ಬೆಂಗಳೂರು: ಗ್ರಾಮ ಪಂಚಾಯತಿ ಕಾರ್ಯನಿರ್ವಹಣೆಯಲ್ಲಿ ಮಹಿಳಾ ಚುನಾಯಿತ ಪ್ರತಿನಿಧಿಗಳ ಪರವಾಗಿ ಪತಿ ಮತ್ತು ಅವರ ಕುಟುಂಬಸ್ಥರು ಅಧಿಕಾರ ಚಲಾಯಿಸುತ್ತಿರುವ ಬಗ್ಗೆ ಪ್ರಶ್ನೆ ಮಾಡಿದರೆ ಯಾರಿಗೂ ಕ್ಯಾರೆ ಎನ್ನುತ್ತಿಲ್ಲ ಎಂದು ಕಳಲುಘಟ್ಟ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಗಿರೀಶ್ ದಾಖಲೆ ಸಮೇತ ಆರೋಪಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳಲುಘಟ್ಟ ಗ್ರಾಮ ಪಂಚಾಯತಿಗಳಲ್ಲಿ ಚುನಾಯಿತರಾಗಿರುವ ಮಹಿಳಾ ಸದಸ್ಯರುಗಳ ಪರವಾಗಿ ಮಹಿಳಾ ಸದಸ್ಯರ ಪತಿ ಮತ್ತು ಕುಟುಂಬಸ್ಥರು ಗ್ರಾಮ ಪಂಚಾಯತಿಗಳ ಕಾರ್ಯಕಲಾಪಗಳಲ್ಲಿ ಹಸ್ತಕ್ಷೇಪ ಮಾಡಿ ಗ್ರಾಮ ಪಂಚಾಯತಿಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ತೊಂದರೆ ನೀಡಿ ಸಾರ್ವಜನಿಕರಿಗೂ ಬಹಳ ತೊಂದರೆಯಾಗುತ್ತಿರುವುದರಿಂದ ಗ್ರಾಮ ಪಂಚಾಯತಿಗೆ ಆಯ್ಕೆಯಾಗುವ ಮಹಿಳಾ ಚುನಾಯಿತ ಅಧ್ಯಕ್ಷರು/ಉಪಾಧ್ಯಕ್ಷರು/ಸದಸ್ಯರು ಇವರ ಪತಿ ಅಥವಾ ಕುಟುಂಬಸ್ಥರು ಗ್ರಾಮ ಪಂಚಾಯತಿಯ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಿದ್ದಲ್ಲಿ ಸದರಿ ಮಹಿಳಾ ಚುನಾಯಿತ ಪ್ರತಿನಿಧಿಗಳ ಸದಸ್ಯತ್ವವನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43 (ಎ) ಮತ್ತು ಪ್ರಕರಣ 48(4) ರ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಂಡು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ (ನೋ) ಕಾರ್ಯದರ್ಶಿಯವರು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.
ಅಧ್ಯಕ್ಷೆ ಪತಿ ಅಂಜನಮೂರ್ತಿ ಪಂಚಾಯತಿ ಅಧಿಕಾರ ದುರ್ಬಳಕೆ
ಕಳಲುಘಟ್ಟ ಗ್ರಾಮ ಪಂಚಾಯತ್ ಗ್ರಾಮ ಪಂಚಾಯಿತಿ ಪಿ.ಡಿ.ಓ ಗೀತಾಮಣಿ ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸೌಮ್ಯ ಮತ್ತು ಅವರ ಪತಿ ಆಂಜನಮೂರ್ತಿ ರವರುಗಳು ಪಂಚಾಯಿತಿಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಕೋಟ್ಯಂತರ ಆದಾಯವನ್ನು ನಷ್ಟ ಮಾಡುತ್ತಿದ್ದಾರೆ, ನೆಲಮಂಗಲ ಗ್ರಾಮ ಪಂಚಾಯತ್ ನಲ್ಲಿ ಅತಿಹೆಚ್ಚು ಆರ್ಥಿಕತೆ ಸಂದಾಯವಾಗುತ್ತಿರುವ ಪಂಚಾಯತಿ ಆಗಿದೆ.
