾಲಘಟ್ಟದಲ್ಲಿ ಶ್ರೀಮಂತನೊಬ್ಬ ಹೆಚ್ಚು ಹಣ ಮಾಡಬೇಕು ಎನ್ನುವ ಹುಚ್ಚಿನಿಂದ ಆರೋಗ್ಯ, ಕುಟುಂಬ, ಸಂಬಂಧ ಎಲ್ಲವನ್ನೂ ಕಳೆದುಕೊಂಡಿದ್ದ, ಆತನ ಬಗ್ಗೆ ಪತ್ರಿಕೆಯಲ್ಲಿ ಹೆಚ್ಚು ಸುದ್ದಿ ಬರುತ್ತಿತ್ತು, ಅಂತಹ ವ್ಯಕ್ತಿ ಬಗ್ಗೆ ವಿವೇಕಾನಂದರು ಕುತೂಹಲಬರಿತರಾಗಿ ನೋಡಲು ಹೋದಾಗ ಗಾಡವಾಗಿ ಅಧ್ಯಯನ ಮಾಡುತ್ತಿರುವುದು ಕಂಡುಬಂತು. ಇಂತಹ ಉದಾಹರಣೆಗಳನ್ನು ಹೇಳುವ ಮೂಲಕ ಸಭೆಯಲ್ಲಿದ್ದ ಯುವಕರಿಗೆ ಆತ್ಮ ಸ್ಥೈರ್ಯ ತುಂಬುದ ಕೆಲಸ ಮಾಡಿದರು. ಸೇವೆ ಮಾಡುವುದರಲ್ಲಿ ಮನಸ್ಸಿಗೆ ಹೆಚ್ಚು ತೃಪ್ತಿ ಬರುತ್ತದೆ, ಅಂತಹ ಕೆಲಸವನ್ನು ಕೃಷಿಕ್ ಸಂಸ್ಥೆ ಮಾಡುತ್ತದೆ ಎಂದರು.
ಡಾ.ವೈಕೆ ಪುಟ್ಟಸ್ವಾಮಿ ಗೌಡ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಚಿಕ್ಕಣ್ಣ,ಚಂದ್ರ ಲೇಔಟ್ ಶಾಖೆ ಉಪಾಧ್ಯಕ್ಷ,ಶಿವಣ್ಣ, ರಾಮಚಂದ್ರ, ಆಡಿಟ್ ನಾಗರಾಜು, ಸೇರಿದಂತೆ ಹಲವು ವಿದ್ಯಾರ್ಥಿಗಳು ಸಮಾಜದ ಬಾಂಧವರು ಟ್ರಸ್ಟಿಗಳು ಉಪಸ್ಥಿತರಿದ್ದರು. ಇದೇ ವೇಳೆ 5 ಶಾಖೆಗಳಲ್ಲಿನ ಅಧ್ಯಕ್ಷರಿಗೆ, ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ, ಸಿಬ್ಬಂದಿ ವರ್ಗದವರಿಗೆ ಇದೇ ವೇಳೆ ಸನ್ಮಾನವನ್ನೂ ಮಾಡಲಾಯಿತು.