ಬೆಂಗಳೂರು: ನೆನೆಗುದಿಗೆ ಬಿದ್ದಿದ್ದ ಬೆಂಗಳೂರಿನ 4 ಕ್ಷೇತ್ರಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದರು, ನಂತ್ರ ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ರಸ್ತೆಗಳಲ್ಲಿ ಗುಂಡಿ ಬೀಳದಂತೆ ಅಧಿಕಾರಿಗೆ, ಗುತ್ತಿಗೆದಾರರಿಗೆ, ಇಂಜಿನಿಯರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಬ್ರ್ಯಾಂಡ್ ಬೆಂಗಳೂರು – ಸುಗಮ ಸಂಚಾರ ಬೆಂಗಳೂರು” ಪರಿಕಲ್ಪನೆಯಡಿ ಪಶ್ಚಿಮ ವಲಯ ವ್ಯಾಪ್ತಿಯ ಗಾಂಧಿ ನಗರ, ಮಲ್ಲೇಶ್ವರಂ, ಮಹಾಲಕ್ಷ್ಮೀ ಲೇಔಟ್ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲನೇ ಹಂತದ “ವೈಟ್ ಟಾಪಿಂಗ್” ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರು ಚಾಲನೆ ನೀಡಿ ಮಾತಾಡಿದರು. ಮೊದಲನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ, ರಸ್ತೆಗಳು ಎಲ್ಲಂದರಲ್ಲಿ ಗುಂಡಿಗಳಿಂದ ಕೂಡಿದ್ದು, ವಾಹನ ಚಾಲನೆ, ಸಾರ್ವಜನಿಕರ ಓಡಾಟಕ್ಕೆ ನಿತ್ಯ ತೊಂದರೆಯಾಗುತ್ತಿದೆ, ಅದರ ಜೊತೆ ಬ್ರಾಂಡ್ ಬೆಂಗಳೂರು ಕಲ್ಪನೆಯಡಿ ಸ್ಮಾರ್ಟ್ ಸಿಟಿ ಮಾಡುವ ಉದ್ದೇಶದಿಂದ ಮೊದಲನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
4 ವಿಧಾನಸಭಾ ಕ್ಷೇತ್ರಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ 18 ರಸ್ತೆಗಳು ಒಳಗೊಂಡಿದ್ದು, 16.62 ಕಿಮೀ ದೂರದ ಅವರಿಗೆ ಕಾಮಗಾರಿ ನಡೆಯಲಿದೆ, ಅಭಿವೃದ್ದಿ ಕಾಮಗಾರಿಗೆ ಅಂದಾಜು 207 ಕೋಟಿ ರೂಪಾಯಿ ವೆಚ್ಚದಲ್ಲಿ ಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂ೦ಕ್ಲಿಪ್ತ ವಿವರ:
ಮಹಾಲಕ್ಷಿಪುರಂ ವಿಧಾನಸಭಾ ಕ್ಲೆಂತ್ರದಲ್ಲಿ ಒಟ್ಟಾರೆಯಾಗಿ ಈ. ರಸ್ತೆಗಳನ್ನು2.14 ಕೀ.ಮಿಂ. ಉದ್ದಕ್ಕೆ ಒಟ್ಟು ರೂ. 25.೦೦ ಕೋಟಿಗಳ ಮೊತ್ತದಲ್ಲಿ ಅಭವೃದ್ದಿಪಡಿಸಲು ಯೊಜಿಸಲಾಗಿರುತ್ತದೆ.
6 ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆಯಾಗಿ. 2 ರಸ್ತೆಗಳನ್ನು3.೦೦ ಕೀ.ಮಿಂ. ಉದ್ದಕ್ಕೆ ಒಟ್ಟು ರೂ. 3೦.೦೦ ಕೋಟಿಗಳ ಮೊತ್ತದಲ್ಲಿ ಅಭವೃದ್ದಿಪಡಿಸಲು ಯೊಜಿಸಲಾಗಿರುತ್ತದೆ
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆಯಾಗಿ 4 ರಸ್ತೆಗಳನ್ನು 3.84 ಕೀ.ಮಿಂ. ಉದ್ದಕ್ಕೆ ಒಟ್ಟು ರೂ. 5೦.೦೦ ಕೋಟಿಗಳ ಮೊತ್ತದಲ್ಲಿ ಅಭಿವೃದ್ದಿ ಪಡಿಸಲು ಯೊಜಿಸಲಾಗಿರುತ್ತದೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆಯಾಗಿ 2 ರಸ್ತೆಗಳನ್ನು7.64 ಕೀ.ಮಿಂ. ಉದ್ದಕ್ಕೆ ಒಟ್ಟು ರೂ. 1೦2.೦೦ ಕೋಟಿಗಳ ಮೊತ್ತದಲ್ಲಿ ಅಭಿವೃದ್ದಿಪಡಿಸಲು ಯೊಜಿಸಲಾಗಿರುತ್ತದೆ.
ಈ ವೇಳೆ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್, ಸ್ಥಳೀಯ ಶಾಸಕರಾದ ಡಾ. ಸಿ.ಎನ್ ಅಶ್ವತ್ಥ ನಾರಾಯಣ್, ಕೆ. ಗೋಪಾಲಯ್ಯ, ಆಡಳಿತಗಾರರಾದ ಉಮಾಶಂಕರ್, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ವಲಯ ಜಂಟಿ ಆಯುಕ್ತರಾದ ಪಲ್ಲವಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.