ಬೆಂಗಳೂರು: ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್ ಗಳು ಕಠಿಣ ಪರಿಸ್ಥಿಯಲ್ಲಿ ಕಾರ್ಯನಿರ್ವಹಿಸಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ, ರಾಷ್ಟ, ದೇಶ ಕಟ್ಟಲು ಅಭಿಯಂತರರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ತಿಳಿಸಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೌಕರರ ಭವನದ ಬಸವ ಸಭಾಂಗಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ ಪ್ರಯುಕ್ತ ಇಂಜಿನಿಯರ್ ದಿನಾಚರಣೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಭಿಯಂತರರು ಕಠಿಣ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಿ ಅವಿರತ ಸೇವೆ ಸಲ್ಲಿಸುತ್ತೀದ್ದೀರಾ. ರಾಷ್ಟ, ದೇಶ ಕಟ್ಟಲು ಅಭಿಯಂತರರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆಡಳಿತದ ಜೊತೆ ಇಂಜಿನಿಯರ್ ಗಳು ಕೈ ಜೋಡಿಸಿದರೆ ಉತ್ತಮ ನಾಡು ಕಟ್ಟಲು ಸಾಧ್ಯವಾಗುತ್ತದೆ ಎಮದು ಹೇಳಿದರು.
ಸರ್.ಎಂ ವಿಶ್ವೇಶ್ವರಯ್ಯ ರವರು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಿದ್ದು, ಅವರ ಸಾಕಷ್ಟು ಕೆಲಸಗಳು ಇಂದಿಗೂ ಶಾಶ್ವತವಾಗಿ ಉಳಿದಿವೆ. ರಾಜ್ಯ ಶ್ರೀಮಂತಗೊಳಿಸಲು ರಾಜರು ಹಾಗೂ ವಿಶ್ವೇಶ್ವರಯ್ಯ ರವರು ನೀಡಿರುವ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು.
ಸಮಾಜ ಕಟ್ಟುವ ಕೆಲಸ ಇಂಜನಿಯರ್ ಗಳು ಮಾಡುತ್ತಿದ್ದಾರೆ.ಸರ್.ಎಂ.ವಿಶ್ವೇಶ್ವರಯ್ಯರವರು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ.ರಾಜ್ಯ ಶ್ರೀಮಂತ ಗೊಳಿಸಲು ಮೈಸೂರು ಮಹಾರಾಜರು, ವಿಶ್ವೇಶ್ವರಯ್ಯರವರ ಕೊಡುಗೆ ಅಪಾರ.ಇಂಜನಿಯರ್ ಮತ್ತು ವೈದ್ಯರು, ಪೌರ ಕಾರ್ಮಿಕರ,ವೃತಿಪರ ಕೆಲಸ ಮಾಡುವವರಿಗೆ ಗೌರವ ಕೊಡಬೇಕು.ಖಾಸಗಿ ವಲಯ ಆರ್ಥಿಕವಾಗಿ ಸಂಪಾದನೆ ಮಾಡುತ್ತಾರೆ ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಜನ ಸೇವೆ ಮಾಡುತ್ತಿದ್ದಾರೆ ಇಂಜನಿಯರ್ ಗಳು ಕಣ್ಣಿಗೆ ಕಾಣುವ ಕೆಲಸ ಮಾಡುತ್ತಾರೆ. ಎಲ್ಲ ತಂತ್ರಜ್ಞಾನವನ್ನು ಬಳಸಿ ಅಭಿವೃದ್ದಿಯತ್ತ ಸಾಗುತ್ತಿದ್ದೇವೆ.
ಕೆ.ಟಿ.ನಾಗರಾಜುರವರು ಮಾತನಾಡಿ, ಸರ್.ಎಂ.ವಿ.ಹುಟ್ಟುಹಬ್ಬದ ದಿನದಂದು ದೇಶದಲ್ಲಿ ಇಂಜನಿಯರ್ ದಿನಾಚರಣೆ ಅಚರಿಸಲಾಗುತ್ತಿದೆ. ಸರ್.ಎಂ.ವಿ.ಅವರಷ್ಟು ಕೀರ್ತಿಗಳಿಸಿದ ಇನ್ನೂಬ್ಬ ಇಂಜನಿಯರ್ ಇಲ್ಲ.ರಾಜಕೀಯ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವಾರು ಮಹನೀಯರುಗಳು ಭಾರತರತ್ನ ಪಡೆದಿದ್ದಾರೆ, ತಾಂತ್ರಿಕ ಕ್ಷೇತ್ರದಲ್ಲಿ ಭಾರತರತ್ನ ಪಡೆದವರು ಸರ್.ಎಂ.ವಿರವರು.ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿ ಆಡಳಿತ ನಡೆಸಿದರು, ಮಹಾರಾಜರ ಪ್ರೀತಿಗೆ ಪಾತ್ರರಾಗಿದ್ದರು.ಡಾ.ರಾಜ್ ಕುಮಾರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಕನ್ನಡ ನಾಡಿನ ಜನರ ಹೃದಯ ಗೆದ್ದಿದ್ದಾರೆ.ಹಿಂದಿನ ಕಾಲದಲ್ಲಿ ಯಾವುದೇ ವ್ಯವಸ್ಥೆ, ತಾಂತ್ರಿಕ ಸಲಕರಣೆ ಇಲ್ಲದೇ ಇದ್ದರು ಸಹಾ ಸರ್.ಎಂ.ವಿ.ರವರ ತಂತ್ರಜ್ಞಾನಕ್ಕೆ ಕೊರತೆ ಇರಲ್ಲಿಲ.
ಸುಣ್ಣ, ಇಟ್ಟಿಗೆ, ಮಣ್ಣನ್ನು ಬಳಸಿ ಕೆ.ಆರ್.ಎಸ್.ಡ್ಯಾಂ ಕಟ್ಟಿದ್ದಾರೆ 90ವರ್ಷವಾದರು ಇಂದು ಕೊಡ ಉತ್ತಮ ಸ್ಥಿತಿಯಲ್ಲಿದೆ.ಸರ್.ಎಂ.ವಿ.ತಮ್ಮ ಸಂಬಳದ ಮೂರು ಲಕ್ಷ ರೂಪಾಯಿಯನ್ನು ಎಸ್.ಜೆ.ಪಿ.ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ ಮಾಡಿದರು , ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದರು.ಭದ್ರಾವತಿ ಕಾರ್ಖಾನೆ ಮತ್ಕು ಮೈಸೂರು ಡ್ಯಾಂ ನಿರ್ಮಾಣದ ರೂವಾರಿ ಸರ್.ಎಂ.ವಿ.ರವರ ಕುರಿತು ಮಹಾತ್ಮ ಗಾಂಧಿಜೀರವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಿದರು.
ಪಾಲಿಕೆ ಪ್ರದಾನ ಅಭಿಯಂತರಾದ ಪ್ರಹ್ಲಾದ್ ರವರು ಮಾತನಾಡಿ, ಪಾಲಿಕೆಯಲ್ಲಿ ಕಂದಾಯ, ಇಂಜನಿಯರ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ನೌಕರರು ಎಲ್ಲರು ಒಟ್ಟಾಗಿ ಕೆಲಸ ಮಾಡಿದಾಗ ಬೆಂಗಳೂರು ಅಭಿವೃದ್ದಿ ವೇಗ ಹೆಚ್ಚುತ್ತದೆ.ಪದವಿ ನಿನಗೋಸ್ಕರ ಅಲ್ಲ ಜನಸೇವೆಗೆ ಎಂದು ಸರ್.ಎಂ.ವಿ.ರವರು ಹೇಳಿದ್ದರು.ಸರ್.ಎಂ.ವಿ.ಆದರ್ಶ ಸಿದ್ದಾಂತದಲ್ಲಿ ಬಿಬಿಎಂಪಿ ಇಂಜನಿಯರ್ ಗಳು ಕೆಲಸ ಮಾಡಬೇಕು ಎಂದು ಹೇಳಿದರು.
