ಶಿರಾ/ಬರಗೂರು: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಭೆಗಳಿದ್ದು , ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸಿ ತನ್ನಲ್ಲಿರುವ ಪ್ರತಿಭೆಯಿಂದಲೇ ರಾಜ್ಯ ಮಟ್ಟದಲ್ಲಿ ಬೆಳಗುವಂತಾಗಲಿ ಎಂದು ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಡಿಎನ್ ಪರಮೇಶ್ ಗೌಡ ಹೇಳಿದರು.
ಶಿರಾ ತಾಲೂಕಿನ ಬರಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ನಡೆದ ಬರಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಪ್ರಶಸ್ತಿ ಸೂಕ್ತ ಪ್ರತಿಭೆಗಳಿಗೆ ಪುರಸ್ಕಾರ ದೊರೆಯುವಂತಾಗಲಿ ಎಂದರು.
ಮಕ್ಕಳ ಕಲಿಕೆಗೆ ಶಾಲೆಗಳು ಪ್ರೋತ್ಸಾಹ ನೀಡಿ!ಗೋವಿಂದಪ್ಪ
ಇಸಿಓ ಗೋವಿಂದಪ್ಪ ಮಾತನಾಡಿ ನಮ್ಮ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿಗಳನ್ನು ಆಯೋಜನೆ ಮಾಡುವ ಮೂಲಕ ಶಾಲಾ ಮಕ್ಕಳ ಕಲಿಕೆ ಜೊತೆಗೆ, ಮನೋ ಉಲ್ಲಾಸವನ್ನು ಹೆಚ್ಚಿಸಿ ಕಲಿಕೆಯಲ್ಲಿ ಹೆಚ್ಚು ಆಸಕ್ತಿಯನ್ನು ಮೂಡಿಸುವಂತ ಮಹತ್ವದ ಕೆಲಸ ಮಾಡುತ್ತಿದೆ, ಮಕ್ಕಳ ಜ್ಞಾನ ವಿಕಾಸನಗೊಳಿಸುವಲ್ಲಿ ಸಹಕಾರಿಯಾಗುತ್ತದೆ ನಿಮ್ಮ ಶಾಲೆಗಳಿಗೆ ಕೀರ್ತಿ ತಂದು ಕೊಡುವಂತೆ ಪ್ರೋತ್ಸಾಹಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಭೀಮಣ್ಣ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು, ಕಾರ್ಯದರ್ಶಿ ಗೀತಾ ಸುರೇಶ್ ಸಂಘಟನಾ ಕಾರ್ಯದರ್ಶಿ ಮಂಜಮ್ಮ, ಲಿಟಲ್ ರೋಸಸ್ ಶಾಲಾ ಪ್ರಾಂಶುಪಾಲ ಡಿವಿ ಶಿವಪ್ರಸಾದ್, ದಿ ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮೈಲಾರಪ್ಪ, ಇಸಿಓ ಗೋವಿಂದಪ್ಪ, ಶಾಲಾ ಮುಖ್ಯ ಶಿಕ್ಷಕಿ ಗೌರಮ್ಮ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಡಿ ಮಾಲತಿ, ಎನ್ಜಿಓ ನಿರ್ದೇಶಕ ದೇವರಾಜ್, ಕೃಷ್ಣಮೂರ್ತಿ, ಸಿಆರ್ಪಿ ರಮೇಶ್, ಶ್ಯಾಮ, ನಿವೃತ್ತ ಶಿಕ್ಷಕ ಯುವರಾಜ್, ಕೆಂಪ ರಂಗಪ್ಪ, ಚಂದ್ರಶೇಖರಯ್ಯ ಈ, ಶಿವಣ್ಣ. ಶ್ರೀ ಸಿದ್ದಗಂಗಾ ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಹರೀಶ್,ಗ್ರಾಮ ಪಂಚಾಯಿತಿ ಸದಸ್ಯ ರಾಘವೇಂದ್ರ, ಹನುಮಂತಪ್ಪ (ಭಕ್ತಪ್ಪ ), ಹನುಮಂತಪ್ಪ, ಹಲವಾರು ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಅತಿಥಿ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಹಳೆಯವಿದ್ಯಾರ್ಥಿಗಳು ,ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಹಲವು ಶಾಲೆಗಳ ಶಿಕ್ಷಕರಿಗೆ, ಮುಖ್ಯ ಶಿಕ್ಷಕರಿಗೆ ಹಾಗೂ ಗಣ್ಯರಿಗೆ ಸನ್ಮಾನವನ್ನು ಸಹ ಇದೇ ವೇಳೆ ಮಾಡಲಾಯಿತು.ಬರಗೂರು ಕ್ಲಸ್ಟರ್ ಮಟ್ಟದ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಛದ್ಮಾವೇಶ ವಿಷ್ಣುವಿನ, ಕೃಷ್ಣ,ರಾಧೆ, ಸೇರಿ ವಿವಿಧ ಬಗೆಯ ವೇಷ ಭೂಷಣದಲ್ಲಿ ಕಂಗೊಳಿಸಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು.