ಬೆಂಗಳೂರು: ಪ್ರಸ್ತುತ ಆರೋಗ್ಯ ಹಾಗು ಆಯುರ್ವೇದ ಪದ್ಧತಿಯನ್ನು ಜನರು ಕಡೆಗಣಿಸುತ್ತಿದ್ದಾರೆ ಎಂದು ಮಂತ್ರಾಲಯದ ರಾಘವೇಂದ್ರ ಮಠದ ಸುಭುದೇಂದ್ರ ತೀರ್ಥ ಮಹಾಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯುಷ್ ಟಿವಿ ಯವರು ರಾಷ್ಟೀಯ ಆರೋಗ್ಯ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆರೋಗ್ಯದ ರಕ್ಷಣೆಯಾದಾಗ ಮಾತ್ರ ಎಲ್ಲವೂ ಕ್ಷೇಮ, ಮನುಷ್ಯನಿಗೆ ಆರೋಗ್ಯ ಪ್ರದಾನವಾಗಿದೆ, ಪರಿಸರ, ಆಹಾರ,ಪ್ರಕೃತಿ ಸೇರಿದಂತೆ, ಪ್ರತಿಯೊಂದರಲ್ಲೂ ಇದೆ, ಜನರಿಗೆ ಆಹಾರದ ಪದ್ಧತಿ ಗೊತ್ತಿರಬೇಕು. ಶರೀರದ ದೃಢತೆಯನ್ನು ಸಂಪಾದಿಸುವ ಬಗ್ಗೆ ಅರಿವಿರಬೇಕು. ಹಿಂದಿನ ಕಾಲದಲ್ಲಿ ಋಷಿ ಮುನಿಗಳ ಆಹಾರ ಪದ್ಧತಿಗೆ ಹೆಚ್ಚು ಹೊತ್ತು ಕೊಡುತ್ತಿದ್ದರು. ಅದೇ ರೀತಿ ದೀರ್ಘಾಯುಷ್ಯ ಯಾಗಿ ಇರುತ್ತಿದ್ದರು, ಅದರ ಜೊತೆಗೆ ಜನರಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಬೇಕು.
ವಿವಿಧ ಕ್ಷೇತ್ರದಲ್ಲಿರುವ ಯುನಾನಿ, ಸಿದ್ದ ,ಹೋಮಿಯೋ ಪತಿ, ಆಯುರ್ವೇದ, ಇವೆ , ಆದರೆ ಅವೆಲ್ಲವೂ ಸಹಾ ವೇದದ ಮೂಲಕವೇ ಆಯುರ್ವೇದ ಬಂದಿವೆ, ಪ್ರಸ್ತುತ ಆಯುರ್ವೇದವನ್ನು ನಾವು ಕಡೆಗಣಿಸುತ್ತಿದ್ದೇವೆ, ಔಷಧಿಯನ್ನು ಗುರುತಿಸಲು ಆಗುತ್ತಿಲ್ಲ, ಸರಿಯಾದ ವೈದ್ಯರು ಕೊರತೆ ಇದೆ, ಇವೆಲ್ಲದರ ಬಗ್ಗೆ ಆಯುಷ್ ಸಂಸ್ಥೆ ಗುರುತಿಸುವ ಕೆಲಸ ಮಾಡುತ್ತಿದೆ.
ಕರ್ನಾಟಕದ ಬಹುಪಾಲು ಆರೋಗ್ಯದ ಬಗ್ಗೆ ಗಣನೀಯವಾಗಿ ಸೇವ್ ಸಲ್ಲಿಸುವ ಸಾಧಕರನ್ನು ಗುರುತಿಸುವ ಕೆಲಸವನ್ನು ಮಾಡುತ್ತಿದೆ, ಪ್ರಶಸ್ತಿ ಪಡೆದವರು ನಿಜವಾದ ಸಾಧಕರು, ಅವರು ಎಲೆ ಮರೆ ಕಾಯಿಯಂತೆ ಸಮಾಜಕ್ಕೆ ದುಡಿಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಂತ್ರಾಲಯದ ರಾಘವೇಂದ್ರ ಮಠದ ಸುಭುದೇಂದ್ರ ತೀರ್ಥ ಮಹಾಸ್ವಾಮಿ, ದಿನೇಶ್ ಗುಂಡೂರಾವ್, ಅರುಣಾಚಲಂ, ಸಾಯಿರಾಂ ಆಯರ್ ಪ್ರಶಸ್ತಿ ಪಡೆದವರು, ಈರಣ್ಣ ಕಡಾಡಿ ಉತ್ತರ ಕರ್ನಾಟಕದ ಸಂಸದರು, ಜೀವಮಾನ ಸಾಧನೆಗಾಗಿ ವ್ಯಾಸ ಯೋಗ ವಿವಿಯ ವಿಸಿಯಾದ ನಾಗೇಂದ್ರ ಗುರೂಜಿ , ಪದ್ಮಶ್ರೀ ಖಾದರ್ ವಲ್ಲಿ ಸಿರಿಧಾನ್ಯ ಸಂತ, ಚಂಚಲಪತಿ ದಾಸ್ ಅಕ್ಷಯಪಾತ್ರೆ ಸಂಸ್ಥೆ, ಡಾ.ಗಿರಿದರ್ ಖಜೆ ಆಯುರ್ವೇದ, ಕ್ಷೇಮವನದ ನಿರ್ದೇಶಕರಾದ ಡಾ ಶ್ರದ್ಧ ಅಮಿತ್, ಪ್ರಿಯಾಂಕ ಉಪೇಂದ್ರ, ನಾಡೋಜ ಡಾ.ಬಿಟಿ ರುದ್ರೇಶ್ ಹೋಮಿಯೋಪತಿ, ಡಾ.ಆಂಜನಪ್ಪ ಗಾಸ್ಟ್ರೋ ಎಂಟ್ರೂಲಾಜಿಸ್ಟ್ ಸರ್ಜರಿ ವಿಭಾಗ, ಡಾ.ಶುಹಾಬುದ್ದೀನ್ ಜಿಲ್ಲಾ ಯುನಾನಿ ಸಂಸ್ಥೆ ಹೀಗೆ ನೂರಾರು ಜನ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಯಿತು.