ಬೆಂಗಳೂರು: ಮನುಷ್ಯನ ಸಣ್ಣಪುಟ್ಟ ಕಾಯಿಲೆಗಳಿಗೆ ವೈದ್ಯರು ಅರವಳಿಕೆ ನೀಡುವುದು ಸರ್ವೆ ಸಾಮಾನ್ಯ, ಆದರೆ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ರೋಗಗಳಿಗೆ ಅರವಳಿಕೆ ನೀಡುವುದು ಅಷ್ಟು ಸುಲಭವಲ್ಲ, ಅದಕ್ಕೆ ವಿಶೇಷ ಪರಿಣತಿ ಹೊಂದಿರಬೇಕು ಎಂದು ಅನ್ಕೊ ಅರವಳಿಕೆ ಮತ್ತು ಪೆರಿಆಪರೇಟಿವ್ ಕೇರ್ ಸಮ್ಮೇಳನದ ಅಧ್ಯಕ್ಷ ಡಾ. ರಾಜೇಶ್ ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ 6ನೇ ವರ್ಷದ ರಾಜ್ಯ ಆನ್ಕೊ ಅರವಳಿಕೆ ಮತ್ತು ಪೆರಿಆಪರೇಟಿವ್ ಕೇರ್ ನ 3 ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ ವಿವಿಧ ರಾಜ್ಯಗಳಲ್ಲಿ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಸಮ್ಮೇಳನ ಹಮ್ಮಿಕೊಂಡು ವೈದ್ಯರಿಗೆ ಹಾಗು ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚರ್ಚೆಗಳನ್ನು ಮಾಡಲಾಗಿತ್ತು, ಒಂದು ವರ್ಷದಲ್ಲಿ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಏನೆಲ್ಲ ಹೊಸ ಬೆಳವಣಿಗೆಗಳು ಆಗಿವೆ ಮತ್ತು ತಂತ್ರಜ್ಞಾನ ಬಳಸಿಕೊಂಡಿರುವ ಬಗ್ಗೆ ಚರ್ಚೆಗಳು ನಡೆದವು.
ಸಾಮಾನ್ಯವಾಗಿ ಮನುಷ್ಯನಿಗೆ ಬರುವ ರೋಗಗಳಿಗೆ ಅರವಳಿಕೆ ನೀಡುವುದು ಒಂದು ಕಡೆಯಾದರೆ, ಕ್ಯಾನ್ಸರ್ಗೆ ಸಂಬಂಧಿಸಿದಂತೆ ಕಾಲಿನಿಂದ ತಲೆಯ ವರೆಗೂ ಹರಡುವ ರೋಗಗಳಿಗೆ ನಿಗಾವಹಿಸಿ ಅರವಳಿಕೆ ನೀಡುವುದು ಕಷ್ಟದ ಕೆಲಸ ಎಂದರು.
ಕಳೆದ 5 ವರ್ಷದಲ್ಲಿ ನಡೆದ ಕ್ಯಾನ್ಸರ್ ಗೆ ಸಂಬಂಧಿಸಿದಂತ ಸಮ್ಮೇಳನಕ್ಕಿಂತ ಈ ಭಾರಿ 2024ನಲ್ಲಿ ನಡೆದ ಸಮ್ಮೇಳನ ಹಲವು ವಿಶೇಷತೆಗಳಿಂದ ಕೂಡಿದೆ ಎಂದರು.
2ನೇ ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಪೋಲೋ ಆಸ್ಪತ್ರೆಯಲ್ಲಿ ಹಿರಿಯ ಅರವಳಿಕೆ ತಜ್ಞರಾದ ಡಾ. ಪಿಎಂ ಚಂದ್ರಶೇಕರ ಮಾತನಾಡಿ, ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಹಲವು ಆವಿಷ್ಕಾರಗಳು ಆಗಬೇಕಿದೆ, ಕ್ಯಾನ್ಸರ್ ನಿಂದ ಬಳುತ್ತಿರುವ ರೋಗಿಗಳಿಗೆ ಹೇಗೆಲ್ಲ ಚಿಕಿತ್ಸೆ ನೀಡಬೇಕು ಅದರ ಜೊತೆಗೆ ಅವರವಳಿಕೆ ಎಸ್ಟು ಪ್ರಮಾಣದಲ್ಲಿ ನೀಡಬೇಕು, ರೋಗ ವಾಸಿಯಾಗಲು ಅವರವಳಿಕೆ ಹೇಗೆ ಸಹಕಾರಿಯಾಗುತ್ತವೆ, ರಜತ ನಾಳಗಳಲ್ಲಿ ಅನಸ್ತೇಶಿಯಾ ಯಾವರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸುದೀರ್ಘ ವಾಗಿ ಯುವ ವೈದ್ಯರಿಗೆ ಸಾಕಷ್ಟು ಮಾಹಿತಿಯನ್ನು ತಿಳಿಸಿದರು.