ಇಂಜನಿಯರ್ ಸಂಘದ ಮಾಜಿ ಅಧ್ಯಕ್ಷ ನಾಗಾರಾಜು ರವರು ಮಾತನಾಡಿ, ಸರ್.ಎಂ.ವಿ.ರವರ ಆದರ್ಶ ಮತ್ತು ತತ್ವಗಳನ್ನು ಎಲ್ಲ ಇಂಜನಿಯರ್ ಗಳು ಆಳವಡಿಸಿಕೊಳ್ಳಬೇಕು, ದಶಕಗಳ ಕಾಲವಾದರು ಸಹ ದೇಶದ ಜನರು ಸರ್.ಎಂ.ವಿ.ಯವರನ್ನು ಇಂದು ಸಹ ನೆನಪು ಮಾಡಿಕೊಳ್ಳುತ್ತಾರೆ.ಸರ್ಕಾರ ಒಂದು ರೂಪಾಯಿ ಅನವ್ಯಶಕವಾಗಿ ಖರ್ಚು ಮಾಡುತ್ತಿರಲಿಲ್ಲ, ಪ್ರವಾಸದಲ್ಲಿ ಊಟ, ಉಳಿದುಕೊಳ್ಳುವ ವೆಚ್ಚವನ್ನು ಸ್ವಂತ ಭರಿಸಿ, ಸರ್ಕಾರದ ಹಣವನ್ನು ಉಳಿಸಿದರು.
ವಾರದ ಮನೆಯ ಊಟ, ಬೀದಿ ದೀಪದ ಕೆಳಗಿ ಓದಿ, ದೇಶ ಸೇವೆ, ಈಶ ಸೇವೆ ಎಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಯನ್ನು ಸರ್.ಎಂ.ವಿ. ಮಾಡಿದ್ದಾರೆ.ನಿಸ್ವಾರ್ಥವಾಗಿ , ಯಾವುದೇ ಕಾರಣಕ್ಕೂ ರಾಜಿಯಾಗದೇ ತಮ್ಮ ನಿಲುವುಗೆ ಬದ್ದರಾಗಿ ಕೆಲಸ ಮಾಡಿ ದೇಶ ಕಂಡ ಸರ್ವ ಶೇಷ್ಠ ಇಂಜನಿಯರ್ ಎಂ ಕೀರ್ತಿಗೆ ಸರ್.ಎಂ.ವಿ.ಪಾತ್ರರಾದರು ಎಂದು ಹೇಳಿದರು.
ಸಂಘದ ರಾಜ್ಯಾಧ್ಯಕ್ಷರಾದ ಅಮೃತ್ ರಾಜ್ , ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಎಸ್.ಜಿ.ಸುರೇಶ್, ಕೆ.ಜಿ.ರವಿ, ಡಿ.ರಾಮಚಂದ್ರ, ಡಾ.ಶೋಭ, ರೇಣುಕಾಂಬ, ಮಂಜೇಗೌಡ, ಬಿ.ರುದ್ರೇಶ್, ಮಂಜುನಾಥ್ ಎನ್,ಸಂತೋಷ್ ಕುಮಾರ್ ನಾಯ್, ಹೆಚ್.ಬಿ.ಹರೀಶ್, ವಿ.ಉಮೇಶ್, ಸಂತೋಷ್, ನರಸಿಂಹರವರು ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಪಾಲ್ಗೊಂಡಿದ್ದರು.
