ಬೆಂಗಳೂರು: ಬೆಂಗಳೂರಿನಲ್ಲಿರುವ ಹಿಂದೂಸ್ಥಾನ ವಿಮಾನ ಕಾರ್ಖಾನೆಯಲ್ಲಿ (ಎಚ್ ಎ ಎಲ್)2024—2025ನೇ ಸಾಲಿನ ಅಪ್ರೆಂಟಿಸ್ ತರಬೇತಿಗೆ ಅರ್ಜಿಯನ್ನು ಸಲ್ಲಿಸಲು ಪ್ರಕಟಿಸಲಾಗಿದೆ.
ಹಾಗಾದರೆ ಅರ್ಜಿ ಸಲ್ಲಿಸಲು ಹಾಗು ಯಾರು HAL ನಲ್ಲಿ ಹುದೀಪಡೆಯಬಹುದು ಎಂದರೆ ಐಟಿಐ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ವಿವಿಧ ಟ್ರೇಡ್ ಗಳಲ್ಲಿ ಸುಮಾರು 2200 ಸ್ಥಾನಗಳು ಲಭ್ಯವಿದ್ದು ಯಾವುದೇ ಪರೀಕ್ಷೆ/ಸಂದರ್ಶನವಿಲ್ಲದೆ ನೇರವಾಗಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ.ದಾಖಲೆಗಳೊಂದಿಗೆ ದಿನಾಂಕ 16/09/2024 ರಿಂದ 30.09.24 ರೊಳಗೆ ತಾಂತ್ರಿಕ ತರಬೇತಿ ಇಲಾಖೆˌ ಎಚ್ ಎ ಎಲ್ ಗೆ ಭೇಟಿ ನೀಡಿ.ಹೆಚ್ಚಿನ ಮಾಹಿತಿಗೆ ಮೇಲಿನ ಪ್ರಕಟಣೆಯನ್ನು ನೋಡಿ. ಹೆಚ್ಚಿನ ಜನಕ್ಕೆ ಪ್ರಚಾರ ನೀಡಿ.
Hal ನಲ್ಲಿ ತರಬೇತಿಪಡೆದವರಿಗೆ ಎಚ್ ಎ ಎಲ್ ಉದ್ಯೋಗದ ನೇಮಕಾತಿಯಲ್ಲಿ ನೇರವಾಗಿ ಪರೀಕ್ಷೆಗೆ ಪತ್ರ ಬರುತ್ತದೆ. ಭವಿಷ್ಯದಲ್ಲಿ ಉದ್ಯೋಗ ಪಡೆಯಲು ವಿಫುಲ ಅವಕಾಶಗಳಿವೆ. ಕಳೆದ 03 ತಿಂಗಳಲ್ಲಿ 400ಕ್ಕೂ ಹೆಚ್ಚು ಸೀಮಿತ ಅವಧಿಯ (ಟೆನ್ಯೂರ್ ಬೇಸ್)ನೇಮಕಾತಿಯಾಗಿದೆ(ತಿಂಗಳಿಗೆ 46ˌ000ರೂ ಸಂಬಳ ಹಾಗೂ ಇತರೆ ಸೌಲಭ್ಯ)ಮುಂದಿನ ವರ್ಷಗಳಲ್ಲಿ 2500ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ಕರ್ನಾಟಕದ ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿಯನ್ನು ಹಾಕಿ.ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ ಅನ್ಯರಾಜ್ಯದವರ ಪಾಲಾಗುವುದನ್ನು ತಪ್ಪಿಸಬಹುದು, ಇದರ ಸದುಪಯೋಗವನ್ನು ನಾಡಿನ ಜನತೆ ಪಡೆದುಕೊಳ್ಳಲಿ ಎಂಬುದು ಆಶಯವಾಗಿದೆ.