ಸಂಸ್ಥೆಯ ಸದಸ್ಯರಾದ ಡಾ. ವಿನೋದ್ ಮಾತನಾಡಿ, ಕ್ಯಾನ್ಸರ್ಗೆ ಸಂಬಂಧಿಸಿದಂತೆ ಅವರವಳಿಕೆ ಸಮ್ಮೇಳನಗಳು ಅಮೆರಿಕ, ಜರ್ಮನಿಯ ಯಂತಹ ನಗರಗಳಲ್ಲೂ ನಡೆಯುತ್ತಿದ್ದವು, ನಮ್ಮ ದೇಶದಲ್ಲಿಯೂ ಏಕೆ ನಡೆಯಬಾರದು ಎಂಬುದರ ಚಿಂತನೆ ಬಂದಾಗ ಕಳೆದ 6 ವರ್ಷಗಳಿಂದ ನಿರಂತರವಾಗಿ ವಿವಿಧ ರಾಜ್ಯಗಳಲ್ಲಿ ಸಮ್ಮೇಳನ ನಡೆಸಿಕೊಂಡು ಬರಲಾಗಿದೆ, ಕಳೆದ ಭಾರಿ ನವದೆಹಲಿಯಲ್ಲಿ ನಡೆಸಲಾಗಿತ್ತು, ಮುಂಬರುವ ವರ್ಷಗಳಲ್ಲಿ ಚೆನ್ನೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ, ವರ್ಷದಿಂದ ವರ್ಷಕ್ಕೆ ಸಂಘದ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ, ಈ ಭಾರಿ 500 ಜನ ಸದಸ್ಯರು ನೋಂದಾವಣಿ ಮಾಡಿಕೊಂಡಿದ್ದಾರೆ, ಪ್ರತಿ ವರ್ಷದಲ್ಲಿ ಒಂದೊಂದು ಥೀಮ್ ಇಟ್ಟುಕೊಂಡು ಸಮ್ಮೇಳನ ನಡೆಸಲಾಗುತ್ತದೆ ಎಂದರು.
ಸಮ್ಮೇಳನದಲ್ಲಿ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಅನೇಕ ಪೇಪರ್ ಪ್ರೆಸ್ಯಾಂಟೇಷನ್ ಸಹ ವೈದ್ಯರು ಮಾಡಲಾಯಿತು. ಇನ್ನು ಇದೇ ವೇಳೆ ಕ್ಯಾನ್ಸರ್ಗೆ ಅರವಳಿಕೆ ವಿಷಯದಲ್ಲಿ ಹಲವು ಪೇಪರ್ ಗಳು ಪಬ್ಲಿಷ್ ಆಗಿರುವ ಕಾರಣ ಅವರಿಗೆ ಫೆಲೋಷಿಪ್ ನೀಡಲಾಯಿತು. ಸಂಸ್ಥೆಯ 6ನೇ ಘಟಿಕೋತ್ಸವದಲ್ಲಿ 19 ಜನರಿಗೆ ಪದವಿ ಪ್ರದಾನ ಮಾಡಲಾಯಿತು. ಪ್ರದೀಪ ಚೇವಲ ಸೇರಿ ಮತ್ತೋರ್ವ ಯುವತಿ ಚಿನ್ನದ ಪದಕ ಪಡೆದಿರುವುದು ಹೆಗ್ಗಳಿಗೆ ವಿಚಾರವಾಗಿದೆ.
ಇನ್ನು ಸಮ್ಮೇಳನದಲ್ಲಿ ಸಂಘದ ಸದಸ್ಯರಾದ ಡಾ.ಸುನಿಲ್ ಡಾ.ಜೋಸ್ನ, ಡಾ.ನಮ್ರತಾ,ಡಾವಿನೋದ್, ಡಾ.ದಿನೇಶ್ ಸೇರಿದಂತೆ ಕ್ಯಾನ್ಸರ್ ಅರವಳಿಕೆ ತಜ್ಞರು ಇತರರು ಭಾಗವಹಿಸಿದ್ದರು.
ಸಮ್ಮೇಳನದಲ್ಲಿ ಅನೇಕ ಔಷದೀಯ ಕಂಪನಿಗಳು, ವೈದ್ಯಕೀಯ ಯಂತ್ರಗಳ ಬಗ್ಗೆ ಮಾಹಿತಿ ಕೊಡಲು ಸ್ಟಾಲ್ ಹಾಕಿಕೊಳ್ಳುಳಾಗುತ್ತು.