ಚನ್ನಪಟ್ಟಣ/ರಾಮನಗರ: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಇಂದು ಸೋಮವಾರ ಕೋಡಂಬಳ್ಳಿ, ಜೆ ಬ್ಯಾಡರಹಳ್ಳಿ, ಹಾಗೂ ವೈ.ಟಿ ಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರು ಮುಖಂಡರನ್ನು ನಿಖಿಲ್ ಅವರು ಜತೆಯಲ್ಲಿ ಹೆಜ್ಜೆ ಹಾಕಿದರು.
ಬೆಳಗ್ಗೆಯಿಂದಲೇ ಪ್ರಚಾರದಲ್ಲಿ ತೊಡಗಿದ ಅವರು; ಚನ್ನಪಟ್ಟಣದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಮನೆಗಳಿಗೆ ಭೇಟಿ ನೀಡಿ ಒಬ್ಬ ಯುವಕನಿಗೆ ಮತ ನೀಡುವಂತೆ ಮನವಿ ಮಾಡಿದರು.
ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡ್ಬೇಕು ಎಂದು ಆಲೋಚನೆ ಮಾಡಿರಲಿಲ್ಲ.ಅದಿಕ್ಕೆ ಕಾರಣ ನೀವು ನಿಮ್ಮೆಲ್ಲರ ಆಶೀರ್ವಾದದಿಂದ ಕುಮಾರಣ್ಣ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ನಾನು ಸ್ಪರ್ಧೆ ಮಾಡಿರೋದು ಅನಿರೀಕ್ಷಿತ ಬೆಳವಣಿಗೆ. ನಾನು ಚುನಾವಣೆಗೆ ನಿಲ್ಲಬೇಕೆಂದು ಆಲೋಚನೆ ಮಾಡಿರಲಿಲ್ಲ, ಪಕ್ಷದ ಸಂಘಟನೆ ದೃಷ್ಟಿಯಿಂದ ರಾಜ್ಯ 7 ಜಿಲ್ಲೆಗಳಿಗೂ ಪ್ರವಾಸ ಪ್ರಾರಂಭ ಮಾಡಿದ್ದೇನೆ ಎಂದರು.
ಕ್ಷೇತ್ರದಲ್ಲಿ ಕುಮಾರಣ್ಣ ಅವರು 6ವರ್ಷಗಳ ಕಾಲ ಶಾಸಕರಾಗಿ. ಈ ಪುಣ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಯಾಗಿ ಮಾಡಿರೋ ಕೀರ್ತಿ ಚನ್ನಪಟ್ಟಣದ ಮಹಜನತೆಗೆ ಸಲ್ಲುತ್ತೆ ಎಂದರು.
3 ಪಂಚಾಯಿತಿಯ 26 ಗ್ರಾಮಗಳಲ್ಲಿ ಮತಯಾಚನೆ
ಮಾಧ್ಯಮಗಳಲ್ಲಿ ನೀವೆಲ್ಲರೂ ನೋಡಿದಿರಾ ಪ್ರತಿನಿತ್ಯ ಚನ್ನಪಟ್ಟಣ ಕ್ಷೇತ್ರದ್ದೇ ಸುದ್ದಿ. ಇವತ್ತು ಚನ್ನಪಟ್ಟಣ ರಾಜ್ಯದ ಗಮನ ಸೆಳೆದಿದೆ.3 ಕ್ಷೇತ್ರದಲ್ಲಿ ಚುನಾವಣೆ ನಡೀತಿದೆ ಆದರೂ ರಾಷ್ಟ್ರ ಮತ್ತು ರಾಜ್ಯದಲ್ಲಿ ಚನ್ನಪಟ್ಟಣದ್ದೆ ಸುದ್ದಿ ಎಂದರು. ಭವಿಷ್ಯ ಇದರ ಫಲಿತಾಂಶ ಮುಂದಿನ ರಾಜ್ಯ ರಾಜಕಾರಣದಲ್ಲಿ ಹೊಸ ದಿಕ್ಕನ್ನು ಬದಲಿಸುವ ಶಕ್ತಿ ನಿಮ್ಮ ಕೈಯಲ್ಲಿದೆ ಎಂದು ತಿಳಿಸಿದರು.
