ಬೆಂಗಳೂರು: ವಿವೊ ಸಮೂಹದ ಸಬ್-ಸ್ಮಾರ್ಟ್ ಫೋನ್ ಬ್ರಾಂಡ್ ಐಕ್ಯೂಒಒ ಜಾಗತಿಕ ಮಟ್ಟದಲ್ಲಿ ಅಪಾರವಾದ ಆಶಾವಾದ ಹೊಂದಿದೆ,ವೃತ್ತಿ ಮತ್ತು ಅಕಾಂಕ್ಷೆಗಳ ಆಸಕ್ತಿಯ ಲಕ್ಷಣಗಳು ಮತ್ತು ಪ್ರವೃತ್ತಿಗಳ ತನ್ನ ಮೊದಲ ಥೀಕ್ಕೂ ಕ್ರೈಸ್ಟ್ ರಿಪೋರ್ಟ್ 2024 ಬಿಡುಗಡೆ ಮಾಡಲಾಗಿದೆ ಎಂದು ಐಕ್ಯೂಒಒ ಇಂಡಿಯಾದ ಸಿಇಒ ನಿಪುನ್ ಮಾರ್ಯಾ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಖ್ಯಾತಿ ಮತ್ತು ಯಶಸ್ಸನ್ನು ಅನೈನ್ ಜನಪ್ರಿಯತೆಯಲ್ಲಿ ಅಳೆಯಲಾಗುತ್ತದೆ. ಜೆನ್ ಝೀ ಅವರ ಖ್ಯಾತಿಗೆ ಶ್ರಮಿಸುತ್ತಿದ್ದರೂ ಈ ಪ್ರವೃತ್ತಿಯು ಅಂತಹ ವೃತ್ತಿಗಳ ನೈತಿಕತೆಯ ಕುರಿತು ಪ್ರಶ್ನೆಗಳನ್ನು ಎತ್ತುತ್ತದೆ. ಇನ್ನು ಯೆನ್ಸರ್ ಸಂಸ್ಕೃತಿ ಹೆಚ್ಚಾಗುತ್ತಿರುವುದರಿಂದ ಸ್ಪಾರ್ಟಪ್ ವ್ಯವಸ್ಥೆಯೂ ವಿಸ್ತರಿಸುತ್ತಿದ್ದು ಇದು ವಿಶ್ವದ ಮೂರನೇ ದೊಡ್ಡ ಸ್ಟಾರ್ಟರ್ಪ್ ವ್ಯವಸ್ಥೆಯಾಗಿದೆ. ಈ ಸನ್ನಿವೇಶವು ಯುವಜನರು ಈ ವಿಕಾಸಗೊಳ್ಳುತ್ತಿರುವ ಕ್ಷೇತ್ರದಲ್ಲಿ ‘ಉದ್ಯೋಗ ಸೃಷ್ಟಿಕರ್ತರು” ಅಥವಾ “ಡಿಜಿಟಲ್ ಸೆಲೆಬ್ರಿಟಿಗಳು” ಆಗುತ್ತಿರುವುದನ್ನು ನೋಡಬಹುದಾಗಿದೆ.
ಭಾರತದ ಮೊದಲ ಚೀಫ್ ಗೇಮಿಂಗ್ ಆಫೀಸರ್ ಆಗಿ ನೇಮಕ
ಕಳೆದ ವರ್ಷ ಐಕ್ಯೂಒಒ ಕಾನ್ಸುರದ ಭಾರತದ ಮೊದಲ 23 ವರ್ಷದ ಚೀಫ್ ಗೇಮಿಂಗ್ ಆಫೀಸರ್ ಅನ್ನು ಸೇರ್ಪಡೆ ಮಾಡಿಕೊಂಡಿತು. ನಾವು ಯುವಜನರಿಗೆ ಅವರ ಆಸಕ್ತಿಗಳನ್ನು ಅನ್ವೇಷಿಸುವ ಅವಕಾಶಗಳನ್ನು ಸೃಷ್ಟಿಸಲು ಬದ್ಧರಾಗಿದ್ದೇವೆ. ನಮ್ಮ ಬ್ರಾಂಡ್ ವ್ಯಕ್ತಿಗಳಿಗೆ ಅವರ ಸಾಮರ್ಥ್ಯಗಳನ್ನು ಕಂಡುಕೊಳ್ಳಲು ನೆರವಾಗುವ ಉಪಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ” ಎಂದರು.
