ಬೆಂಗಳೂರು: ಹೆಣ್ಣು,ಹೊನ್ನು, ಮಣ್ಣಿಗಾಗಿ ಅದೆಷ್ಟು ಕದನಗಳು ನಡೆದಿದೆ, ಅದೇ ರೀತಿ ಕುರ್ಚಿಗಾಗಿ ಹಿಂದಿನಿಂದಲೂ ಸಹ ಯುದ್ಧಗಳು ಸಹ ನಡೆದಿದೆ. ಇಂತಹ ಸನ್ನಿವೇಶಗಳನ್ನು ಮಾದರಿಯಾಗಿ ಇಟ್ಟುಕೊಂಡು ‘ ಸಿಂಹಾಸನ’ ಸಿನಿಮಾವನ್ನು ವಿಭಿನ್ನವಾಗಿ ತೆರೆಮೇಲೆ ಕಟ್ಟಿಕೊಡಲು ಹೊಸ ತಂಡ ಸಿದ್ಧವಾಗಿದೆ. ಅದಕ್ಕೆ ಮುಹೂರ್ತವನ್ನು ಸಹ ವಿಜಯನಗರದ ರ್ಪಿಸಿ ಲೇಔಟ್ ಕೊಂಡಿರುವ ಶ್ರೀ ಗಣಪತಿ ವಿಶ್ವಕರ್ಮ ದೇವಾಲಯದಲ್ಲಿ ದೇವರಿಗೆ ಪೂಜೆ ಮಾಡುವ ಮೂಲಕ ಮೂರ್ತವನ್ನು ಸಹ ಮಾಡಲಾಯಿತು.
ಸಿಂಹಾಸನಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನವನ್ನು ಚಾಮರಾಜನಗರದ ಮೂಲದ ನಾಯಕ ನಟನಾಗಿ ಚಂದ್ರು ನಾಲ್ ರೋಡ್ ನಾಯಕನಾಗಿದ್ದಾನೆ. ಚಿತ್ರ ನಿರ್ಮಾಣದ ಬಗ್ಗೆ ನಿರ್ದೇಶಕ ದಯಾನಂದ ಸ್ವಾಮಿ ಮಾತನಾಡಿದರು, ಸಿಂಹಾಸನ ಹೆಸರೇ ಹೇಳುವಂತೆ ಕುರ್ಚಿಗಾಗಿ ನಡೆಯುವ ಒಂದು ಯುದ್ಧದ ಮಾದರಿ, ಇದರಲ್ಲಿ ರಾಜಕೀಯ ಪ್ರವೇಶವು ಇದ್ದು ಮಾಸಾಗಿದೆ, ಚಿತ್ರೀಕರಣವನ್ನು ಬೆಂಗಳೂರು,ಮೈಸೂರು, ರಾಮನಗರ,ಚನ್ನಪಟ್ಟಣ, ಕನಕಪುರ, ಕೋಲಾರ, ಮಂಡ್ಯ ಸುತ್ತಮುತ್ತ ಚತ್ರಿಕರಣ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಸಿನಿಮಾ ಬಜೆಟ್ 80 ಲಕ್ಷ ಮೀರಿದ್ದಾಗಿದೆ. ಒಬ್ಬ ಸಾಮಾನ್ಯ ಪ್ರಜೆ ರಾಜಕೀಯ ಪ್ರವೇಶವಾದ ಮೇಲೆ ಹೇಗೆಲ್ಲಾ ಕಷ್ಟಗಳನ್ನು ಎದುರಿಸುತ್ತಾನೆ? ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲ ಕೆಲಸಗಳನ್ನು ಮಾಡುತ್ತಾರೆ? ಇವೆಲ್ಲವನ್ನೂ ಹೇಗೆ ಎದುರಿಸುತ್ತಾನೆ ಎಂಬುದೇ ಚಿತ್ರದ ಕಥೆಯಾಗಿದೆ. ಚಿತ್ರದಲ್ಲಿ ಐದು ಹಾಡುಗಳು ಇವೆ ಅರ್ಜುನ್ ಸ್ವರಾಜ್ ಅವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ, ರಣಬೀರ್ ಛಾಯಾಗ್ರಾಹಣ ಇರಲಿದೆ. ನಗರದಲ್ಲಿದೆ ಕೆಲವೊಂದ ಕಡೆ ಫೈಟುಗಳು ಇವೆ. 1983 ರಲ್ಲಿ ಸಿಂಹಾಸನ ಎಂಬ ಸಿನಿಮಾ ರಿಲೀಸ್ ಆಗಿತ್ತು ಇದೀಗ 41 ವರ್ಷಗಳ ಬಳಿಕ ದೇ ಟೈಟಲ್ ನಲ್ಲಿ ಹೊಸ ಚಿತ್ರವೊಂದು ಸ್ಯಾಂಡಲ್ವುಡ್ ನಲ್ಲಿ ಸೆಟ್ಟರಲ್ಲಿದೆ.