ಈಷ್ಟೇ ಅಲ್ಲದೆ ಪಂಚಾಯಿತಿಯ ಅನುದಾನವನ್ನು ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳದೆ PDO ಅಧಿಕಾರಿ ಸೇರಿಕೊಂಡು ಅವರಿಗೆ ಇಷ್ಟ ಬಂದಹಾಗೆ ಅಧಿಕಾರ ಚಲಾಯಿಸಿ, ಸರ್ಕಾರದ ಬೊಕ್ಕಸಕ್ಕೆ ನಾಸ್ತ್ವನ್ನು ಮಾಡುತ್ತಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಇಲಾಖೆಗೆ, ಅಧಿಕಾರಿಗಳಿಗೆ ತಿಳಿಸಿ, ಮನವಿ ನೀಡಿದರು ಇಲ್ಲಿಯತನಕ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿ.ಡಿ.ಓ ಗೀತಾಮಣಿ ಅವರು ಕಳೆದ 4 ವರೆ ವರ್ಷಗಳಿಂದ ಅದೇ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸರ್ಕಾರದ ಆದೇಶ 2 ವರ್ಷಕ್ಕಿಂತ ಹೆಚ್ಚು ಒಂದೇ ಪಂಚಾಯಿತಿಯಲ್ಲಿ ಸೇವೆ ಮಾಡುವಂತಿಲ್ಲನೆಂಬ ನಿಯಮವಿದೆ, ಅದೆಲ್ಲವನ್ನೂ ಗಾಳಿಗೆ ತೂರಿ ಸ್ವೇಚಾಚಾರವಾಗಿ ಅದೇ ಪಂಚಾಯತಿಯಲ್ಲಿ ಟಿಕ್ಕಾಣಿ ಹೂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಪಿಡಿಒ ಬರುವ ಅಲ್ಪ ಸಂಬಳದಲ್ಲಿ ದಿಡೀರ್ ಐಷಾರಾಮಿ ಮನೆ ಕಟ್ಟಿಕೊಂಡು ಭ್ರಷ್ಟಾಚಾರದಲ್ಲಿ ಇವೆಲ್ಲವೂ ಸಾಧ್ಯ ಎನ್ನುವ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ನೆಪಕ್ಕೆ ಮಾತ್ರ ಸೌಮ್ಯ ಗ್ರಾ.ಪಂ. ಅಧ್ಯಕ್ಷೆ,ಅಧಿಕಾರ ನಡೆಸೋರು ಪತಿರಾಯ!
ಕಳಲುಗ್ಗಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೌಮ್ಯ ಅವರು ಕೇವಲ ಹೆಸರಿಗೆ, ನೆಪಕ್ಕೆ ಮಾತ್ರ ಅಧಿಕಾರದಲ್ಲಿದ್ದಾರೆ, ಆದರೆ ಪಂಚಾಯತಿಯ ಎಲ್ಲಾ ಕೆಲಸ ಕಾರ್ಯಗಳು
ಅಧಿಕಾರಿಗಳ ದುರಾಡಳಿತ, ಪಂಚಾಯತಿಯ ಅಧಿಸೌಮ್ಕಾಯ ಅವರ ಪತಿ ಅಂಜನಾ ಮೂರ್ತಿ ಅವರು ಪ್ರತಿಯೊಂದರಲ್ಲೂ ಮೂಗೂತೂರಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಸರ್ಕಾರಿ ಕಾರ್ಯಕ್ರಮಗಳು ಆಗಿರಬಹುದು,ಖಾಸಗಿ ಚಟುವಟಿಕೆಯಲ್ಲಿ ಅವರೇ ಮುಂದೆ ಬಂದು ಅಧಿಕಾರ ಚಲಾಯಿಸುತ್ತಿರುವುದು ಸಾಕಷ್ಟು ಅನುಮಾನಕ್ಕೆ ಇದೆ ಮಾಡಿಕೊಡುತ್ತದೆ.
ಕಳಲುಘಟ್ಟ ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರ,ಅಧಿಕಾರ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಈಗಾಗಲೇ ಅಕ್ಟೋಬರ್ 18ರಂದು ಮಾನವಹಕ್ಕುಗಳ ಆಯೋಗಕ್ಕೆ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರು ಅವರಿಗೆ, ನೆಲ ಮಂಗಲ ಗ್ರಾಮಾಂತರ JMFC ಕೋರ್ಟ್ ನಲ್ಲಿ FIR ದಾಖಲಾಗಿದೆ, ಮೊದಲನೇ ಮಾಹಿತಿ ವರದಿ ತಿಳಿಸಿರುವುದರ ಜೊತೆ ದೂರು ಸಹ ನೀಡಲಾಗಿದೆ.
ಪಂಚಾಯತಿಯಲ್ಲಿ 3 ಜನ ಸೇರಿಕೊಂಡು ಅನುದಾನದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡದೆ ಕೋಟ್ಯಂತರ ಅವ್ಯವಹಾರ ನಡೆಸಿರುವುದು ದಾಖಲೆಗಳಿಂದ ಬಹಿರಂಗವಾಗಿದೆ 3 ಜನರ ವಿರುದ್ಧ ಕೂಡಲೇ ಸಂಬಂಧಪಟ್ಟ ಇಲಾಖೆಗೆ, ಅಧಿಕಾರಿಗಳಿಗೆ ದೋರಿ ನೀಡಿದ್ದು ಇಲ್ಲಿಯತನಕ ಯಾವುದೇ ಕ್ರಮ ಕೈಗೊಂಡಿಲ್ಲ ದಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಪತ್ರಿಕಾಗೋಷ್ಟಿಯಲ್ಲಿ ಗ್ರಾಮ ಪಂಚಾಯತಿಯ ಮೊದಲ, ಎರಡನೇ ಹಾಗು ಅಧ್ಯಕ್ಷರು, ಹಾಗು 3 ಭಾರಿಯ ಉಪಾಧ್ಯಕ್ಷರಾದ ಗಿರೀಶ್ , ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು.