ಬೆಂಗಳೂರು: ಉಪ ಮುಖ್ಯಮಂತ್ರಿಯವರಾದ ಡಿ.ಕೆ ಶಿವಕುಮಾರ್ ರವರಿಂದ ರಸ್ತೆ ಗುಂಡಿ ಮುಚ್ಚಿರುವ, ಮುಚ್ಚುವ ಕಾರ್ಯ ಹಾಗೂ ಇನ್ನಿತರೆ ಕಾಮಗಾರಿಗಳ ಪರಿಶೀಲನೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ರಸ್ತೆ ಗುಂಡಿ ಮುಚ್ಚಿರುವ, ಮುಚ್ಚುವ ಕಾರ್ಯ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರು ತಡರಾತ್ರಿ ವರೆಗೆ ನಗರ ಪರಿಶೀಲನೆ ನಡೆಸಿದ್ರು,
ಈ ವೇಳೆ ಸ್ಥಳೀಯ ಶಾಸಕರಾದ ಬಿಡಿಎ ಅಧ್ಯಕ್ಷರಾದ ಎನ್.ಎ ಹ್ಯಾರೀಶ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಬಿಎಂಆರ್.ಡಿ.ಎ ಆಯುಕ್ತರಾದ ರಾಜೇಂದ್ರ ಚೋಳನ್, ವಿಶೇಷ ಆಯುಕ್ತರಾದ ಡಾ. ಕೆ ಹರೀಶ್ ಕುಮಾರ್, ವಲಯ ಆಯುಕ್ತರಾದ ಸ್ನೇಹಲ್ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
1. ಜಯಮಹಲ್ ರಸ್ತೆಯಲ್ಲಿ ಡಾಂಬರೀಕರಣ ಕೆಲಸದ ತಪಾಸಣೆ:
• ಜಯಮಹಲ್ ರಸ್ತೆಯಲ್ಲಿ ಡಾಂಬರೀಕರಣ ಹಾಕಿರುವುದನ್ನು ಹಾರೆ ಮೂಲಕ ಗುಣಮಟ್ಟ ಪರಿಶೀಲಿಸಿದರು.
• ಪರಿಶೀಲನೆಯ ವೇಳೆ ಗುಣಮಟ್ಟವನ್ನು ಕಾಪಾಡಿರುವುದನ್ನು ಖಾತರಿಸಿಪಡಿಸಕೊಂಡರು.