ಬೆಂಗಳೂರು: ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ ಸಜಾಬಂದಿಗಳನ್ನು ಕರ್ನಾಟಕ ಸರ್ಕಾರದ ಶಿಫಾರಸಿನ ಮೇರೆಗೆ, ರಾಜ್ಯಪಾಲರ ಅಂಗೀಕಾರದೊಂದಿಗೆ ಒಟ್ಟು 77 ಶಿಕ್ಷಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬೆಂಗಳೂರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಿಂದ ಅವಧಿ ಪೂರ್ವ ಬಿಡುಗಡೆ ಮಾಡಿ ಬಿಡುಗಡೆ ಪ್ರಮಾಣ ಪತ್ರವನ್ನು ವಿತರಿಸಿದ್ದೇನೆ ಎಂದು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ತಿಳಿಸಿದರು.
ಬೆಂಗಳೂರು ಕೇಂದ್ರ ಕಾರಾಗೃಹ ಸುಧಾರಣಾ ಸೇವೆ ಇಲಾಖೆಯಿಂದ ಸಜಾಬಂದಿಗಳ ಬಿಡುಗಡೆ ಕಾರ್ಯಕ್ರಮ ಹಾಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವ ಜೈಲು ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ವಿತರಣೆ ಮಾಡಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೃತ್ಯಗಳನ್ನು ಎಸೆಗಿ ಬಂದಿಗಳಾಗಿರುವ ಒಟ್ಟು 77 ಸಜಾ ಕೈದಿಗಳು ಅನೇಕ ವರ್ಷಗಳಿಂದ ಜೀವನವನ್ನು ಜೈಲಿನಲ್ಲಿಯೇ ಕಳೆದು ಇದೀಗ ಬಿಡುಗಡೆಯಾಗುತ್ತಿದ್ದಾರೆ, ಬಿಡುಗಡೆಯಾಗಲಿರುವ ಬಂಧಿಗಳಲ್ಲಿ ಕೇಂದ್ರ ಕಾರಾಗೃಹದಲ್ಲಿ ಒಟ್ಟು 5000 ಜನ ಕೈದಿಗಳಿದ್ದಾರೆ. ಒಂದು ಕಡೆ ಸಂತೋಷ ಮತ್ತೊಂದು ಕಡೆ ಆತಂಕನು ಇದೆ. ಮನುಷ್ಯರಾಗಿ ಜೀವನ ನಡೆಸುವುದು ಬಹಳ ಮುಖ್ಯ, ಕೆಲವೊಂದು ಸಂದರ್ಭದಲ್ಲಿ ಗೊತ್ತಿದ್ದು ಗೊತ್ತಿಲ್ದೆಯೋ ತಪ್ಪು ಮಾಡುತ್ತೇವೆ, ಆ ಕ್ಷಣದಲ್ಲಿ ನಡೆಯುವ ತೀರ್ಮಾನ ನಮ್ಮ ಕೈಯಿಂದ ತಪ್ಪು ಮಾಡಿಸುತ್ತದೆ, ಆ ತಪ್ಪು ನಮ್ಮ ಜೀವನದ ಬದುಕನ್ನೇ ಬದಲಿಸುತ್ತದೆ, ತಪ್ಪುಗಳು ಅರಿವಿಲ್ಲದೆ ಆಗುತ್ತದೆ ಕೈದಿಗಳ ಪಶ್ಚತ್ತಾಪ ಜೀವನ ಬದಲಿಸುತ್ತದೆ ಎಂದರು.
ಜೀವನದ ಬದಲಾವಣೆ ಮಾಡಿಕೊಂಡು ಕೈದಿಗಳು ಸಮಾಜದಲ್ಲಿ ಸಾಕಷ್ಟು ಸುಧಾರಣೆ ಆಗಬೇಕೆಂಬುದೇ ನಮ್ಮ ಬಯಕೆ ಎಂದರು, ಕಾನೂನಿನಲ್ಲಿ ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು, ಯಾರೇ ಪ್ರಭಾವಿಗಳೇ ಆದರೂ ಸಹ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥರೇ, ದೇಶದ ಕಾನೂನು ಎಲ್ಲರಿಗೂ ಒಂದೇ, ಕಾನೂನು ಪಾಲಿಸದಿದ್ದರೆ ಕೊನೆಗೆ ಜೈಲೇ ಗತಿ, ಅಂತಹ ತಪ್ಪುಗಳನ್ನು ಸಾಕಷ್ಟು ಮಂದಿ ಮಾಡಿ ಬಂಧನಕ್ಕೊಳಗಾಗಿದ್ದಾರೆ, ಅದಕ್ಕೆ ಕಾನೂನಿನ ಅಡಿಯಲ್ಲಿ ವರ್ಷಕ್ಕೆ ಎರಡು ಬಾರಿ ಬಿಡುಗಡೆ ಮಾಡುವ ಅವಕಾಶ ಇತ್ತು ಇದೀಗ ಅದನ್ನು ವರ್ಷಕ್ಕೆ ಮೂರು ಬಾರಿ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಲಾಗಿದೆ, ಮನ ಪರಿವರ್ತನೆ ಮಾಡುವ ಮೂಲಕ ಕೇಂದ್ರ ಕಾರಾಗೃಹದ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಜಾ ಬಂದಿಗಳನ್ನು ಬಿಡುಗಡೆ ಮಾಡಬೇಕೆಂದು ಹೇಳಿದ್ದಾರೆ ಎಂದರು.
