ಬೆಂಗಳೂರು: ಮಹಿಳೆಯರು ಪುರುಷನಷ್ಟೇ ಸಮಾನರು ಎಂಬುದು ಸರಿ, ಆದರೆ ಹೆಣ್ಣು ಮಕ್ಕಳಾಗಿ ತದನಂತರ ಪುರುಷನಾಗುತ್ತಿರುವುದು ಸರಿಯಲ್ಲ. ನನ್ನ ಹತ್ತಿರ ಹಣ ಇದೆ ಎಂದು ಎಲ್ಲವೂ ನನ್ನದೇ ಎನ್ನುವುದು ಮೂರ್ಖತನದ ಪರಮಾವಧಿ . ಹೆಣ್ಣು ಮಕ್ಕಳಿಂದ ದೇಶಕ್ಕೆ ಒಳ್ಳೆದಾಗಬೇಕೇ ಹೊರತು ಕೆಟ್ಟದ್ದು ಆಗಬಾರದು ಎಂದು ಕೋಲ್ಕತ್ತ, ಕೇರಳ ಮತ್ತು ಬಾಂಬೆ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಮಂಜುಳಾ ಚೆಲ್ಲೂರ ತಿಳಿಸಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಆಯೋಜಿಸಲಾಗಿದ್ದ ಡಾ. ಬಿ. ಆರ್ ಅಂಬೇಡ್ಕರ್ ರವರ 133 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು
ಸಂವಿಧಾನ ಮತ್ತು ಮಹಿಳಾ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಮಹಿಳೆಯರಿಗೆ ಸಮಾನತೆ ಕೊಟ್ಟರೆ ಮಹಿಳೆ ಪುರುಷನಷ್ಟೇ ಸಮಾನರು ಎಂಬುದು ತಿಳಿಯುತ್ತದೆ. ವಿಮಾನಯಾನದಲ್ಲಿ ಒಂದು ಕಾನೂನು ಇದೆ, ವಿಮಾನಯಾನದಲ್ಲಿ ಕೆಲಸ ಮಾಡುವ ಯುವತಿ ಮದುವೆಯಾದರೆ ಪುನಃ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ.
ಮಹಿಳೆಯರು ಪುರುಷನಷ್ಟೇ ಸಮಾನರು ಎಂಬುದು ಸರಿ, ಆದರೆ ಹೆಣ್ಣು ಮಕ್ಕಳಾಗಿ ತದನಂತರ ಪುರುಷನಾಗುತ್ತಿರುವುದು ಸರಿಯಲ್ಲ. ನನ್ನ ಹತ್ತಿರ ಹಣ ಇದೆ ಎಂದು ಎಲ್ಲವೂ ನನ್ನದೇ ಎನ್ನುವುದು ಜೀವನಕ್ಕೆ ಸರಿಯಾದ ಮಾರ್ಗವಲ್ಲ. ಹೆಣ್ಣು ಮಕ್ಕಳಿಂದ ದೇಶಕ್ಕೆ ಒಳ್ಳೆದಾಗಬೇಕೇ ಹೊರೆತು, ಕೆಟ್ಟದ್ದು ಆಗಬಾರದು, ಮಹಿಳೆಯರ ಬಗ್ಗೆ ಮಾತನಾಡಬೇಕಾದರೆ ಒಂದು ದಿನವಲ್ಲ ವಾರಗಟ್ಟಲೆ ಮಾತನಾಡಬಹುದು, ಮಹಿಳೆಯರು ಹಕ್ಕು, ಕೊರತೆ ಬಗ್ಗೆ ಕೇಳಿ ಪಡೆದುಕೊಳ್ಳಿ. ಅಂಬೇಡ್ಕರ್ ಅವರ ಜಯಂತಿಯಲ್ಲಿ ನಾನೊಬ್ಬ ನ್ಯಾಯಾಧೀಶೆಯಾಗಿ ಭಾಗವಹಿಸಿದ್ದೇನೆ, ಅದು ಅಂಬೇಡ್ಕರ ಅವರಿಗೆ ಗೌರವ ಕೊಡುವ ಕೆಲಸವಾಗಬೇಕು ಅದನ್ನು ಮಾಡಿದ್ದೇನೆ ಎಂದರು.
