ಮೈಸೂರು: ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿ, ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾಲುಮರದ ತಿಮ್ಮಕ್ಕ ಅಭಿನಂದನಾ ಸಮಿತಿ ವತಿಯಿಂದ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ ವೃಕ್ಷ ಮಾತೆ ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ ರವರ 113ನೇ ಜನ್ಮದಿನದ ಸಂಭ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಕುವೆಂಪು ನಗರದ ನಿವಾಸಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜದಲ್ಲಿ ಅವಿರತರಾಗಿ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ, ಮುಂದಿನ ಸಮಾಜಸೇವೆಯಲ್ಲಿ ಕಾರ್ಯ ಯೋಜನೆಗಳ ಬಗ್ಗೆ ಹೆಚ್ಚು ರೂಪಿಸಿಕೊಳ್ಳಲೀ ಎಂದು ಇಂತಹ ಪ್ರಶಸ್ತಿಗಳನ್ನು ಕೊಡಮಾಡಲಾಗಿದೆ. ಪ್ರಶಸ್ತಿ ಪಡೆದವರೆಲ್ಲರು ಸಹ ಪರಿಸರ ಕಾಳಜಿ ಹೊಂದಿರುವ ವ್ಯಕ್ತಿಗಳಾಗಿದ್ದಾರೆ, ಸಾಕಷ್ಟು ವೃಕ್ಷಮಾತೆಗನ್ನು ಪೂಜಿಸುವ ಪೋಷಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ, ಹೀಗಾಗಿ ಇಂತಹವರನ್ನು ಸಮಾಜದಲ್ಲಿ ಗುರುತಿಸುವ ಕೆಲಸ ಮಾಡಿದರೆ ಇನ್ನು ಹೆಚ್ಚು ಸಮಾಜ ಸೇವೆ ಮಾಡುತ್ತಾರೆ ಎಂಬುದು ಸಂಘ ಸಂಸ್ಥೆಗಳ ಅಭಿಮತವಾಗಿದೆ.
ಇದೇ ಸಂದರ್ಭದಲ್ಲಿ ಎಲ್, ಪಿ.ಪ್ರಭಾಕರ್ ಸಾಲು ಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್ ಅಧ್ಯಕ್ಷರಾದ ಉಮೇಶ್ (ಸಾಲುಮರದ ತಿಮ್ಮಕ್ಕನ ದತ್ತು ಪುತ್ರ), ಸಾಲು ಮತದ ತಿಮ್ಮಕ್ಕ ಅಭಿನಂದನಾ ಸಮಿತಿ ಅಧ್ಯಕ್ಷ ರಾದ ಡಾ. ಹೇಮಂತ್ ಗೌಡ, ಶ್ರೀ ಸಿದ್ದಾರ್ಥ ಎಜುಕೇಷನ್ ಸೊಸೈಟಿ ಸದಸ್ಯರರಾದ ಪ್ರಭುವನ್, ಮನೋಜ್, ಅಭಿಶೇಕ್ ಮತ್ತಿತ್ತರು ಇದ್ದರು.