ಬೆಂಗಳೂರು: ಆ.29ರಿಂದ 31ರ ವರೆಗೆ ಭಾರತೀಯ ಬಸ್ ಮತ್ತು ಕಾರ್ ಆಪರೇಟರ್ಸ್ ಸಂಘಗಳ ಒಕ್ಕೂಟದಿಂದ ಪ್ರವಾಸ್ 4.0 ಪ್ರದರ್ಶನವನ್ನು ಬೆಂಗಳೂರಿನ BOCI ಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಖಾಸಗಿ ಸಂಘಟನೆಗಳ ಒಕ್ಕೂಟ ಹಾಗು ರಾಜ್ಯ ಬಸ್ ಮಾಲಿಕರ ಸಂಘದಿಂದ ವಿರೋಧ ವ್ಯಕ್ತವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಭಾರತೀಯ ಬಸ್ ಮತ್ತು ಕಾರ್ ಆಪರೇಟರ್ಸ್ ಒಕ್ಕೂಟ ಅನೇಕ ಕೈಗೊಂಡಿರುವ ಕಾರ್ಯಗಳಿಂದ ರಾಜ್ಯದ ಸಂಘಟನೆಗಳಿಗೆ ಆಗುತ್ತಿರುವ ದೋರಣೆ,ಅನ್ಯಾಯ, ಹಣಕಾಸು ಅವ್ಯವಹಾರ ಸೇರಿದಂತೆ ಅನೇಕ ವಿಚಾರಗಳನ್ನು ವಿರೋಧಿಸಿ ಪ್ರದರ್ಶನ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಲಾಗಿದೆ ಎಂದರು.
ಪ್ರವಾಸ 4.0 ಕಾರ್ಯಕ್ರಮ ವಿರೋಧಕ್ಕೆ ಕಾರಣಗಳು
ಪ್ರವಾಸ 4.0 ಪ್ರದರ್ಶನ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಲು ಪ್ರಮುಖ ಕಾರಣಗಳು ಎಂದರೆ, ಸಂಘನೆಯ್ಯಿಂದ ನಡೆಯುತ್ತಿರುವ ಪ್ರವಾಸ ಕಾರ್ಯಕ್ರಮಕ್ಕೆ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಹಣಕಾಸು ಅಕ್ರಮ,ಪಾರದರ್ಶಕತೆ ಕೊರತೆ ಸೇರಿ ಹಿಂದಿನ 3 ಪ್ರವಾಸಿಗೆ ಸಂಬಂಧಿಸಿದಂತೆ ಸದಸ್ಯರಿಗೆ ಯಾವುದೇ ರಿಯಾಯಿತಿ ಹಣಕಾಸು ಅವ್ಯವಹಾರದ ಮಾಹಿತಿ ನೀಡದೆ ನಿಧಿ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್,ವಾಹನ ಸ್ಥಳ ಪರಿಶೀಲನೆಯ ಡಿವೈಸ್ , ಪ್ಯಾನಿಕ್ ಗುಂಡಿ ಸೇರಿ ಅನೇಕ ಸಮಸ್ಯೆಗಳ ಬಗ್ಗೆ ನಿರ್ವಹಿಸುವಲ್ಲಿ ಸಂಘಟನೆ ಎಡವಿದೆ ಎಂದು ತಿಳಿದು ಬಂದಿದೆ,
ಅಗ್ರಿಗೇಟರ್ ಸಮಸ್ಯೆ, boic ಅವ್ಯವಹಾರ ಬಗ್ಗೆ ಅನೇಕ ದೂರುಗಳು ದಾಖಲಾಗಿವೆ, ಸಂಘಟನೆಯ ಪ್ರದಾನ ಕಾರ್ಯದರ್ಶಿ ದಿವಾಳಿಯಾಗಿದ್ದರು ಅಧಿಕಾರದಲ್ಲಿ ಮುಂದುವರಿಕೆ, ಆಡಳಿತದಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತದೆ, ಸಂಘಟನೆಯ ಬೈಲಾ ವನ್ನೇ ಉಲ್ಲಂಘನೆ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಒಕ್ಕೂಟದ ಬದಲಾಗಿ ಸಂಘವನ್ನಾಗಿ ಮಾಡಿಕೊಂಡು ಅನರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ.
ಉದ್ಯಮದ ಸಮಸ್ಯೆ ಪರಿಹರಿಸುವಲ್ಲಿ ಸಾಕಷ್ಟು ವಿಫಲವಾಗಿದ್ದಾರೆ. VLTD, ಪ್ಯಾನಿಕ್ ಗುಂಡಿ ಹಗರಣಗಳ ಬಗ್ಗೆ ಒಕ್ಕೂಟವು ಯಾವುದೇ ಧ್ವನಿ ಎತ್ತದಿರುವುದು, AiTP ಗೆ ತಿದ್ದುಪಡಿಗಳನ್ನು ಹುಡುಕುವಲ್ಲಿ ವಿಫಲವಾಗಿದ್ದಾರೆ. ಒಕ್ಕೂಟವು ನಿರಾಂಕುಶಾಧಿಕಾರದ ನಿರ್ಧಾರವನ್ನು ಕೈಗೊಂಡಿರುವುದರ ವಿರುದ್ಧ,ಒಕ್ಕೂಟದಲ್ಲಿ ಕಳಂಕಿತ ಪ್ರತಿನಿಧಿಗಳು ಇದ್ದು, ಅವರನ್ನು ಒಕ್ಕೂಟಕ್ಕೆ ನಾಮ ನಿರ್ದೇಶನ ಮಾಡಲಾಗಿರುವುದು ವಿಪರ್ಯಾಸ ಎಂದು ಹಲವು ಕಾರಣಗಳನ್ನು ರಾಜ್ಯದ ಒಕ್ಕೂಟವು ಪ್ರವಾಸ 4.0 ಪ್ರದರ್ಶನವನ್ನು ಬಹಿಷ್ಕರಿಸುತ್ತದೆ ಎಂದರು.
ಭಾರತೀಯ ಬಸ್ ಮತ್ತು ಕಾರ್ ಆಪರೇಟರ್ಸ್ ಒಕ್ಕೂಟ ನಡೆಸುವ ಪ್ರವಾಸ ಕಾರ್ಯಕ್ರಮಕ್ಕೆ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಮಧ್ಯಪ್ರದೇಶ, ಸೇರಿದಂತೆ ಅನೇಕ ರಾಜ್ಯಗಳು ಪ್ರವಾಸ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ನಮಗೆ ಸಂಪೂರ್ಣ ಬೆಂಬಲ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಎಸ್ ರಘು,ರಾಜ್ಯ ಬಸ್ ಮಾಲಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಸೇರಿದಂತೆ ಮತ್ತಿತ್ತರ ಸಂಘಟನೆಗಳ ಮುಖಂಡರು ಇದೇ ವೇಳೆ ಉಪಸ್ಥಿತರಿದ್ದರು.