ಚಿತ್ರದ ನಾಯಕ ನಟ ಚಂದ್ರು ನಾಲ್ ರೋಡ್ ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿ ಮಾತನಾಡಿ, ನನಗೆ ಸಿನಿಮಾದ ಬಗ್ಗೆ ಅತಿ ಹೆಚ್ಚು ಹುಚ್ಚು, ಮನೆಯಲ್ಲಿ ಸಿನಿಮಾ ನಿರ್ಮಾಣದ ಬಗ್ಗೆ ಹಾಗೂ ಸಿನಿಮಾವಲಯದ ಬಗ್ಗೆ ಬೇಡ ಎಂದು ಹೇಳಿದರೊ ಒಲವು, ಆಸಕ್ತಿ ಮಾತ್ರ ಹೆಚ್ಚಿದೆ. ನಾನು ಅನೇಕ ಪ್ರೊಡಕ್ಷನ್ ಕೆಲಸಗಳನ್ನು ಮಾಡಿದ್ದೇನೆ ಸಿನಿಮಾದ ಬಗ್ಗೆ ಅನುಭವವಿದೆ, ನಾಲ್ಕೈದು ಚಿತ್ರಗಳನ್ನು ಮಾಡಿದ್ದೇನೆ ಆದರೆ ಯಾವುವು ಸಹ ತೆರೆ ಮೇಲೆ ಕಾಣಿಸಲಿಲ್ಲ. ಇಷ್ಟು ದಿನ ತೆರೆ ಹಿಂದೆ ಕೆಲಸ ಮಾಡುತ್ತಿದ್ದೆ, ಇದೀಗ ನನಗೂ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುವ ಆಸಕ್ತಿ ಬಂದಿದೆ. ಕಥೆ ಚಿತ್ರಕಥೆ ಎಲ್ಲವೂ ಸಹ ನಾನೇ ನಿರ್ಮಾಣ ಮಾಡಿದೆ.
ಇನ್ನು ಸಿನಿಮಾ ಬಗ್ಗೆ ನಟಿ ರೇಷ್ಮಾ ಮಾತನಾಡಿ, ಇದು ನನ್ನ ಜೀವನದ ಎರಡನೇ ಚಿತ್ರ, ನನಗೆ ಸಿನಿಮಾದ ಕಥೆ ಇಷ್ಟವಾಗಿದೆ, ನಾನು ಆಡಿಶನ್ ಗೆ ಹೋದಮೇಲೆ ಈ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಚಿತ್ರದೊಂದಿಗೆ ಕೆಲಸ ಮಾಡುವುದು ನನಗೆ ಹೊಸ ಅನುಭವವನ್ನು ನೀಡುವಂತಿದೆ, ಈ ಚಿತ್ರದಲ್ಲಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದರು.
ಕಲಾವಿದರಾದ ಸಂಜಯ್, ಗುರು, ಪ್ರಕಾಶ್ಸಣ್ಣಕ್ಕಿ, ಅತಿಥಿಗಳಾಗಿ ಕಾಲಜ್ಘಾನಿ ಶ್ರೀ ಶ್ರೀ ಶ್ರೀ ಡಾ.ಯಶವಂತ ಗುರೂಜಿ, ರಿಯಲ್ ಎಸ್ಟೇಟ್ ಉದ್ಯಮಿ, ವಿ.ಜಯಚಂದ್ರ, ರಾಜಕೀಯ ಮುಖಂಡ ಮಾಫ್ತಿಗೌಡ, ಸೆಕ್ಯೂಲರ್ ಡೆಮೋಕ್ರಟಿಕ್ ಕಾಂಗ್ರೇಸ್ ರಾಜ್ಯಾಧ್ಯಕ್ಷರು, ಮೈಸೂರು ಡಾ.ಎ.ಜಿ.ರಾಮಚಂದ್ರರಾವ್ ಮುಂತಾದವರು ಉಪಸ್ಥಿತರಿದ್ದರು.