ಬೆಂಗಳೂರು: ದಲಿತ ಸಂಘರ್ಷ ಸಮಿತಿ ಪರಿವರ್ತನಾವಾ ದದಿಂದ ಸಮಿತಿಗೆ 50 ವರ್ಷ ತುಂಬಿದೆ ಹಿನ್ನೆಲೆ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೆಲವು ನಿರ್ಣಯಗಳನ್ನು ಮಂಡಿಸಲು ಹಾಕ್ಕೋತಾಯಗಳನ್ನು ಮಾಡಲಾಯಿತು.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಜರುಗಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನ ವಾದ) ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕರಾದ ಎಂ ಗೋವಿಂದರಾಜು ಅವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯಕ್ಕೆ ಬರಬೇಕಾದಂತಹ ಅದರಲ್ಲೂ ಎಸ್ಸಿ ಎಸ್ ಪಿ, ಟಿ ಎಸ್ ಪಿ ಅನುದಾನದ ಮೊತ್ತವು ಏರಿಕೆ ಆಗಬೇಕು, ಅದೇ ರೀತಿ ದಲಿತರು ಎಷ್ಟು ಪ್ರಮಾಣದಲ್ಲಿ ಇದ್ದಾರೆ ಎಂಬುದರ ಬಗ್ಗೆ ಜಾತಿಗಣತಿಯನ್ನು ಕೈಗೊಳ್ಳಬೇಕಾಗಿದೆ ಹಾಗೆ ಈಗಾಗಲೇ ಇದ್ದ 50% ಮೀಸಲಾತಿಯನ್ನು ಶೇ 85% ಹೆಚ್ಚಿಸಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯವನ್ನು ಮಾಡಲಾಯಿತು.
ದಲಿತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಕೆಲವೊಂದು ಸೌಲಭ್ಯಗಳನ್ನು ಕಲ್ಪಿಸಲು ಕೇವಲ ರಾಜ್ಯ ಸರ್ಕಾರವಲ್ಲದೆ ಕೇಂದ್ರ ಸರ್ಕಾರಗಳು ಸಹ ಮುಂದೆ ಬಂದು ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮಹಾ ಒಕ್ಕೂಟದ ಅಧ್ಯಕ್ಷ ಶ್ರೀಧರ ಕಲಿವಿರಾ ಅವರು ಆಗ್ರಹಿಸಿದರು. ಆದರೆ ಎರಡು ಸರ್ಕಾರಗಳು ಸಹ ದಲಿತರ ಬಗ್ಗೆ ಕಾಳಜಿ ಇಲ್ಲದೆ ಕೆಲವೊಂದು ವರದಿಗಳನ್ನು ಬಹಿರಂಗಪಡಿಸಲು ಹಾಗೂ ಜಾರಿಗೊಳಿಸಲು ಹಿಂದೇಟು ಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಹಕ್ಕುಗಳಿಗೆ ಸ್ಪಂದಿಸದೆ ಹೋದಲ್ಲಿ ನಿರಂತರವಾದಂತಹ ಪ್ರತಿಭಟನೆಗಳು ಧರಣಿಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಗಳು
1) ಹದಿನೈದನೆ ಹಣಕಾಸು ಆಯೋಗದಲ್ಲಿ ಕರ್ನಾಟಕ ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲಲ್ಲಿ ಕೇಂದ್ರವು ರಾಜ್ಯಕ್ಕೆ 79770 ಕೋಟಿ ನೀಡದೆ ಅನ್ಯಾಯ ಮಾಡಿದೆ. ಭಾರತ ಸಂವಿಧಾನದ ಒಕ್ಕೂಟ ಮತ್ತು ಬಹುತ್ವ ಬಲಪಡಿಸಲು ಕೇಂದ್ರವು ರಾಜ್ಯಗಳಿಗೆ ತೆರಿಗೆಗಳ ನ್ಯಾಯಯುತ ಪಾಲನ್ನು ನೀಡುವ ಮೂಲಕ ರಾಜ್ಯಗಳ ಬಜೆಟ್ ಗಾತ್ರವು ಏರಿಕೆಯಾಗಲು ಮತ್ತು ಮೂಲಕ ರಾಜ್ಯದ SCSP & TSP ಅನುದಾನದ ಮೊತ್ತವು ರಿಕೆಯಾಗಲು ಸಹಕರಿಸಬೇಕು.
