ಬೆಂಗಳೂರು: ಭಾವಸಾರ ಕ್ಷತ್ರಿಯ ಜನಾಂಗದ ಕುಲದೇವತೆ ಶ್ರೀ ಹಿಂಗುಳಾಂಬಿಕ ಮಾತೆಯ ಪೂಜೆ, ಆರಾಧನೆ ಮತ್ತು ಗೋಂದಳ ಕಾರ್ಯಕ್ರಮವನ್ನು ಜು.28 ರಂದು ಬಸವನಗುಡಿಯ ಭವಾನಿ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾಯಕರಮದ ಸಂಪೂರ್ಣ ಮಾಹಿತಿಯನ್ನು ಹಿಂಗೂಳಾಂಬಿಕ ಭಾವಸಾರ ಕ್ಷತ್ರೀಯ ಸೇವಾ ಸಮಿತಿ ಗೌರವಾಧ್ಯಕ್ಷ ತಾರಾನಾಥ್ ಜಾಧವ್, ಅಧ್ಯಕ್ಷ ಪಿ.ಎನ್. ವಿಶ್ವನಾಥ್ ರಾವ್ ಈ ಕುರಿತು ನೀಡಿದರು.
ಪಾಕಿಸ್ತಾನದ ಬಲೂಚಿಸ್ಥಾನದ ಹಿಂಗಲಾಂಜ ಪ್ರಾಂತ್ಯದಲ್ಲಿ ಹಿಂಗುಳಾಂಬಿಕ ದೇವಿಯ ಶಕ್ತಿ ಪೀಠ ಇದ್ದು, 51 ಪ್ರಮುಖ ಶಕ್ತಿ ಪೀಠಗಳಲ್ಲಿ ಇದು ಕೂಡ ಒಂದು ಎಂಬುದು ವಿಶೇಷ. ಪಂಡಿತ ಅಭಿಷೇಕಾಚಾರ್ಯ ಅವರು ಗೋಂದಳ ಕಾರ್ಯಕ್ರಮದಲ್ಲಿ ಪ್ರವಚನ ನೀಡಲಿದ್ದು. ದೇಶಾದ್ಯಂತ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.