ಬೆಂಗಳೂರು: ಅಬ್ದುಲ ಕಲಾಂ ಅವರ ಚಿಂತನೆ, ಸರಳತೆಯನ್ನು ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ ಎನ್ ಮಂಜುನಾಥ್ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅಭಿನಂದನೆ ಸ್ವೀಕರಿಸಿ ಮಂಜುನಾಥ್ ಮಾತನಾಡಿ, ಸಂಘಕ್ಕೆ ಅಬ್ದುಲ್ ಕಲಾಂ ಹೆಸರನ್ನು ಶಾಲಿನಿ ಅವರು ಹಾರಿಸಿಕೊಂಡಿರುವುದು ಹೆಗ್ಗಳಿಕೆಯಾಗಿದೆ. ಅಬ್ದುಲ್ ಕಲಾಂ ಅವರ ಚಿಂತನೆಗಳು ಇದೆ ಎಂದರೆ ಅವರ ಚಿಂತನೆ, ಸರಳತೆಗಳನ್ನು ಬೆಲೆ ಕಟ್ಟಲು ಹಾಗುವುದಿಲ್ಲ, ಕಲಾಂ ಅವರು ರಾಷ್ಟ್ರಪತಿಯಾಗಿದ್ದರು ಸಹಾ ವಿದ್ಯಾರ್ಥಿಯಾಗಿದ್ದರು. ಯಾವ ರೀತಿ ಒಡನಾಟ ಇಟ್ಟುಕೊಂಡಿರುತ್ತೀವಿ ಅವರಂತೆ ಬೆಳೆಯುತ್ತೇವೆ, ಕಲಾಂ ಅವರ ನೆನಪಿನಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಗಿಡಗಳನ್ನು ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಸನ್ಮಾನ ಮೌನ್ ವಾಗಿರಬೇಕು ಸಾಧನೆ ಮಾತಾಗಿರಬೇಕು ಎಂದರು.
ಪ್ರಾಮಾಣಿಕವಾಗಿ ಕೆಲಸ ಮಾಡಿ, ತೃಪ್ತಿ ಸಿಗುತ್ತದೆ
ಎಲ್ಲಾ ಪದವೀಧರರು ವಿದ್ಯಾವಂತರಲ್ಲ, ಎಲ್ಲಾ ಪದವಿದಾರರು ಜ್ಞಾನಿಗಳಲ್ಲ, ಪುರಾತನ ಕಾಲದಲ್ಲಿ ಸಾಕ್ಷರತೆ ಕಡಿಮೆಯಿತ್ತು ಸಂಸ್ಕಾರ 80 ರಷ್ಟು ಇತ್ತು, ಆದರೆ ಸಾಕ್ಷರತೆ ಈಗ ಹೆಚ್ಚು ಇದೆ ಸಂಸ್ಕಾರ ಮರೆತಂತಿದೆ ಎಂದರೆ ದುರಂತದ ವಿಚಾರ ಎಂದರು. ಕಾಲ ಬದಲಾಗಿಲ್ಲ ಜನರ ನಿರೀಕ್ಷೆ, ಆಸೆಗಳು ಬದಲಾಗಿವೆ, ಕಾಯಿಲೆಗಳು ಹೆಚ್ಚಾಗಿದೆ, ನಾವು ನಮ್ಮ ಕೆಲಸವನ್ನು ಇಸ್ಟಪಟ್ಟು ಪ್ರೀತಿಯಿಂದ ಮಾಡಿ ಇಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು ಎಂದರು, ಒಬ್ಬರು ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಿಲ್ಲ ಎಲ್ಲರೂ ಒಬ್ಬರಿಗೆ ಸಹಾಯ ಮಾಡಬಹುದು ಎಂದರು.
ನಾವು ಸರಳತೆಗೆ ಹೆಚ್ಚು ಹೋಲಿಕೆ ಮಾಡಿಕೊಳ್ಳಬೇಕು, ದೇವರೂ ಯಾರಿಗೂ ಶಾಪ, ಕೋಪ ಕೊಡಲ್ಲ, ಮನುಷ್ಯನಿಗೆ ತೃಪ್ತಿ, ಕ್ಷಮಿಸುವ ಗುಣ ಇರಬೇಕು, ಆಧುನಿಕ ಜೀವನದಲ್ಲಿ ಯಂತ್ರಗಳ ರೀತಿ ಕೆಲಸ ಮಾಡುತ್ತಿದ್ದೇವೆ, ನಗರಗಳಲ್ಲಿ ವಾಸಿಸುವುದೇ ದೊಡ್ಡ ತೊಂದರೆಯಾಗುತ್ತಿದೆ, ನಮ್ಮ ನೋವು ನಮಗೆ ಗೊತ್ತಾದಾಗ ಮಾತ್ರ ಹೊಸದನ್ನು ಕಲಿಯಲು, ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ.
ಮನುಷ್ಯನ ಜೀವನ ಯಾಂತ್ರಿಕವಾಗಿ!
ಕೃತಕ ಬುದ್ಧಿ ಮತ್ತೆ ಎಲ್ಲೆಡೆ ಬಂದಿದೆ ಮನುಷ್ಯನ ಮಾಡುವ ಕೆಲಸವನ್ನು AI ಮಾಡುತ್ತದೆ, ಸುಳ್ಳು ಹೇಳಿ ಗೆಲ್ಲುವುದಕ್ಕಿಂತ ನಿಜ ಹೇಳಿ ಗೆದ್ದು ಬಿಡಿ, ಪ್ರಸ್ತುತ ಬಹುತೇಕರು ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಬಿದ್ದು ಒದ್ದಾಡುತ್ತಿದ್ದಾರೆ,ಹೀಗಾಗಿ ಸಮಾಜಿಕ ಜಾಲತಾಣ ಸಮಾಜವನ್ನು ಜಾಲಾಡುತ್ತಿದೆ. ನಾವು ಎಷ್ಟು ಓದಿದ್ದಿವಿ, ಪದವಿ ಗಳಿಸುವುದು, ಪಾರಿತೋಷಕ ಮುಖ್ಯವಲ್ಲ, ಎಸ್ಟು ಜನರ ಮನೆಯಲ್ಲಿ ನಂದಾದೀಪ ವಾಗಿದ್ದೀರಿ ಎಂಬುದು ಬಹಳ ಮುಖ್ಯ, ಸಮಾಜದಿಂದ ತೆಗೆದುಕೊಳ್ಳುವುದಕ್ಕಿಂತ ಸಮಾಜಕ್ಕೆ ಏನು ಕೊಟ್ಟಿದ್ದೀರಿ ಎಂಬುದು ಮುಖ್ಯ ಎಂದರು. ಕಲಾಂ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು.
ಚುನಾವಣೆಯಲ್ಲಿ ಜನರ ಅಭ್ಯರ್ಥಿಯಾದೆ, ಆದರೆ ನನಗೆ ಎಲ್ಲೊಸ್ತು ನನಗೆ ಇಷ್ಟವಿಲ್ಲ, ಈಗಾಗಲೇ ಪಾರ್ಲಿಮೆಂಟ್ ನಲ್ಲಿ ಎರಡು ಬಾರಿ ಮಾತನಾಡಿದ್ದೇನೆ, 2,400 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲು, ಮೆಟ್ರೋ ಬಲವರ್ಧನೆಗೆ ನೂರಾರು ಕೋಟಿಯಷ್ಟು ಅನುದಾನ ಕೇಳಿದ್ದೇನೆ, ಅದು 2 ರಿಂದ 3 ವರ್ಷದಲ್ಲಿ ಸಂಪೂರ್ಣವಾಗಿ ಮುಗಿಯಲಿದೆ, ಕ್ಷೇತ್ರದ ಜನರ ಸ್ಥಿತಿಗತಿಗಳನ್ನು ಕೇಳುವ ಸಲುವಾಗಿ ಎಲ್ಲೆಡೆ ಭೇಟಿ ನೀಡಿ ಸಮಸ್ಯೆಗಳನ್ನು ಆಲೈಸುವ ಕೆಲಸವನ್ನು ಮಾಡಬೇಕು, ಅದರ ಜೊತೆಯಲ್ಲಿ ಸೌಥ್ ಎಂಡ್ ವೃತ್ತದ ಸಮೀಪದ ಆಸ್ಪತ್ರೆಯಲ್ಲಿ ವಾರದಲ್ಲಿ 2 ದಿನ ರೋಗಿಗಳನ್ನು ನೋಡುವ ಕೆಲಸ ಮಾಡಲು ಮುಂದಾಗಿದ್ದೇನೆ ಎಂದರು. ಸಮಯವನ್ನು ಬಳಸಿಕೊಳ್ಳುವ ಕಲೆ ಗೊತ್ತಿರಬೇಕು ಎಂದರು.
