ಬೆಂಗಳೂರು: ಸಂಘ ಮಾಡುತ್ತಿರುವುದು ಹಣ ಮಾಡುವ ಉದ್ದೇಶವಲ್ಲ, ಬದಲಿಗೆ ಶೋಷಿತ ವರ್ಗಗಳಿಗೆ ಧನಿಯಾಗಿ ಹೆಚ್ಚು ಕೆಲಸ ಮಾಡುತ್ತೇನೆ ಎಂದು ಕರ್ನಾಟಕ ಜೈ ಭೀಮ್ ರಕ್ಷಣಾ ವೇದಿಕೆ ರಾಜ್ಯ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಸ್ ಜಯಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಜೈ ಭೀಮ್ ರಕ್ಷಣಾ ವೇದಿಕೆ ಸಂಘಟನೆಗೆ ಸೇರುವ ಮುನ್ನ ಡಿಎಸ್ಎಸ್ ಸಂಘಟನೆಯಲ್ಲಿ ಕಳೆದ 6 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದೇನೆ, ಅಲ್ಲಿ ನನಗೆ ವೇದಿಕೆ ಸರಿಯಾಗಿ ಕಲ್ಪಿಸಿದ ಕಾರಣ ನಾನು ಆ ಸಂಘಟನೆಯಿಂದ ಹೊರ ಬರಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ನನ್ನ ಹೋರಾಟಕ್ಕೆ ಅಂದಿನ ಸಂಘಟನೆಯಲ್ಲಿ ಯಾವುದೇ ನ್ಯಾಯ ಸಿಗದ ಕಾರಣ ನಾನು ನನ್ನ ಬೆಂಬಲಿಗರೊಂದಿಗೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ಅಭಿಲಾಷೆಯಿಂದ ಕರ್ನಾಟಕ ದಲಿತ ಜೈ ಭೀಮ್ ರಕ್ಷಣಾ ವೇದಿಕೆ ಸಂಘಟನೆಯನ್ನು ಹುಟ್ಟು ಹಾಕಿದ್ದೇನೆ ಎಂದರು.
ಜೈ ಭೀಮ್ ಸಂಘಟನೆ ಮೂಲಕ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಮತ್ತು ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿ ಬಾಳಲು ಇಂತಹ ಸಂಘಟನೆಯನ್ನು ಸ್ಥಾಪಿಸಿದ್ದೇನೆ. ಇದರಲ್ಲಿ ನನಗೆ ಯಾವುದೇ ಹಣ ಅಂತಸ್ತು ಮಾಡುವ ಅಭಿಲಾಷೆ ಇಲ್ಲ, ನಾನೊಬ್ಬ ಸಿವಿಲ್ ಇಂಜಿನಿಯರ್, ಕೊರೋನಕಾಲದಲ್ಲಿ ಸಹ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದೇನೆ, ಎಲೆಮರಿ ಕಾಯಿಯಂತೆ ಮುಖ್ಯ ವೇದಿಕೆಗೆ ಬಾರದೆ ಸಮಾಜದ ಒಳಿತಿಗಾಗಿ ದುಡಿಯುತ್ತೇನೆ ಎಂದರೆ.
ಬೋಗನಹಳ್ಳಿಯಲ್ಲಿರುವ ದೇವಸ್ಥಾನ ಉಳಿವಿಗಾಗಿ, ರಕ್ಷಣೆಗಾಗಿ ಈಗಿನ ಮೊದಲ ಹೋರಾಟ ಮಾಡುತ್ತೇನೆ ಎಂದರು, ನಮ್ಮ ಸಂಘಟನೆಗೆ ಸೇರಲು ಈಗಾಗಲೇ ಸಾವಿರಕ್ಕಿಂತ ಹೆಚ್ಚು ಪುರುಷ ಹಾಗೂ ಮಹಿಳಾ ಪದಾಧಿಕಾರಿಗಳ ಆಗಲು ಬಯಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದಿಂದ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾದ ಕಿರಣ್, ವೇದಿಕೆಯ ಉಪಾಧ್ಯಕ್ಷರಾದ ಅಶೋಕ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.