ಮುಂಬೈ: ಎನ್ ಸಿಪಿಯ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಸಚಿವ ಬಾಬು ಸಿದ್ದಿಕಿ ಮೇಲೆ 3 ಭಾರಿ ಗುಂಡು ಹಾರಿಸಿ ದುಷ್ಕರ್ಮಿಗಳು ಹತ್ಯೆ ಮಾಡಲಾಗಿದೆ. ಇನ್ನು ಬಾಬ ಸಿದ್ದಿಕಿ ಅವರ ಕಚೇರಿ ಸಮೀಪದಲ್ಲಿರುವ ರಾಮ ಮಂದಿರ ಬಳಿ ದುರಂತ ಸಂಭವಿಸಿದೆ.
ಮುಂಬೈನಲ್ಲಿನ ಬಾಂದ್ರಾ ಪೂರ್ವ ಪ್ರದೇಶದಲ್ಲಿ ಘಟನೆ ನಡೆದಿದೆ. ಗಂಭೀರ ಗಾಯಗೊಂಡಿದ್ದ ಸಿದ್ದಿಕಿ ಅವರನ್ನು ಹತ್ತಿರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದುರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ದಸರಾ ಸಂಭ್ರಮದಲ್ಲಿ ತೊಡಗಿದ್ದಾಗ ರಸ್ತೆಯಲ್ಲಿಯೇ 3 ಶಾರ್ಪ್ ಶೂಟರ್ ಗಳು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹತ್ಯೆ ಪ್ರಕರಣದಲ್ಲಿ ಹರಿಯಾಣ ಹಾಗು ಉತ್ತರ ಪ್ರದೇಶ ಮೂಲದ ದುಷ್ಕರ್ಮಿಗಳೆಂದು ತಿಳಿದುಬಂದಿದೆ. ಸಿದ್ದುಕಿಯ ದೇಹ , ಇದೆ ಭಾಗಕ್ಕೆ ಗುಂಡು ತಗಲಿರುವುದು ತಿಳಿದುಬಂದಿದೆ.
ಕೃತ್ಯದಲ್ಲಿ ಭಾಗಿಯಾಗಿರುವ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆಯ ಪೊಲೀಸರು ತಿಳಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದರು. ಪ್ರಕರಣ ಸಂಬಂಧ ಇನ್ನು ಇಬ್ಬರು ಶಾರ್ಟ್ ಶೂಟರ್ ರನ್ನು ಬಂಧಿಸಲಾಗಿದೆ. ಮತ್ತೊಬ್ಬನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಸಿದ್ದಿಕಿ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಬಣದವರಾಗಿದ್ದು, ಕೃತ್ಯದಲ್ಲಿ ಭಾಗಿಯಾದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಹೊರಗಿನವರನ್ನು ಶಾರ್ಪ್ ಶೂಟರ್ ಕರೆಸಿ ಕೃತ್ಯ ಎಸಗಲಾಗಿದೆ ಎಂದು ಮಹಾರಾಷ್ಟ್ರ ಸಿಎಂ ಏಕ ನಾಥ ಶಿಂಧೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸರ್ಕಾರ ಕಾನೂನು ಬಿಗಿಗೊಳಿಸಲು ವಿಫಲವಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ ಹೇಳಿಕೆ.
ಬಾಬ ಸಿದ್ದಿಕಿ ಹತ್ಯೆ ಹಿನ್ನೆಲೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಎಲ್ಲಾ ಕಾರ್ಯಕ್ರಮಗಳನ್ನು ಮೋಟಕುಗೊಳಿಸಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಮುಂದೆ ಭಾರಿ ಜನಸ್ತೋಮ ಸೇರಿದ್ದು, ಸಿದ್ದಿಕಿ ಅಭಿಮಾನಿಗಳು ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಇನ್ನು ಲೀಲಾವತಿ ಆಸ್ಪತ್ರೆಗೆ ಪಡ್ನವೀಸ್ ಆಗಮಿಸಿ