ಈ ವರದಿಯ ಕುರಿತು ಸೈಬರ್ ಮೀಡಿಯಾ ರೀಸರ್ಚ್(ಸಿಎಂಆರ್) ಇಂಡಸ್ಟ್ರಿ ರೀಸರ್ಚ್ ಗ್ರೂಪ್ ಉಪಾಧ್ಯಕ್ಷ ಪ್ರಭು ರಾಮ್ ಮಾತನಾಡಿ, ಹೆಚ್ಚಾಗುತ್ತಿರುವ ಡಿಜಿಟಲಿ ಪ್ರೇರಿತ ವಿಶ್ವದಲ್ಲಿ ಯುವಜನರು ಅಸಾಧಾರಣ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸೈಬರ್ ಮೀಡಿಯಾ ರೀಸರ್ಚ್(ಸಿಎಂಆರ್)ನಲ್ಲಿ ನಾವು ಈ ವಿಕಾಸಗೊಳ್ಳುತ್ತಿರುವ ಗ್ರಾಹಕ ಮಾದರಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದೇವೆ. ಸಿಎಂಆರ್, ಐಕ್ಯೂಒಒಗೆ ನಿಯೋಜಿಸಿ ನಡೆಸಿರುವ ಸಂಶೋಧನೆಯು ಏಷ್ಯಾ. ಯೂರೋಪ್, ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾಗಳ ಹೊಸ ತಲೆಮಾರುಗಳ ದೃಷ್ಟಿಕೋನಗಳನ್ನು ಅವಿಷ್ಕರಿಸಿದ್ದು, ಅವರ ಮನಸ್ಥಿತಿಗಳು ಮತ್ತು ಅವರ ಅನ್ವೇಷಣೆ ಕುರಿತು ಮೌಲ್ಯಯುತ ಒಳನೋಟಗಳನ್ನು ನೀಡಿದೆ. ಅದಕ್ಕಿಂತ ಭಾರತದಲ್ಲಿನ ಇಂದಿನ ಯುವಜನರ ಕನಸುಗಳ ಬಗ್ಗೆ ಅರಿತಿದೆ” ಎಂದರು. ಈ ಕ್ವೆನ್ಸ್ ವರದಿಯು ಭಾರತವು ಜಾಗತಿಕ ವೇದಿಕೆಯಲ್ಲಿ ಹೊಂದಿರುವ ಅಪಾರ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ಈ ಗಮನಾರ್ಹ ತಲೆಮಾರನ್ನು ಉತ್ತೇಜಿಸುವ ಆಶಾವಾದವನ್ನು ಎತ್ತಿ ತೋರಿಸುತ್ತದೆ.
ಈ ವರದಿಯ ಕರ್ನಾಟಕದ ಪ್ರಮುಖಾಂಶಗಳು:
ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಯ 2.5 ಪಟ್ಟು ಜೆನ್ ಝೀ ಮುಂಚೂಣಿಯ ಡಿಜಿಟಲ್ ಇನ್ನು ಯೆನ್ನರ್ ಆಗಲು, 2.5 ಪಟ್ಟು ಚೆನ್ ಝೀ ಉದ್ಯಮಿಯಾಗಲು ಮತ್ತು ಸ್ವಾರ್ಟಪ್ ಕೊಸಿಸ್ಟಂ ಭಾಗವಾಗಲು ಬಯಸಿದ್ದಾರೆ.
ಕರ್ನಾಟಕ ಶೇ.49ರಷ್ಟು ಜೆನ್ ಝೀ ಅಡೆತಡೆಗಳನ್ನು ಎದುರಿಸಿದರೂ ಅದರಿಂದ ಕುಗ್ಗಲಿಲ್ಲ.
ಶೇ.30ರಷ್ಟು ಯುವಜನರು ಅವಕಾಶಗಳ ಕೊರತೆಯು ತಡೆಯಾದರೂ ರಾಷ್ಟ್ರೀಯ ಸರಾಸರಿಗಿಂತ ಅವರ ಕನಸುಗಳನ್ನು ಅರಸಿ ಹೋಗುವುದನ್ನು ಪರಿಗಣಿಸುತ್ತಾರೆ.
