ಬೆಂಗಳೂರು; ಶೇಕಡಾ 57ರಷ್ಟೀರುವ ಹಿಂದುಳಿದ ವರ್ಗಗಳ ಜನರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಸ್ವೀಕರಿಸುವುದನ್ನು ಓಬಿಸಿ ಫೆಡರೇಶನ್ ಸ್ವಾಗತಿಸುತ್ತದೆ ಎಂದು ಓಬಿಸಿ ಫೆಡರೇಶನ್ ಅಧ್ಯಕ್ಷ ಜೆ ಎಂಜೇರಪ್ಪ ತಿಳಿಸಿ ದರು.
ದಕ್ಷಿಣ ಭಾರತ ರಾಜ್ಯಗಳ ಹಿಂದುಳಿದ ವರ್ಗಗಳ ಸಮಾವೇಶವನ್ನು , “ಒಬಿಸಿ ಫೆಡರೇಶನ್ ಆಫ್ ಇಂಡಿಯಾ”ವತಿಯಿಂದ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದವರು, ಓಬಿಸಿ ವರ್ಗದವರಿಗೆ ದಕ್ಷಿಣ ಭಾರತದ ಯಾವ ರಾಜ್ಯದಲ್ಲಿ ಸಹ ಮಂಡನೆ ಇಲ್ಲ ಅದರಲ್ಲಿ ಸಹ ರಾಜಕೀಯ ಕ್ಷೇತ್ರವಾಗಲಿ ಸರ್ಕಾರದ ಮಟ್ಟದ ಅಧಿಕಾರಿಗಳಾಗಲಿ ಯಾವುದೇ ರೀತಿಯಾದಂತಹ ಉನ್ನತ ಸ್ಥಾನಮಾನಗಳನ್ನು ನೀಡದೇ ಇರುವುದು ಸೂಚನೆಯ ವಾದಂತಹ ಸಂಗತಿಯಾಗಿದೆ ಎಂದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ ಎಸ್ ದ್ವಾರಕಾನಾಥ್ ಮಾತನಾಡಿ, ಹಿಂದುಳಿದ ವರ್ಗಗಳ ಸಮಾಜ ದೊಡ್ಡ ಸಂಖ್ಯೆಯಲ್ಲಿ ಇದ್ದರೂ ಅದಕ್ಕೆ ತಕ್ಕ ಅವಕಾಶ ಸಿಗದಿರುವುದು ವಿಷಾದನೀಯ ಎಂದರು.
ಬಿಬಿಎಂಪಿ ಮಾಜಿ ಮೇಯರ್ ಆಗಿರುವ ವೆಂಕಟೇಶ್ ಮೂರ್ತಿ ಅವರು ಮಾತನಾಡಿ, ಮಾಜಿ ಪ್ರಧಾನಿ ವಿಪಿ ಸಿಂಗ್ ಅವರ ಕಾಲದಲ್ಲಿ ಜಾರಿಗೆ ಬಂದ ಮಂಡಲ್ ವರದಿಯ ಪರಿಣಾಮ ದಿವಂಗತ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಪ್ರಾತಿನಿಧ್ಯ ವಂಚಿತ ಹಿಂದುಳಿದ ವರ್ಗಗಳ ಸಾಕಷ್ಟು ಸಮಸ್ಯೆಗಳು ಎದುರಿಸಿದ್ದಾರೆ ಒಬಿಸಿಗೆ ಎಂಎಲ್ಎ ಎಂಎಲ್ಸಿ ಎಂಪಿಎಸ್ ಹಾಗೂ ಜಡ್ಜ್ ಗಳಿಗೆ ಮೀಸಲಾತಿಯನ್ನು ಎಲ್ಲಾ ದಕ್ಷಿಣ ಭಾರತ ರಾಜ್ಯಗಳಲ್ಲಿ ಕೊಡಬೇಕಾಗಿದೆ ಯಾವ ಜಾತಿಗಳು ಯಾವ ಪಂಗಡಕ್ಕೆ ಸೇರಿರುತ್ತಾರೆ ಎಂಬುದನ್ನು ತಿಳಿಸಬೇಕು ಕಾಂತರಾಜ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದರು ಇನ್ನು ಕಾಂತರಾಜ್ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತರಲು ಮುಂದಾಗಿದ್ದಕ್ಕೆ ವಿನಾಕಾರಣ ವಿಪಕ್ಷಗಳು ಇಲ್ಲ ಸಲದ ಕೇಸ್ ಗಳನ್ನು ಹಾಕಿ ಸಿಎಂ ಸ್ಥಾನದಿಂದ ಮಾಡುತ್ತಿದ್ದಾರೆ ಎಂದು ದೂರಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ ಎಸ್ ದ್ವಾರಕಾನಾಥ್, ಸಮರ್ಥನಂ ಟ್ರಸ್ಟ್ ನ ಮಹಾಂತೇಶ್, ಮೀಸಲಾತಿ ಕುರಿತು ಮಹತ್ವದ ವರದಿ ನೀಡಿದ ಮಂಡಲ ಆಯೋಗದ ಮುಖ್ಯಸ್ಥರ ಮೊಮ್ಮಗ ಡಾ. ಸೂರಜ್ ಮಂಡಲ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ರಾಜಕೀಯ ಸ್ಥಿತಿಗತಿ ಬಗ್ಗೆ ಚಿಂತನ-ಮಂಥನ ನಡೆಯಿತು.ದಿ. ಮಾಜಿ ಪ್ರಧಾನಿ ವಿ ಪಿ ಸಿಂಗ್ ಅವಧಿಯಲ್ಲಿ ಜಾರಿಗೆ ಬಂದ ಮಂಡಲ್ ವರದಿಯ ಪರಿಣಾಮ, ದಿ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಪ್ರಾತಿನಿಧ್ಯ ವಂಚಿತ ಹಿಂದುಳಿದ ವರ್ಗಗಳ ಮುಂದಿನ ಸವಾಲುಗಳು ಸೇರಿದಂತೆ ಹಲವು ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಿತು.
ಮಾಜಿ ಮೇಯರ್ ವೆಂಕಟೇಶ್ ಮೂರ್ತಿ, ಮಾಜಿ ಉಪ ಮೇಯರ್ ಹರೀಶ್, ಒಬಿಸಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಜೆ ಎಂಜೇರಪ್ಪ, ಸಮರ್ಪನಂ ಪ್ರಶ್ನ ಮಹಾಂತೇಶ್ ಮಂಡಲ ಆಯೋಗದ ಮುಖ್ಯಸ್ಥರ ಮೊಮ್ಮಗನಂತಹ ಡಾ.ಸೂರಜ್ ಮಂಡಲ್, ಎಬಿಸಿ ವಿಭಾಗದ ಹಲವು ಪ್ರಮುಖರು ಹಾಗೂ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಪದಾಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.