ಇನ್ನು ಪ್ರಚಾರದ ವೇಳೆ ಕ್ಷೇತ್ರದ ಜೆ.ಬ್ಯಾಡರಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಲಾರ್ಪಣೆ ಮಾಡಿದರು.
2019ರಲ್ಲಿ ಕುಮಾರಣ್ಣ ಅವರು ಮುಖ್ಯಮಂತ್ರಿ ಆಗಿದ್ರು.ಆಗ ಕುಮಾರಣ್ಣ ನಾನು ಅವಕಾಶ ಕೊಟ್ಟಿದ್ರು, ನಿಮಗೆ ಗೊತ್ತಿದೆ ಮಂಡ್ಯ ಮತ್ತು ತುಮಕೂರಲ್ಲಿ ಯಾವ ರೀತಿ ಜತೆಯಲ್ಲೇ ಇದ್ದು ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಅದೇ ರೀತಿ ರಾಮನಗರದಲ್ಲೂ ಮುಗ್ದ ಜನಗಳಿಗೆ ಕೂಪನ್ ಕಾರ್ಡ್ ಗಳನ್ನು ನೀಡಿ ಕುತಂತ್ರ ದಿಂದ ನನ್ನನ್ನು ಸೋಲಿಸಿದ್ದಾರೆ ಎಂದು ಕಹಿ ನೆನಪುಗಳನ್ನ ಮನವರಿಕೆ ಮಾಡಿದ್ರು.
ಕ್ಷೇತ್ರದ ಮೂರು ಪಂಚಾಯಿತಿಗಳ 26ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ.ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ದೇವೇಗೌಡರು ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿದ್ದಾರೆ. ಸತ್ಯಗಾಲದ 540ಕೋಟಿ ರೂಪಾಯಿ ವೆಚ್ಚದಲ್ಲಿ ಶಾಶ್ವತ ನೀರಾವರಿ ಯೋಜನೆ ಇಡೀ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೆ ಅನೇಕ ಯೋಜನೆ ಗಳನ್ನು ಕುಮಾರಣ್ಣ ಕಾಲದಲ್ಲಿ ತಂದಿದ್ರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಕುತಂತ್ರ ರಾಜಕಾರಣ ನಡೆಯುವುದಿಲ್ಲ- ನಿಖಿಲ್ ಆರೋಪ
ಅಭಿರುದ್ದಿ ಅನ್ನುವುದು ನಿಂತ ನೀರಲ್ಲ, ಹರಿಯುವ ನೀರು ಆಗಿರಬೇಕು ಇನ್ನು ತಾಲ್ಲೂಕಿನ ಹಲವು ಭಾಗಗಳಲ್ಲಿ ಅಭಿರುದ್ದಿ ಆಗಬೇಕು.ನಿಮ್ಮ ಕಷ್ಟ ಗಳಿಗೆ ಸ್ಪಂದಿಸಿಸಲು ಬಂದಿದೀನಿ ಎಂದರು.
ಮಂಡ್ಯ ಹಾಗೂ ರಾಮನಗರದಲ್ಲಿ ಈಗಾಗಲೇ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ನನಗೆ ಸೇಡಿನ ರಾಜಕೀಯದಲ್ಲಿ ನಂಬಿಕೆ ಇಲ್ಲ. ಜನತೆಯ ಸೇವೆ ಮಾಡುವ ಒಂದು ಮಾರ್ಗವಾಗಿ ನಾನು ರಾಜಕೀಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ.ಒಬ್ಬ ಯುವಕನಾಗಿ, ಯುವಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಅದಕ್ಕೆ ಕ್ಷೇತ್ರದ ಜನ ಅವಕಾಶ ಮಾಡಿಕೊಡಿ ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಜಯಮುತ್ತು, ಮುಖಂಡರಾದ ನೀಡುಗೋಡಿ ಬಾಬು ಸೇರಿದಂತೆ ಅನೇಕ ನಾಯಕರು ನಿಖಿಲ್ ಅವರ ಜತೆಯಲ್ಲಿ ಇದ್ದರು.