ಈ ಪ್ರವೃತ್ತಿಯು ಭಾರತಕ್ಕೆ ಹಿಮ್ಮುಖವಾಗಿದ್ದು ಹೆಚ್ಚು ಯುವಜನರು ಪದವಿಯ ನಂತರ ಉನ್ನತ ಶಿಕ್ಷಣ ಹೆಚ್ಚು ಪ್ರಸ್ತುತವಾಗುವುದನ್ನು ನಿರೀಕ್ಷಿಸುತ್ತಿದ್ದಾರೆ.
ಈ ವರದಿಯಲ್ಲಿನ ಪ್ರಮುಖ ಜಾಗತಿಕ ಮತ್ತು ಭಾರತೀಯ ಪ್ರಮುಖಾಂಶಗಳು:
ಭಾರತದಲ್ಲಿ ಶೇ.43ರಷ್ಟು ಮತ್ತು ಜಾಗತಿಕವಾಗಿ ಶೇ.46ರಷ್ಟು ಮಂದಿ ಅವರ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಉದ್ಯೋಗ ಜೀವನ ಸಮತೋಲನ ತ್ಯಜಿಸಲು ಸಿದ್ಧವಾಗಿದ್ದಾರೆ.
ಭಾರತದಲ್ಲಿ 10ರಲ್ಲಿ 8 ಮಂದಿ ಲಿಂಗ ತಾರತಮ್ಯವು ಅವರ ಯಶಸ್ಸಿನ ಅನ್ವೇಷಣೆಯಲ್ಲಿ ಅತ್ಯಂತ ದೊಡ್ಡ ಅಡೆತಡೆ ಎಂದು ನಂಬಿದ್ದಾರೆ.
2 ಪಟ್ಟು ಮಹಿಳೆಯರು ಪುರುಷರಿಗೆ ಹೋಲಿಸಿದರೆ ಅವರ ಕನಸುಗಳಿಗೆ ಲಿಂಗವೇ ಪರಿಣಾಮ ಬೀರುತ್ತದೆ ಎಂದು ಭಾವಿಸುತ್ತಾರೆ.
4ರಲ್ಲಿ 1 ಭಾರತೀಯ ಸಮೀಕ್ಷಿತರು ಕಂಟೆಂಟ್ ಸೃಷ್ಟಿ, ಡೇಟಾ ಅನಾಲಿಸಿಸ್, ಎಐ ಮತ್ತು ಸೈಬರ್ ಭದ್ರತೆಯ ಹೊಸ ಉದ್ಯೋಗ ಕ್ಷೇತ್ರಗಳ ಕಡೆ ವಾಲಿದ್ದಾರೆ.
ಶೇ.91ರಷ್ಟು ಮದಿ ಭಾರತೀಯ ಸಮೀಕ್ಷಿತರು ಅಂತರದ ವರ್ಷವು ಅವರ ಕನಸುಗಳು ಮತ್ತು ಅಕಾಂಕ್ಷೆಗಳಿಗೆ ನೆರವಾಗುತ್ತದೆ.
ಶೇ.46ರಷ್ಟು ಮಂದಿ ಹಣಕಾಸಿನ ಅಡೆತಡೆಗಳು ಅವರ ಆಯ್ಕೆಯ ಉದ್ಯೋಗ ಪಡೆಯಲು ಅಡ್ಡಿಯಾಗಿವೆ ಎಂದು ಭಾವಿಸಿದ್ದಾರೆ.. ಆದರೆ ಶೇ.90ರಷ್ಟು ಮಂದಿ ಅಡೆತಡೆ ಇದ್ದರೂ ಅವರ ಕನಸುಗಳನ್ನು ಈಡೇರಿಸಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ.
ಸೈಬರ್ ಮೀಡಿಯಾ ರೀಸರ್ಚ್ ಜೊತೆಯಲ್ಲಿ ಅನುಷ್ಠಾನಗೊಳಿಸಿದ ಈ ವರದಿಯಲ್ಲಿ 20-24 ವರ್ಷದ 6,700 ಮಂದಿಯನ್ನು ಸಮೀಕ್ಷಿಸಿದ್ದು” ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಯುನೈಟೆಡ್ ಕಿಂಗ್ಲಂ, ಬ್ರೆಜಿಲ್, ಮಲೇಷಿಯಾ, ಥಾಯ್ಲೆಂಡ್ ಮತ್ತು ಇಂಡೋನೇಷ್ಯಾ ಒಳಗೊಂಡು 7 ದೇಶಗಳಲ್ಲಿ ನಡೆಸಲಾಗಿದೆ.