ಜೈಲಿಗೆ ಇದ್ದುಕೊಂಡು 4 ಡಿಗ್ರಿಗಳನ್ನು ಬಂಧಿತ ಸತೀಶ್ ಎಂಬಾತ ಮಾಡಿರುವುದು ಹೆಮ್ಮೆಯ ಸಂಗತಿ, ಇದರಲ್ಲಿ ಸೂಚಿಸಿದಂತೆ ಆತನ ಮನ ಪರಿವರ್ತನೆ ಆಗಿರುವುದನ್ನು ನೋಡಬಹುದಾಗಿದೆ. ನನ್ನ ತಪ್ಪು ಅರಿವಾಗಿದೆ ಸಮಾಜದಲ್ಲಿ ಮುಂದಿನ ದಿನಗಳಲ್ಲಿ ಉತ್ತಮವಾಗಿ ನಡೆದುಕೊಳ್ಳುತ್ತೇನೆ ಎಂದಿದ್ದಾನೆ ಎಂದು ಆತನ ಬಗ್ಗೆ ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸಿದರು. ಜೀವನ ಬೇಗವಾಗಿ ಹೋಗುತ್ತೆ ಹೊರಗೆ ಹೋದಮೇಲೆ ಮತ್ತೊಂದು ತಪ್ಪು ಮಾಡಬೇಡಿ ಎಂದು ಬಂಧನದಿಂದ ಮುಕ್ತಿ ಹೊಂದಿರುವ ಕೈದಿಗಳಿಗೆ ಬುದ್ಧಿವಾದವನ್ನು ಹೇಳಿದರು.
ಜೈಲು ಹಕ್ಕಿಗಳ ಬಿಡುಗಡೆ
2015 ರಿಂದ 2024ರ ವರೆಗೆ ಒಟ್ಟು 214 ಜನ ಕೈದಿಗಳು ಬಿಡುಗಡೆಯಾಗಿದ್ದಾರೆ ಇನ್ನು ಉಳಿದ ಅನೇಕ ಪ್ರಜಾ ಬಂದಿಗಳಿಗೆ ಮತ್ತೊಂದು ಅವಕಾಶಗಳಿವೆ. ಕೇಂದ್ರ ಕೇಂದ್ರ ಕಾರಾಗೃಹದ ಮಹಾನಿರ್ದೇಶಕರು ಇನ್ನೂ ಅನೇಕ ರಜಾ ಬಂದಿಗಳ ಬಿಡುಗಡೆ ಮಾಡಬೇಕೆಂದು ಬೇಡಿಕೆಗಳನ್ನು ಇಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 54 ಕಾರಾಗೃಹಗಳು ಇದ್ದು, ಅದರಲ್ಲಿ 15,000 ಜನ ಕೈದಿಗಳು ಬಂದಿಗಳಿದ್ದಾರೆ. ಕಾರಾಗೃಹ ಸುಧಾರಣಾ ಇಲಾಖೆ ಅಡಿಯಲ್ಲಿ ಸಾಕಷ್ಟು ಸುಧಾರಣಾ ವ್ಯವಸ್ಥೆಗಳು ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ಬೇಡಿಕೆಗಳನ್ನು ಸಹ ಇಟ್ಟಿದ್ದಾರೆ, ಅವುಗಳನ್ನು ಈಡೇರಿಸುವ ಹಾಗೂ ಚರ್ಚಿಸುವ ಕೆಲಸವನ್ನು ಮಾಡುತ್ತೇನೆ ಎಂದು ವಿಶ್ವಾಸವನ್ನು ಸಹ ಇದೆ ವೇಳೆ ವ್ಯಕ್ತಪಡಿಸಿದರು.
ಜೈಲಿನ ಭದ್ರತಾ ದೃಷ್ಟಿಯಿಂದ ಸರ್ಕಾರಕ್ಕೆ ಅನೇಕ ಬೇಡಿಕೆ
ಕೇಂದ್ರ ಕಾರಾಗೃಹದ ಮಹ ನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, 2024ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿವಿಧ ಅಪಾರದ ಕೃತಿಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಿರುವ ಒಟ್ಟು 77 ಸಜಾಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲಾಗುತ್ತದೆ. ಸಜಾ ಬಂದಿಗಳಿಗೆ ವಿವಿಧ ರೀತಿಯ ಕೌಶಲ್ಯ ತರಬೇತಿ, ಯೋಗ, ಧ್ಯಾನ, ವಿದ್ಯಾಭ್ಯಾಸ, ವಾಚನಾಲಯ, ಕ್ರೀಡೆ ಮನೋರಂಜನೆ ಹಾಗೂ ವಿವಿಧ ವೃತ್ತಿ ತರಬೇತಿ ಕಾರ್ಖಾನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನು ಕಾರಾಗೃಹಗಳಲ್ಲಿ ಭದ್ರತಾ ದೃಷ್ಟಿಯಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸಿ, ಮನುಷ್ಯನ ಸಂಪೂರ್ಣ ದೇಹದ ಸ್ಕ್ಯಾನಿಂಗ್, ಉನ್ನತ ದರ್ಜೆಯ ಆಸ್ಪತ್ರೆ, 4 ಜಿ ಸಿಗ್ನಲ್ ಜೋನ್ ಅಳವಡಿಕೆ, ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳ ಬಳಕೆ ಹಾಗೂ ತರಬೇತಿಯನ್ನು ಸಹ ನೀಡಲಾಗುತ್ತದೆ, ರಾಜ್ಯದಲ್ಲಿ ಪ್ರಸ್ತುತ ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿದ್ದು ರಾಜ್ಯದಲ್ಲಿ ಪ್ರಥಮವಾಗಿ ನಾಲ್ಕು ಸ್ಥಳಗಳಾದ ಬೆಂಗಳೂರು, ಬಳ್ಳಾರಿ, ಧಾರವಾಡ ಮತ್ತು ಬೆಳಗಾವಿನಲ್ಲಿ ಪೆಟ್ರೋಲ್ ಬಂಕ್ ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿದ್ದು ಕಾರಾಗೃಹದಿಂದ ಬಂದಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ನ್ಯಾಯಾಲಯಗಳಿಗೆ ಹಾಜರುಪಡಿಸಲಾಗುತ್ತೆ, ಪ್ರಿಸನ್ ಕಾಲ್ ಸಿಸ್ಟಮ್ ಮತ್ತು ವಿಡಿಯೋ ಕಾಲಿಂಗ್ ವ್ಯವಸ್ಥೆ ಅಳವಡಿಸಿ ಬಂದಿಗಳಿಗೆ ಹಾಗೂ ಅವರ ಕುಟುಂಬದವರೊಂದಿಗೆ ಮಾತನಾಡಲು ಅನುಕೂಲ ಮಾಡಿಕೊಳ್ಳಲಾಗಿದೆ ಎಂದರು.
ಬಂಧನಕೊಳಗಾಗಿ ಬಿಡುಗಡೆಯಾಗಿರುವ ಸುರೇಶ್ ಗುಪ್ತ ಮಾತನಾಡಿ, ನನಗೆ ಎರಡು ವಿಚಾರದಲ್ಲಿ ಸಾಕಷ್ಟು ಗೌರವ ಬಂದಿದೆ ಒಂದು ಊಟದ ವಿಚಾರದಲ್ಲಿ ಇನ್ನೊಂದು ಸ್ವಾತಂತ್ರ್ಯದ ಬಗ್ಗೆ ಗೌರವ ಇದೆ ಎಂದರು. ನಾನು ಈ ಜೇನಿನಲ್ಲಿ ಇದ್ದುಕೊಂಡು ನಾನು 4 ಡಿಗ್ರಿಗಳನ್ನು ಮಾಡಿದ್ದೇನೆ, ಅದಕ್ಕೆ ನಮ್ಮ ಜೈಲಿನ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿರುವುದು ನನ್ನ ಮುಂದಿನ ಜೀವನ ರೂಪಿಸಿಕೊಳ್ಳಲು ಸಹಾಯಕಾರಿಯಾಗಿದೆ ಎಂದರು. ಆಕಸ್ಮಿಕ ಘಟನೆಯಿಂದ ನಾನು ಜೈಲುವಾಸವನ್ನು ಅನುಭವಿಸಿದ್ದೇನೆ, ನಾನು ಸಂಪೂರ್ಣವಾಗಿ ಮನ ಪರಿವರ್ತನೆಯಾಗಿ ಸಮಾಜದಲ್ಲಿ ಒಬ್ಬ ಒಳ್ಳೆಯ ಪ್ರಜೆಯಾಗಿ ಬದುಕುತ್ತೇನೆ ಎಂದು ಇದೇ ವೇಳೆ ವಿಶ್ವಾಸವನ್ನು ಸಹ ವ್ಯಕ್ತಪಡಿಸಿದರು.