ಮದ್ಯ, ಮೌಢ್ಯ ತ್ಯಜಿಸುವ ಮೂಲಕ ಅಂಬೇಡ್ಕರ್ ಆಶಯಗಳನ್ನ ಪಾಲಿಸಬೇಕು: ಜ್ಞಾನಪ್ರಕಾಶ ಸ್ವಾಮೀಜಿ
ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ಅವರು ಸಮಾನತೆ ಮತ್ತು ಸ್ವಾತಂತ್ರ್ಯದ ಮಹತ್ವವನ್ನು ಸಾರಿದ ಮಹಾನ್ ಜ್ಞಾನಿ. ಸಂವಿಧಾನದಲ್ಲಿ ಮಹಿಳೆಯರು ಮತ್ತು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಜನರ ಅಭ್ಯದಯಕ್ಕಾಗಿ ಅಪಾರ ಕೊಡಗೆಯನ್ನು ನೀಡಿದ್ದಾರೆ. ಆದರೆ, ಇಂದು ನಮ್ಮ ಜನರು ಮದ್ಯ ಮತ್ತು ಮೌಢ್ಯಕ್ಕೆ ತುತ್ತಾಗಿ ಅಂಬೇಡ್ಕರ್ ರವರು ಶ್ರಮಪಟ್ಟು ದೊರಕಿಸಿಕೊಟ್ಟಂತಹ ಸ್ವಾತಂತ್ರ್ಯವನ್ನ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಸಾಮಾಜಿಕವಾಗಿ ಮುಂದುವರೆಯುವುದಕ್ಕೆ ಶಿಕ್ಷಣ ಬಹಳ ಮುಖ್ಯ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಮತ್ತು ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ಮದ್ಯ ಮತ್ತು ಮೌಢ್ಯದಿಂದ ವಿಮೋಚನೆ ಪಡೆದುಕೊಳ್ಳುವತ್ತ ಮುಂದಾಗಬೇಕು. ಅಂಬೇಡ್ಕರ್ ಅವರ ಜ್ಞಾನದ ದೀಪ ನಮ್ಮ ಮುಂದಿನ ಪೀಳಿಗೆಯಲ್ಲೂ ಪ್ರಜ್ವಲಿಸುವಂತೆ ಮಾಡಬೇಕು ಎಂದು ಹೇಳಿದರು.
ಅಂಬೇಡ್ಕರ ಅವರು ಮಹಿಳೆಯರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಹೆಣ್ಣು ಮಕ್ಕಳು ಮಕ್ಕಳನ್ನು ಅಡೆಯುವ ಯಂತ್ರವಾಗಿದ್ದಾರೆ. ಲಂಡನ್ನಿನ ಅರಮನೆಗೆ ಅಲ್ಲಿನ ರಾಣಿ ಅವರು ಅಂಬೇಡ್ಕರ ಅವರನ್ನು ಔತಣಕೂಟಕ್ಕೆ ಕರೆಯುತ್ತಾರೆ ಎಂದರೆ ಕೊಂಚ ಯೋಚನೆ ಮಾಡಬೇಕು. ಸರ್ವಜ್ಞಾನಗದ ಶಾನತಿಯ ತೋಟ ಎಂದರೆ ಜಲಮಂಡಳಿ.ನೀರಾವರಿ ತಜ್ಞರಾಗಿ ಉತ್ತಮವಾಗಿ ಪ್ಲಾನ್ ಹಾಕಿಕೊಟ್ಟವರು ಅಂಬೇಡ್ಕರ್. ಅಂಬೇಡ್ಕರ್ ಅವರು ಒಬ್ಬ ದೊಡ್ಡ ನ್ಯಾಯಾಧೀಶರು, ಆರ್ಥಿಕ ತಜ್ಞರು, ನೀರಾವರಿ ತಜ್ಞರು, 198 ದೇಶಗಳು ಅವರಿಗೆ ಮನ್ನಣೆ ಕೊಡುತ್ತಿದ್ದರು. ಭಾರತೀಯ ಪ್ರತಿಯೊಬ್ಬರೂ ಅಂಬೇಡ್ಕರ್ ಅವರಿಗೆ ಚಿರಋಣಿಯಾಗಿರಬೇಕು.