ಸಂಸದ ಮಂಜುನಾಥ್ ಆಪ್ತ ಶಂಕರ್ ಸಿರಾ ಮಾತನಾಡಿ, ವಿಶ್ವ ಮಾನವ ಅಬ್ದುಲ ಕಲಾಂ ಅವರು. ಎಲ್ಲರಿಗೂ ಬೇಕಾದವರೆ, ಅವರ ಸಜ್ಜನಿಕೆ, ಆಚಾರ ವಿಚಾರ, ನಡೆ ನುಡಿ ಮತ್ತೊಬ್ಬರಿಗೆ ಪ್ರೇರಣೆ, ಅಂಜುನಾಥ್ ಅವರು ಪಾರ್ಲಿಮೆಂಟ್ ಗೆ ಆಯ್ಕೆ ಯಾಗಿದ್ದಾರೆ ಅದು ಅವರ ಧೈವ ನಿಯಮ, ಅವರಿಗೆ ಕನ್ನಡ ಚಲನಚಿತ್ರಗಳು ಎಂದರೆ ಬಹಳ ಅಚ್ಚುಮೆಚ್ಚು, ಅದರಲ್ಲೂ ರಾಜಕುಮಾರ ನಟನೆಯ ಸಿನಿಮಾಗಳು ಇನ್ನಿಲ್ಲದ ಮೆಚ್ಚುಗೆ, ಕೋವಿಡ್ ನಲ್ಲಿ ಮಾಡಿರುವ ಮಂಜುನಾಥ್ ಸೇವೆಯನ್ನು ಎಸ್ಟು ಜನ ನೆನೆಸಿಕೊಳ್ಳುತ್ತಾರೆ ಎಂಬುದನ್ನು ನಾನು ಹೇಳಲಾರೆ, ಕೈಲಾಗದಿರುವ ಅಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಎಂದು ಮಂಜುನಾಥ್ ಅವರ ವ್ಯಕ್ತಿತ್ವ ಗುಣಗಾನ ಮಾಡಿದರು.
ಹಾಸ್ಯ ಹಿರಿಯ ಕಲಾವಿದ ಉಮೇಶ್ ಮಾತನಾಡಿ, ನಾನು ವಿದ್ಯಾವಂತನಲ್ಲ ಆದರೆ ಕಲೆಯಲ್ಲಿ ಒಂದು ಕೈ ಮಿಗಿಲು, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಸಂಘ ಕಟ್ಟಿಕೊಂಡು ಅವರ ಮಾರ್ಗದಲ್ಲಿ ನಡೆಯಲು ಮುಂದಾಗಿರುವುದು ಒಳ್ಳೆಯದು ಎಂದರು. ಮನುಷ್ಯನಿಗೆ ಕೇವಲ ಹಣ ಸಂಪಾದನೆ ಮಾತ್ರವಲ್ಲದೆ ಪ್ರೀತಿ ವಿಶ್ವಾಸ ಬೇಕು ಎಂದರು. ಕೆಲಸವೂ ಹಾಸ್ಯವನ್ನು ಮಾಡುವ ಮೂಲಕ ನೆರೆದಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿದರು.
ಮೊದಲ ಭಾರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಡಾ. ಸಿ ಎನ್ ಮಂಜುನಾಥ್ ಅವರಿಗೆ ಅಬ್ದುಲ್ ಕಲಾಂ ಸೇವಾ ಸಮಿತಿಯ ಅಧ್ಯಕ್ಷರಾಗಿರುವ ಶಾಲಿನಿ ಗಿರಿ ಅವರ ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಡಾ.ಅಬ್ದುಲ ಕಲಾಂ ಸೇವಾ ಸಮಿತಿಯ ಆಧುಕ್ಷೆಯಾದ ಶಾಲಿನಿ ಗಿರಿ, ಹಾಸ್ಯ ನಟ ಉಮೇಶ್,ಸಂಸದ ಡಾ. ಸಿ ಎನ್ ಮಂಜುನಾಥ್, ಮಂಜುನಾಥ್, ಸಾಹಿತಿ ವಿಜಯಲಕ್ಷ್ಮಿ, ಲಕ್ಷ್ಮಿಕಾಂತ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಅನೇಕರು ಉಪಸ್ಥಿತರಿದ್ದರು.