ಬೆಂಗಳೂರು: ಕನ್ನಡ ಚಿತ್ರರಂಗದ ಹಿತ ದೃಷ್ಟಿಯಿಂದ ಹಾಗೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಹಾಯವಾಗಲಿ ಎಂಬ ದೃಷ್ಟಿಯಿಂದ ಹೊಸದಾಗಿ ಕನ್ನಡ ಫಿಲಂ ಚೇಂಬರ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಕನ್ನಡ ಫಿಲಂ ಚೇಂಬರ್ ನ ಅಧ್ಯಕ್ಷರಾದ ಎಂ ಎಸ್ ರವೀಂದ್ರ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿಲ್ಲಿ ಸುದ್ದಿಗೋಷ್ಠಿಯಲ್ಲಿ ಕನ್ನಡ ಫಿಲಂ ಚೇಂಬರ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 7 ಕ್ಕಿಂತ ಹೆಚ್ಚು ಫಿಲಂ ಚೇಂಬರ್ ಗಳಿದ್ದು ಅವುಗಳು ತನ್ನದೇ ಆದಂತಹ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ರಾಜ್ಯದಲ್ಲಿ ಮೊದಲನೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಾಪನೆಯಾಗಿತ್ತು. ಆದರೆ ಈ ಮಂಡಳಿಯಿಂದ ಕನ್ನಡ ಚಿತ್ರರಂಗಕ್ಕೆ ಹಾಗೂ ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಯಾವುದೇ ರೀತಿಯಿಂದ ಅನುಕೂಲಗಳು ಇಲ್ಲದ ಕಾರಣ ಏಳುಕ್ಕೂ ಹೆಚ್ಚು ಫಿಲಂ ಚೇಂಬರ್ ಗಳು ಹುಟ್ಟಿಕೊಂಡಿವೆ. ಅವು ತನ್ನದೇ ಆದಂತಹ ಕೆಲಸ ಕಾರ್ಯಗಳನ್ನು ಮಾಡುವ ಹಾಗೂ ಕಲಾವಿದರಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತವೆ.
ಕನ್ನಡ ಫಿಲಂ ಚೇಂಬರ್ ಹುಟ್ಟಿ ಹಾಕಿರೋ ಉದ್ದೇಶ ಮೊಟ್ಟ ಮೊದಲನೇ ಬಾರಿಗೆ ಚಿತ್ರರಂಗದಲ್ಲಿ ಕೆಲಸ ಮಾಡುವ ಕಲಾವಿದರು, ನಿರ್ದೇಶಕರು, ಛಾಯಾಚಿತ್ರಗಾರರು, ಸಂಗೀತಗಾರರು, ನೃತ್ಯಕಾರರು ಫೈಟ್ ಮಾಸ್ಟರ್ ಗಳು ಸೇರಿದಂತೆ ಎಲ್ಲಾ ವಿಭಾಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಕೆಲಸಗಳನ್ನು ಕೊಡಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
ಚಿತ್ರರಂಗದಲ್ಲಿ ಕೆಲಸ ಮಾಡುವ ಎಲ್ಲಾ ವಿಭಾಗದವರಿಗೆ ಆಜೀವನ ಸದಸತ್ವಕ್ಕೆ2 ಸಾವಿರ ರೂಪಾಯಿ, ನಿರ್ಮಾಪಕರು ಮೂವಿ ಬ್ಯಾನರ್ ಅಜೀವ ಸದಸ್ತ್ವಕ್ಕೆ 5000, ಸಿನಿಮಾ ಟೈಟಲ್ ಗೆ 500 ನಿಗದಿಪಡಿಸಲಾಗಿದೆ, ಇನ್ನು ನೋಂದಣಿ ಮಾಡಿದ ಸದಸ್ಯರು ಕನ್ನಡ ಫಿಲಂ ಚೇಂಬರ್ ಚುನಾವಣೆಯಲ್ಲಿ ಭಾಗವಹಿಸಲು, ಸ್ಪರ್ಧಿಸಲು ಹಾಗು ಮತ ಹಾಕುವ ಹಕ್ಕು ಇರುತ್ತದೆ. ನಾವು ಯಾವುದೇ ರೀತಿಯಿಂದ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ನಾವು ಹೇಳಿದ್ದನ್ನು ಮಾಡಿ ತದನಂತರ ಜನತೆಗೆ ತೋರಿಸುತ್ತೇವೆ ಎಂದರು.