ಕೆಳ ಹಂತದವರು ಮೇಲ್ವರ್ಗಕ್ಕೆ ಬಂದಾಗ, ಉನ್ನತ ಹುದ್ದೆಯಲ್ಲಿ ಗಿಟ್ಟಿಸಿಕೊಂಡಗಾ ಮಾತ್ರ ಮತ್ತೆ ಅಂಬೇಡ್ಕರ ಅವರು ಹುಟ್ಟಿಕೊಂಡು ಬರುತ್ತಾರೆ. ಜೀವಂತವಾಗಿದ್ದಾರೆ ಎಂಬುದು ತಿಳಿಯುತ್ತದೆ. ದೇಶದಲ್ಲಿ ಜಾತಿ ಧರ್ಮ ಆಧಾರಿತವನ್ನಾಗಿ ಮಾಡಲು ಹೊರಟರೆ ದೇಶ ಮತ್ತೆ 500 ವರ್ಷಗಳ ಹಿಂದೆ ಹೋಗಿ ಗುಲಾಮಗಿರಿ ಆಗುವುದರಲ್ಲಿ ಸಂಶಯವಿಲ್ಲ.
ಅಂಬೇಡ್ಕರ್ ಜಯಂತಿ ಹಿನ್ನೆಲೆ ಸಂಘದ ವತಿಯಿಂದ ರಕ್ತದಾನ, ಹಾಗು ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಿಎಸ್ಎಸ್ ನಾಯಕ ಶಿವಶಂಕರ, ಚಿತ್ರ ಸಾಹಿತಿ ಕವಿರಾಜು, ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗಿ
ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಇಂದು ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗಲು ನನ್ನ ಜೀವನದಲ್ಲಿ ಶಿಕ್ಷಣದ ಪಾತ್ರ ಬಹಳ ಮುಖ್ಯವಾಗಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಿಬ್ಬಂದಿಗಳು ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ದೊರೆಯುವಂತೆ ಗಮನ ಹರಿಸಬೇಕು. ಮೌಲ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುವಂತಹ ಶಿಕ್ಷಣ ನಮ್ಮ ಮಕ್ಕಳಿಗೆ ದೊರೆಯುಂತಹ ಸೌಲಭ್ಯವನ್ನ ನಾವು ಕಲ್ಪಿಸಬೇಕು. ನಮ್ಮ ಜಲಮಂಡಳಿಯ ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಅಗತ್ಯ ಸಹಕಾರವನ್ನು ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಲಾಗುವುದು. ದುಶ್ಚಟಗಳನ್ನ ತ್ಯಾಗ ಮಾಡುವ ಮೂಲಕ ಮಕ್ಕಳು ಉತ್ತಮ ಸಾಧನೆ ಮಾಡುವಂತೆ ಪ್ರೇರೇಪಿಸಬೇಕು. ಶಿಕ್ಷಣದ ಮೂಲಕ ನಮ್ಮಲ್ಲಿ, ಶಿಸ್ತಿನ ಮೂಲಕ ನಮ್ಮ ಕುಟುಂಬದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಾವು ಬದಲಾಗುವುದರ ಜೊತೆಯಲ್ಲೇ ನಮ್ಮ ಸಮುದಾಯಕ್ಕೆ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷರಾದ ಶಿವಶಂಕರ್ ಡಿ, ಖ್ಯಾತ ಚಿತ್ರ ಸಾಹಿತಿ ಕವಿರಾಜ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಸದಾಶಿವ ಕಾಂಬಳೆ, ಬೆಂಗಳೂರು ಜಲಮಂಡಳೀ ಪ್ರಧಾನ ಮುಖ್ಯ ಅಭಿಯಂತರರಾದ ಎಲ್.ಕುಮಾರ್ ನಾಯ್ಕ್, ವಿಕ್ಟೋರಿಯಾ ಆಸ್ಪತ್ರೆ ತೀವ್ರ ನಿಗಾ ಘಟಕ ಮುಖ್ಯಸ್ಥರಾದ ಡಾ ಮಹೇಶ್, ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶಾಂತಾರಾಮ್ ತೇಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇನ್ನು ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿ ವಿಜೇತಾರಾಗಿದ್ದ ಮಕ್ಕಳಿಗೆ ಹಾಗೂ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.