ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರುದ್ರಭೂಮಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಹಾರೆ, ಪಿಕಾಸಿ ಹಾಗೂ ಬಾಂಡ್ಲಿ ಸಲಕರಣೆಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ನಗರದಲ್ಲಿರುವ ರುದ್ರಭೂಮಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಪ್ರಬುದ್ಧ ಡಾ. ಬಿ.ಆರ್ ಅಂಬೇಡ್ಕರ್ ರುದ್ರಭೂಮಿ ಮತ್ತು ವಿದ್ಯುತ್ ಚಿತಾಗಾರ ನೌಕಕರ ಸಂಘದ ವತಿಯಿಂದ ಇಂದು ಪಾಲಿಕೆ ಕೇಂದ್ರ ಕಛೇರಿಯ ಆವರಣದಲ್ಲಿ ರುದ್ರಭೂಮಿಯ ನೌಕಕರಿಗೆ ಸಲಕರಣೆಗಳನ್ನು ವಿತರಿಸಲಾಯಿತು.
ನಗರದಲ್ಲಿರುವ ರುದ್ರಭೂಮಿಗಳಾದ ಹೆಗ್ಡೆ ನಗರ, ಅಬ್ಬಿಗೆರೆ, ಕೊಡಿಗೆ ಹಳ್ಳಿ, ಕೆ.ಆರ್ ಪುರಂ, ಹೂಡಿ, ಹರಿಚ್ಚಂದ್ರ ಘಾಟ್, ಬ್ಯಾಟರಾಯನಪುರ, ಹೆಬ್ಬಾಳ-ಕೆಂಪಾಪುರ, ಬನಶಂಕರಿ, ಯಲಹಂಕ, ತಿಂಡ್ಲು, ಅಟ್ಟೂರು, ಕಲ್ಪಳ್ಳಿ ಸೇರಿದಂತೆ 34 ರುದ್ರಭೂಮಿಗಳಿಗೆ 50 ಹಾರೆಗಳು, 49 ಪಿಕಾಸಿ ಹಾಗೂ 89 ಬಾಂಡ್ಲಿಗಳನ್ನು ನಿಡಲಾಗಿದೆ.
ಈ ವೇಳೆ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಆರೋಗ್ಯ ವಇಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಸಂಘದ ಅಧ್ಯಕ್ಷರಾದ ಆಂತೋನಿ, ಪ್ರಧಾನ ಕಾರ್ಯದರ್ಶಿ ಸೌರಿ ರಾಜ ಸೇರಿದಂತೆ ಇನ್ನಿತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.