ಈಗಾಗಲೇ ಬೆಂಗಳೂರು ಸೇರದಂತೆ ನಾಡಿನಾದ್ಯಂತ 400ಕ್ಕೂ ಹೆಚ್ಚು ಕನ್ನಡ ಚಿತ್ರರಂಗದವರು ನಮ್ಮ ಸಂಸ್ಥೆಯಲ್ಲಿ ಸದಸ್ಯತ್ವವನ್ನು ಪಡೆದಿದ್ದಾರೆ ಮುಂದಿನ ದಿನಗಳಲ್ಲಿ ಸದಸ್ಯತ್ವದ ಸಂಖ್ಯೆ ಹೆಚ್ಚು ಮಾಡಿದ್ದೇವೆ ಎಂದರು ನಮ್ಮ ಸಂಸ್ಥೆ ಸ್ಥಾಪನೆಯಾಗಿ ಕೇವಲ ಆರು ತಿಂಗಳ ಮಾತ್ರ ಕಳೆದಿದೆ, ನಮ್ಮ ಸಂಸ್ಥೆಯಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಉದ್ಯೋಗ ಸೇರಿದಂತೆ ವೈದ್ಯಕೀಯ ಸೌಲಭ್ಯ ಬಡವರಿಗೆ ಅನುದಾನ ನೀಡುವುದು ಸಾಲ ಸೌಲಭ್ಯ ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಅಪಸ್ವರ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೇವಲ ನರಮಾತ್ರಕ್ಕೆ ಇದ್ದು ಇಲ್ಲಿ ಸದಸ್ಯತ್ವ ಪಡೆಯಲು ದುಬಾರಿ ಹಣವನ್ನು ತೆರಬೇಕಾಗುತ್ತದೆ. ಸಂಸ್ಥೆಯ ಬೈಲಾ ವನ್ನು ಬದಲಾಯಿಸಬೇಕೆಂಬ ಕೂಗು ಹಲವು ದಿನಗಳಿಂದ ನಡೆದಿದ್ದರೂ ಸಹ ಚೇಂಬರ್ ನ ಅಧ್ಯಕ್ಷರುಗಳು ಯಾವುದೇ ರೀತಿಯಿಂದ ಕಿವಿ ಕೊಟ್ಟಿಲ್ಲ. ಹೀಗಾಗಿ ಚೇಂಬರ್ ನಲ್ಲಿ ದುಂಡಾವರ್ತನೆ ನಡೆಯುತ್ತಿದ್ದು, ಸಮಾಜಮುಖಿ ಕೆಲಸಗಳು ಯಾವುದೇ ರೀತಿಯಿಂದಲೂ ಆಗುತ್ತಿಲ್ಲ, ಕೇವಲ ಅಲ್ಲಿನ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಶೋಕಿ ಮಾಡಲು ಚೇಂಬರನ್ನು ಇಟ್ಟುಕೊಂಡಿದ್ದಾರೆ ಎಂದು ದೂರಿದರು.
ಏನುಪತ್ರಿಯಾಗೋಷ್ಠಿಯಲ್ಲಿ ಕನ್ನಡ ಫಿಲಂ ಚೇಂಬರ್ ನ ಪದಾಧಿಕಾರಿಗಳು ಸದಸ್ಯರು ಇದೇ ವೇಳೆ ಉಪಸ್ಥಿತರಿದ್ದರು.