2) ಶೋಷಿತ ಜಾತಿಗಳ ದತ್ತಾಂಶವು ಅಗತ್ಯವೆಂದು ಕೋರ್ಟು ತೀರ್ಪುಗಳ ಹಿನ್ನೆಲೆಯಲ್ಲಿ ಕೇಂದ್ರವು ದೇಶಾದ್ಯಂತ ಜಾತಿ ಜನ ಗಣತಿಯನ್ನು ಈ ಭಾರಿ ಕೈಗೊಳ್ಳಬೇಕು.
3) ಕೇಂದ್ರ ಸರ್ಕಾರವು ಕೇಂದ್ರದ ಬಜೆಟ್ನಲ್ಲಿ ಪರಿಶಿಷ್ಟರ 25% ಜನ ಸಂಖ್ಯೆಗನುಗುಣವಾಗಿ ಸುಮಾರು 06 ಲಕ್ಷ ಕೋಟಿ ಅನುದಾನವನ್ನು ಮಂಜೂರು ಮಾಡಲು SCSP & TSP ಕಾಯ್ದೆಯನ್ನು ಕೇಂದ್ರದಲ್ಲಿ ಜಾರಿಗೊಳಿಸಬೇಕು.
4) ದೇಶಾದ್ಯಂತ ಶೋಷಿತ ಜಾತಿಗಳ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ನೀಡಲು ಪ್ರಸ್ತುತ ಇರುವ 50% ಮೀಸಲಾತಿಯನ್ನು ಬದಲಾಯಿಸಿ ಸಂವಿಧಾನಕ್ಕೆ ತಿದ್ದುಪಡಿ ತಂದು ಸುಮಾರು 85% ಮೀಸಲಾತಿಯನ್ನು ಕಲ್ಪಿಸಲು ಕಾನೂನು ಜಾರಿಗೊಳಿಸಬೇಕು.
5) ಕೋಮುವಾದ, ಜಾತಿವಾದ ರದ್ದುಪಡಿಸಲು ಸಂವಿಧಾನ ತಿದ್ದಪಡಿ ಮಾಡಬೇಕು.
6) ಸಂವಿಧಾನದ ಆಶಯದಂತೆ ದೇಶದ ಸಾರ್ವಭೌಮತ್ವ, ಏಕತೆ, ಬಹುತ್ವ, ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ, ಕಾಪಾಡಲು ಬಿಗಿ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ఎల్లా ಧರ್ಮಗಳ ధామి ಮೂಲಭೂತವಾದ/ಪ್ರತ್ಯೇಕತಾ ವಾದವನ್ನು ಉಗ್ರಶಿಕ್ಷೆ ನೀಡುವ ಮೂಲಕ ನಿವಾರಿಸಬೇಕು.
7) ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು 17% ಗೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು 7% ಗೆ ಏರಿಕೆ ಮಾಡಿ ರಾಜ್ಯ ಸರ್ಕಾರವು 2022 ರಲ್ಲಿ ಸರ್ಕಾರಿ ಆದೇಶ ಹೊರಡಿಸಿದ್ದು ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಮೀಸಲಾತಿಯ ಪ್ರಮಾಣವನ್ನು 50% ನಿಂದ 56% ಗೆ ಏರಿಕೆ ಆಗಿದ್ದು ಇದನ್ನು ರಕ್ಷಿಸಲು ಕೇಂದ್ರ ಸರ್ಕಾರವು ಸದರಿ ಏರಿಕೆಯನ್ನು ಸಂವಿಧಾನದ 9ನೇ ಷೆಡ್ಯೂಲ್ಗೆ ಸೇರಿಸಬೇಕು.
8) ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭರ್ತಿ ಮಾಡದೇ ಉಳಿದಿರುವ ಶೋಷಿತ ಜಾತಿಗಳ ಸುಮಾರು 2 ಲಕ್ಷ ಬ್ಯಾಕ್ಲಾಗ್ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿಮಾಡಬೇಕು.
9) ಖಾಸಗಿ ಕ್ಷೇತ್ರದಲ್ಲಿ ಶೋಷಿತ ಜಾತಿಗಳಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನಕ್ಕೆ ಕೇಂದ್ರವು ತಿದ್ದುಪಡಿ ತರಬೇಕು.
10) ಕೌಂಟರ್ ಕೇಸ್ಗಳನ್ನು ಸಂತ್ರಸ್ಥರ ಮೇಲೆ ಪೋಲಿಸರು ಹೂಡಲು ದೇಶಾದ್ಯಂತ ನಿರ್ಭಂದ ವಿಧಿಸಲು ಅಟ್ರಾಸಿಟಿ ಕಾಯ್ದೆ 1989 ಕ್ಕೆ ಮತ್ತು 3)1()r)(s), secti on (2) (V)(VA( הס ತಿದ್ದುಪಡಿ ತರಬೇಕು.
11) ಹೈಕೋರ್ಟ್/ಸುಪ್ರೀಂಕೋರ್ಟ್ ನ್ಯಾಯಾಧೀಶರ ಹುದ್ದೆ ನೇಮಕಾತಿಯಲ್ಲಿ ಎಸ್.ಸಿ/ಎಸ್.ಟಿ/ಒ.ಬಿ.ಸಿ/ ಮಹಿಳೆಯರಿಗೆ ಸಂವಿಧಾನಕ್ಕೆ ಕೇಂದ್ರವು ತಿದ್ದುಪಡಿ ತರಬೇಕು. ಮೀಸಲಾತಿ ಕಲ್ಪಿಸಲು
12) ಕೇಂದ್ರವು ಜಾರಿಗೆ ತರಲು ಉದ್ದೇಶಿಸಿರುವ “ಒಂದು ದೇಶ, ಒಮ್ಮೆಗೆ ಒಂದೇ ಚುನಾವಣೆ” ಯೋಜನೆಯನ್ನು ಕೈಬಿಟ್ಟು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು. ಹಿಂದೂ ರಜ ಆಗೋಕ್ ಕೇಂದ್ರ ಸರ್ಕಾಕ್ಕೆ ಒತ್ತಾಯವನ್ನು ಮಾಡಿದರು.
ಇನ್ನು ಸಮಾವೇಶದಲ್ಲಿ ಹಿಂದುಳಿದ ವರ್ಗದ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ದ್ವಾರಕನಾಥ್, ಸಂಘಟನಾ ಸಂಚಾಲಕರಾದ ಎಂಆರ್ ವೆಂಕಟೇಶ್ ಕೊಟ್ಟಿಯಾನು ಮಂಗಳೂರು ಜಿಎಂ ವೆಂಕಟೇಶ್ ಅಂಬಣ್ಣ ಕೊಪ್ಪಳ ಚಲವಾದಿ ರಾಘವೇಂದ್ರ ಬೀದರ್ ಕಂಠೀರವ ಹೊಸಮನಿ ಜಾಬ್ರ ಧರ್ಮಯ್ಯ ಹಾಸನ ರಾಯಪ್ಪ ಕೆ ಚಲವಾದಿ ಖಜಂಚಿಯಾದಂತಹ ಪ್ರಕಾಶ್ ಬ್ಯಾಡರಹಳ್ಳಿ ,ಕೆ ಮುನಿರಾಜು, ಹಾವೇರಿಯ ಮಂಜುನಾಥ ದರ್ಜೆ ರಾಜಾರಾಮ್ ಉಡುಪಿ ಸೇರಿದಂತೆ ರಾಜ್ಯ ಸಮಿತಿಯ ಸದಸ್ಯರು, ಜಿಲ್ಲಾ ಸಮಿತಿ ಪದಾಧಿಕಾರಿಗಳು ಹಿರೆ ವೇಳೆ ಉಪಸ್ಥಿತರಿದ್ದರು.