ನವದೆಹಲಿ, ಬೆಂಗಳೂರು: ನಿನ್ನೆ ದೆಹಲಿಯ ವಿಕಾಸ್ ಪುರಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕಪ್ರಿಯ ನಾಯಕ ಅರವಿಂದ್ ಕೇಜ್ರಿವಾಲ್ ರವರ ಮೇಲಿನ ಬಿಜೆಪಿ ಯುವ ಮೋರ್ಚಾದ ಗೂಂಡಾಗಳ ಹಲ್ಲೆಯನ್ನು ಯಾವುದೇ ನಾಗರಿಕ ಸಮಾಜ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಗೂಂಡ ನಾಯಕರುಗಳು ತಮ್ಮ ಹತಾಶೆಯಿಂದ ಈ ರೀತಿಯ ದಾಳಿಗಳಿಗೆ ಕೈ ಹಾಕಿದ್ದಾರೆ. ಈ ಕೂಡಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ರಾಷ್ಟ್ರದ ಮುಂದೆ ಕ್ಷಮೆ ಯಾಚಿಸಬೇಕು ಹಾಗೂ ತಮ್ಮ ರೌಡಿ ಪಡೆ ನಾಯಕರುಗಳನ್ನು ಹತೋಟಿಯಲ್ಲಿ ಇರಬೇಕೆಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಇಂದಿಲ್ಲಿ ಅಗ್ರಹಿಸಿದರು.
ಕೇಜ್ರಿವಾಲ್ ರವರ ಮೇಲಿನ ದಾಳಿ, ಇದೇನು ಮೊದಲೇನೂ ಅಲ್ಲ ,ಅನೇಕ ಬಾರಿ ಈ ರೀತಿಯ ದಬ್ಬಾಳಿಕೆಗಳು, ದೌರ್ಜನ್ಯಗಳು, ದಾಳಿಗಳು ಆಗುತ್ತದೆ ಇದೆ. ಬಿಜೆಪಿಗರಿಗೆ ಪ್ರಾಮಾಣಿಕರು ಎಂದಿಗೂ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಬಾರದು, ಜನಪರವಾದಂತಹ ಆಡಳಿತವನ್ನು ನೀಡಬಾರದು ಎಂಬುದೇ ಇವರ ಉದ್ದೇಶ ಎಂಬುದು ನಿನ್ನೆ ನಡೆದ ದಾಳಿಯಿಂದ ಸಾಬೀತಾಗಿದೆ.
ಖೊಟ್ಟಿ ಪ್ರಕರಣಗಳನ್ನು ದಾಖಲಿಸಿ ಆಮ್ ಆದ್ಮಿ ಪಕ್ಷದ ನಾಯಕರುಗಳನ್ನು ಜೈಲಿನಲ್ಲಿಟ್ಟರು ಸಹ ರಾಷ್ಟ್ರದ ಜನತೆ ನಮ್ಮೊಂದಿಗೆ ಇರುವುದನ್ನು ಸಹಿಸಲಾಗದೆ ಹತಾಶೆಯಿಂದ ಈ ರೀತಿಯ ದಾಳಿಗಳಿಗೆ ಬಿಜೆಪಿ ಗೂಂಡಾಗಳು ಮುಂದಾಗಿರುವುದು ಅಸಹ್ಯ ವೆನಿಸುತ್ತಿದೆ ಎಂದು ಜಗದೀಶ್ ವಿ ಸದಂ ಕಿಡಿಕಾರಿದರು.