ಈ ವೇಳೆ ವಿಶೇಷ ಆಯುಕ್ತರುಗಳಾದ ಡಾ. ಕೆ.ಹರೀಶ್ ಕುಮಾರ್, ಅವಿನಾಶ್ ಮೆನನ್ರಾಜೇಂದ್ರನ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪ್ರಧಾನ ಅಭಿಯಂತರಾದ ಬಿ.ಎಸ್. ಪ್ರಹ್ಲಾದ್, ಮುಖ್ಯ ಅಭಿಯಂತರರು, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾಧಕ ಇಂಜಿನಿಯರಿಗಳಿಗೆ ಸನ್ಮಾನ
ಸರ್.ಎಂ.ವಿಶ್ವೇಶ್ವರಯ್ಯರವರ ಸ್ಮರಣೆಯ ಅಂಗವಾಗಿ ಸಾಧಕ ಇಂಜನಿಯರ್ ಗಳಿಗೆ ಸನ್ಮಾನ ಮಾಡಲಾಗಿದೆ. ಇಂಜಿನಿಯರ್ ಗಳು ಮಾತ್ರವಲ್ಲದೆ ಪೌರಕಾರ್ಮಿಕರು, ವೈದ್ಯರು ಸೇರಿದಂತೆ ಇನ್ನಿತರೆ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರನ್ನು ನಾವು ಸ್ಮರಿಸಬೇಕು. ಎಲ್ಲಾ ವಲಯಗಳು ಒಟ್ಟುಗೂಡಿ ಕೆಲಸ ಮಾಡಿದರೆ ಮಾತ್ರ ಹೆಚ್ಚು ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.
ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪಡೆದವರ ವಿವರ:
1. ಶ್ರೀಮತಿ ಸುಗುಣ, ಮುಖ್ಯ ಅಭಿಯಂತರರು(ಪೂರ್ವ ವಲಯ)
2. ಬಸವರಾಜ್ ಆರ್. ಕಬಾಡೆ, ಮುಖ್ಯ ಪ್ರಧಾನ ವ್ಯವಸ್ಥಾಪಕರು(ಬಿ.ಎಸ್.ಡಬ್ಲ್ಯೂ.ಎಂ.ಎಲ್)
3. ಹೆಚ್.ಎಸ್. ಮಹದೇಶ್, ಅಧೀಕ್ಷಕ ಅಭಿಯಂತರರು.
4. ರೂಪೇಶ್, ಕಾರ್ಯಪಾಲಕ ಅಭಿಯಂತರರು.
5. ಮುನಿರೆಡ್ಡಿ, ಕಾರ್ಯಪಾಲಕ ಅಭಿಯಂತರರು.
6. ಎಲ್ ವೆಂಕಟೇಶ್, ಕಾರ್ಯಪಾಲಕ ಅಭಿಯಂತರರು(ಕೆರೆಗಳು)
7. ರಾಮಚಂದ್ರಪ್ಪ ಹೆಚ್.ಎಸ್., ಕಾರ್ಯಪಾಲಕ ಅಭಿಯಂತರರು(ಜೆಡಿಟಿಪಿ, ದಕ್ಷಿಣ ವಲಯ)
8. ರಾಜಣ್ಣ, ಕಾರ್ಯಪಾಲಕ ಅಭಿಯಂತರರು(ಟಿವಿಸಿಸಿ)
9. ಬಿ. ಶರತ್, ಕಾರ್ಯಪಾಲಕ ಅಭಿಯಂತರರು(ಎಂಪಿಇಡಿ)
10. ಬಿ.ಎನ್.ಪ್ರದೀಪ್, ಕಾರ್ಯಪಾಲಕ ಅಭಿಯಂತರರು.
11. ಶ್ರೀಮತಿ ಅಶಾ, ಕಾರ್ಯಪಾಲಕ ಅಭಿಯಂತರರು.
12. ಚಂದ್ರಶೇಖರ್ ನಾಯಕ್, ಸಹಾಯಕ ಅಭಿಯಂತರರು(ಟಿಡಿಆರ್)