ಜೈಲು ಅಧಿಕಾರಿಗಳಿಗೆ ರಾಷ್ಟ್ರಪತಿಗಳ, ಮುಖ್ಯಮಂತ್ರಿಗಳ ಪದಕ ಪ್ರಧಾನ
ಕರಗುವ ಅಧಿಕಾರಿ ಸಿಬ್ಬಂದಿಗಳ ಉತ್ತಮ ಸೇವೆಯನ್ನು ಗುರುತಿಸಿ 2022ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾಲ್ಕು ಅಧಿಕಾರಿ ಸಿಬ್ಬಂದಿಗಳಿಗೆ ಘನತೆ ರಾಷ್ಟ್ರಪತಿಗಳ ಪದಕ ಹಾಗೂ 2023ನೇ ಸಾಲಿನಲ್ಲಿ 14 ಜನ ಅಧಿಕಾರಿ ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಪದಕವನ್ನು ವಿಸ್ತರಿಸಲಾಯಿತು.
ರಾಷ್ಟ್ರಪತಿಗಳ ಸುಧಾರಣಾ ಸೇವಾ ಪದಕ ವಿಜೇತರಾದ ಚಿಕ್ಕಬಳ್ಳಾಪುರ ಸಹಾಯಕ ಜೈಲು ಅಧೀಕ್ಷಕರಾದ ಸುನಿಲ್ ದಯಾನಂದಗಲ್ಲೇ, ಮೈಸೂರು ಕೇಂದ್ರ ಕಾರಾಗೃಹ ಜೈಲರ್ ಶಿವಬಸಪ್ಪ ಕುಂದರನಾಡ, ಚಾಮರಾಜನಗರದ ಜಿಲ್ಲಾ ಕಾರಾಗೃಹದ ಮುಖ್ಯ ವೀಕ್ಷಕರಾದ ಗಂಗಮ್ಮ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
2023 ನೇ ಸಾಲಿನ ಮುಖ್ಯಮಂತ್ರಿಗಳ ಪದಕ ವಿಜೇತರಾದ ಮಡಿಕೇರಿ ಜಿಲ್ಲಾ ಕಾರಾಗೃಹ ಸಹಾಯಕ ಅಭಿಕ್ಷಕರಾದ ಸಂಜಯ್ ದತ್ತಿ ರಾಮನಗರ ಜೈಲರಾದ ಇಮಾಮ್ ಕಾಸಿಂ ಲಿಂಗಸೂರು ತಾಲೂಕು ಜೈಲರಾದ ಅಮರಪ್ಪ ಪೇರಿ ಹಾವೇರಿ ಜಿಲ್ಲಾ ಜೈಲರಾದ ನಾಲ್ಕೂವರು ವಿ ಬಸವರಾಜ ಚಿಕ್ಕಮಂಗಳೂರು ವೀಕ್ಷಕರದ ಚೆಲುವರಾಜು ಸೇರಿದಂತೆ ಒಟ್ಟು 14 ಜನ ಸಿಬ್ಬಂದಿಯವರು ವಿವಿಧ ಜಿಲ್ಲೆಗಳಿಂದ ಕರ್ತವ್ಯ ನಿಷ್ಠೆ ತೋರಿದ ಹಿನ್ನೆಲೆ ಮುಖ್ಯಮಂತ್ರಿ ಪದಕ ಸಿಕ್ಕಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ, ಐಪಿಎಸ್ ಅಧಿಕಾರಿ ಸಾರಾ ಫಾತಿಮಾ, ಆನಂದ ರೆಡ್ಡಿ ಹೇಳಿದಂತೆ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದೇ ವೇಳೆ ಉಪಸ್ಥಿತರಿದ್ದರು.