ಬೆಂಗಳೂರು: ಭಾರತದ ಮಂಚೂಣಿ ದೂರಸಂಪರ್ಕ ಸೇವಾ ಪೂರೈಕೆದಾರರಾದ ಭಾರತಿ ಏರ್ಟೆಲ್(“ಏರ್ಟೆಲ್”), ಇಂದು ತನ್ನ ವೈಫೈ ಸೇವೆಗಳನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ 1.5 ದಶಲಕ್ಷ ಹೊಸ ಮನೆಗಳಿಗೆ ವಿಸ್ತರಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿದೆ.
ಏರ್ಟೆಲ್ ವೈಫೈನೊಂದಿಗೆ, ಗ್ರಾಹಕರು ಕೇವಲ ಅತ್ಯಧಿಕ ವೇಗದ ವಿಶ್ವಾಸಾರ್ಹ ವೈರ್ಲೆಸ್ ಇಂಟರ್ನೆಟ್ ಸೇವೆಯನ್ನು ಮಾತ್ರ ಪಡೆಯದೆ ಅನಿಮಿತ ಸ್ಟ್ರೀಮಿಂಗ್ ಅವಕಾಶ, 20ಕ್ಕೂ ಅಧಿಕ ಓಟಿಟಿ ಸೇವೆಗಳು ಮತ್ತು 350ಕ್ಕೂ ಅಧಿಕ ಟಿವಿ ಚಾನೆಲ್ ಗಳನ್ನು ಸಹ ವೀಕ್ಷಿಸಿ ಆನಂದಿಸಬಹುದು. ಗ್ರಾಹಕರು ಏರ್ಟೆಲ್ ವೈಫೈ ಪಡೆಯಲು, ಏರ್ಟೆಲ್ ಥ್ಯಾಂಕ್ಸ್ ಆಪ್ ಅಥವಾ 8130181301 ಸಂಖ್ಯೆಗೆ ಕರೆ ಮಾಡುವ ಮೂಲಕ ಬುಕ್ ಮಾಡಬಹುದು.
ಈ ಕುರಿತು ಭಾರತಿ ಏರ್ಟೆಲ್ ನ ಕರ್ನಾಟಕದ ಸಿಇಒ ವಿವೇಕ್ ಮೆಹೆಂದಿರತ್ತ ಮಾಹಿತಿ ಹಂಚಿಕೊಂಡಿದ್ದಾರೆ, “ಏರ್ಟೆಲ್ ವೈಫೈ ಕರ್ನಾಟಕದ ಪ್ರತಿಯೊಂದು ಮೂಲೆಯನ್ನು ಸೇರಿದೆ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತಿದೆ. ಏರ್ಟೆಲ್ ವೈಫೈ ನೊಂದಿಗೆ ಗ್ರಾಹಕರು ಈಗ 20ಕ್ಕೂ ಅಧಿಕ ಓಟಿಟಿಗಳು, 350ಕ್ಕೂ ಅಧಿಕ ಟಿವಿ ಚಾನೆಲ್ ಗಳನ್ನು ಒಳಗೊಂಡಂತೆ ವಿಸ್ತೃತ ಶ್ರೇಣಿಯ ಮನೋರಂಜನಾ ಆಯ್ಕೆಗಳನ್ನು ಅನ್ಲಾಕ್ ಮಾಡಬಹುದು. ಈ ವಿಶ್ವಾಸಾರ್ಹ ಅತ್ಯಧಿಕ ವೇಗದ ವೈರ್ಲೆಸ್ ವೈಫೈ ಸೇವೆಗಳನ್ನು ಅವರು ಪ್ರತಿ ತಿಂಗಳು ರೂ. 699ರಿಂದ ಆರಂಭವಾಗುವ ಅಗ್ಗದ ಟಾರಿಫ್ ನೊಂದಿಗೆ ಪಡೆಯಬಹುದು. ಈ ಕೊಡುಗೆಯಿಂದ ಗ್ರಾಹಕರು ತಡೆರಹಿತ ಮನೋರಂಜನೆಯನ್ನು ಆನಂದಿಸುತ್ತಾರೆ ಎಂದು ಭಾವಿಸುತ್ತೇನೆ.” ಎಂದರು.
ಏರ್ಟೆಲ್ ಪ್ಲಾನ್ ಗಳ ವಿವರ:
Tariff Speed Benefits Other Benefits
₹699 Up to 40 Mbps 350+ TV channels (HD included) Disney+ Hotstar, 20+ OTTs & much more
₹899 Up to 100 Mbps 350+ TV channels (HD included) Disney+ Hotstar, 20+ OTTs & much more
₹1099 Up to 200 Mbps 350+ TV channels (HD included) Amazon Prime, Disney+ Hotstar, 20+ OTTs & much more
₹1599 Up to 300 Mbps 350+ TV channels (HD included) Netflix, Amazon Prime, Disney+ Hotstar, 20+ OTTs & much more
₹3999 Up to 1 Gbps 350+ TV channels (HD included) Netflix, Amazon Prime, Disney+ Hotstar, 20+ OTTs & much more
ಕರ್ನಾಟಕದ ಗ್ರಾಹಕರು ಕನ್ನಡದ ಪ್ರಸಿದ್ಧ ಟಿವಿ ಚಾನೆಲ್ ಗಳು ಮತ್ತು ಡಿಸ್ನಿ ಹಾಟ್ ಸ್ಟಾರ್, ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ರೀತಿಯ ಓಟಿಟಿ ಪ್ಲಾಟ್ಫಾರ್ಮ್ಗಳು ಮತ್ತು ಕನ್ನಡದ ಸುದ್ದಿ ವಾಹಿನಿಗಳು, ಇತರೆ ಕನ್ನಡದ ಚಾನೆಲ್ ಗಳಿಗೆ ಅನಿಯಮಿತ ಪ್ರವೇಶಾವಕಾಶವನ್ನು ಪಡೆಯುವುದರೊಂದಿಗೆ ಅದನ್ನು ಮನೋರಂಜನೆಯ ಆನಂದವನ್ನು ಸಹ ಪಡೆಯಬಹುದು.