ಕೇರಳ: ಕೇರಳದ ವೈನಾಡಿನಲ್ಲಿ ದೊಡ್ಡ ಪ್ರಮಾಣದ ಭೂಕಂಪ ಉಂಟಾಗಿದ್ದು ಸಾವಿನ ಸಂಖ್ಯೆ 200ಕ್ಕೂ ಹೆಚ್ಚು ಆಗುವ ಸಂಭವವಿದೆ, ಇನ್ನು ಪ್ರಧಾನಮಂತ್ರಿ ಕಾರ್ಯಾಲಯದಿಂದ ಸತ್ತವರಿಗೆ ಎರಡು ಲಕ್ಷ ಹಾಗೂ ಪರಿಹಾರ ಘೋಷಣೆಯನ್ನು ಮಾಡಿದ್ದಾರೆ.
ಕೇರಳದ ವೈನಾಡು ಜಿಲ್ಲೆಯ ಮನಪ್ಪಾಡಿಯಲ್ಲಿ ಗುಡ್ಡ ಕುಸಿತ ಸಂಬಂಧ ಬಾರಿ ಗಾತ್ರದ ಗುಡ್ಡ ಕುಸಿದೆ ಹಿನ್ನೆಲೆ 5 ಗ್ರಾಮಗಳು ಭೂ ಸಮಾಧಿಯಾಗಿದ್ದು ಸಾವಿನ ಸಂಖ್ಯೆ 200 ಕ್ಕೂ ಅಧಿಕವಾಗುವ ಗೋಚರವಾಗುತ್ತದೆ. ರಕ್ಷಣಾ ಕಾರ್ಯಚರಣೆ ಮುಂದುವರಿದು ಕೇಂದ್ರ ಹಾಗೂ ರಾಜ್ಯದ ಇಂಡಿಯಾ ಅಗ್ನಿಶಾಮಕ ದಳ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಹಾಗೂ ಸ್ವಯಂಸೇವಕರು ಈ ಒಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಹೆಲಿಕ್ಯಾಪ್ಟರ್ ಮೂಲಕ ನಡೆಸುವ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಇಲ್ಲಿಯವರೆಗೆ 150 ಜನ ಸಾವನ್ನಪ್ಪಿದ್ದು, 198 ಜನ ನಾಪತ್ತೆ, 480 ಜನರ ರಕ್ಷಣಾ ಕಾರ್ಯ ಮಾಡಲಾಗಿದೆ, ಭೂ ಕುಸಿತಕ್ಕೆ 4 ಗ್ರಾಮದ ಮನೆಗಳು ಸಂಪೂರ್ಣ ಭೂ ಸಮಾಧಿ.
ಮಂಡ್ಯದ ಇಬ್ಬರು ದಾರುಣ ಸಾವು
ಮಂಡ್ಯದಿಂದ ಹೋಗಿ ಕೇರಳದಲ್ಲಿ ನೆಲೆಸಿದ್ದ ಇಬ್ಬರು ದಾರುಣ ಸಾವನ್ನಪ್ಪಿದ್ದಾರೆ. ಅಜ್ಜಿ ಹಾಗು ಮೊಮ್ಮಗ ದುರಂತ ಅಂತ್ಯವಾಗಿದ್ದು, ಮಗುವಿನ ಮೃತ ದೇಹ ಪೊದೆಯಲ್ಲಿ ಗೋಚರಿಸಿದರೆ, ಅಜ್ಜಿಯ ಕೈ ಮಾತ್ರ ಬೃಹತ್ ಮಣ್ಣಿನ ಮೇಲ್ಬಾಗದಲ್ಲಿ ಕಾಣಿಸಿರುವುದು ಹೃದಯ ವಿದ್ರಾವಕ ಘಟನೆಯಾಗಿದೆ.
NDRF,ಅಗ್ನಿಶಾಮಕ, ಸೇನೆಯ ತುಕಡಿ, ಎಸ್ ಡಿ ಅರ್ ಎಫ್, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್ ಇಲಾಖೆ,ಸ್ವಯಂ ಸೇವಕರು ಸೇರಿದಂತೆ ಮೊದಲಾದ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಕರ್ನಾಟಕ ಸರ್ಕಾರದಿಂದ ನೆರವಿನ ಘೋಷಣೆ
ಇನ್ನು ಕೇರಳದಲ್ಲಿ ಸಂಭವಿಸಿರುವ ಮಹಾದುರಂತಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಗತ್ಯ ವಸ್ತುಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.