ಬೆಂಗಳೂರು: ನವೆಂಬರ್ 9ರಂದು ಪ್ರೊ ಸಾ.ಕೃ ರಾಮಚಂದ್ರರಾವ್ ಬೌದ್ಧ ಸಾಹಿತ್ಯ ಕೃತಿಗಳು ವಿಚಾರ ಸಂಕಿರಣವನ್ನು ಬೆಂಗಳೂರಿನ ನರಸಿಂಹರಾಜ ಕಾಲೋನಿಯಲ್ಲಿರುವ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಆಯೋಜನೆ ಮಾಡಲಾಗಿದೆ.
ಆಯೋಜನೆ :ಪಾಲಿ ಇನ್ಸ್ಟಿಟ್ಯೂಟ್, ಕಲಬುರ್ಗಿ, ಬಿಎಂ ಶ್ರೀ ಪ್ರತಿಷ್ಠಾನ ಬೆಂಗಳೂರು,ಪ್ರೊ ಸಾ ಕೃ ರಾಮಚಂದ್ರರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಆ ಯೋಜನೆ ಮಾಡಲಾಗಿದೆ.
ಈ ನಾಡು ಕಂಡ ಶ್ರೇಷ್ಠ ವಿದ್ವನ್ಮಣಿ ಗಳಾಗಿದ್ದ ಪ್ರೊ ಸಾ.ಕೃ ರಾಮಚಂದ್ರರಾವ್ ಶತಮಾನೋತ್ಸವ ವರ್ಷ ಇದಾಗಿದ್ದು ಇದೆ ನವಂಬರ್ ಒಂಬತ್ತರಂದು ಬೆಳಿಗ್ಗೆ 10 ಗಂಟೆಗೆ ನಗರದ ಎನ್ ಆರ್ ಕಾಲೋನಿಯ ಬಿಎಂ ಶ್ರೀ ಪ್ರತಿಷ್ಠಾನದ ಸಭಾಂಗಣದಲ್ಲಿ ಪ್ರೊ.ಸಾಕೃ. ರಾಮಚಂದ್ರರಾವ್ ಬೌದ್ಧ ಸಾಹಿತ್ಯ ಕೃತಿಗಳು ಸಂಕಿರಣವನ್ನು ಆಯೋಜಿಸಲಾಗಿದೆ.
ಕಲ್ಬುರ್ಗಿಯ ಪಾಲಿ ಇನ್ಸ್ಟಿಟ್ಯೂಟ್ ಬಿ ಎಂ ಶ್ರೀ ಪ್ರತಿಷ್ಠಾನ ಮತ್ತು ಪ್ರೊ.ಸಾ ಕೃ.ರಾಮಚಂದ್ರ ಮೆಮೋರಿಯಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಈ ವಿಚಾರ ಸಂಕಿರಣ ನಡೆಯಲಿದ್ದು ಬಹುಶತ ವಿದ್ವಾಂಸರಾದ ಶತಾವಧಾನಿ ಡಾ. ಆರ್ ಗಣೇಶ್ ಉದ್ಘಾಟಿಸಲಿದ್ದಾರೆ.
ಬಿ ಎಂ ಶ್ರೀ ಪ್ರತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಪಾಲಿ ಇನ್ಸ್ಟಿಟ್ಯೂಟ್ ಅಧ್ಯಕ್ಷ ರಾಹುಲ್ ಎಂ ಖರ್ಗೆ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ನಂತರ ನಡೆಯುವ ಗೋಷ್ಠಿಯಲ್ಲಿ ಬೌದ್ಧ ವಿದ್ವಾಂಸ ಮೊಳಕಾಲ್ಮೂರು ಶ್ರೀನಿವಾಸ ಮೂರ್ತಿ ಪ್ರೋ ಸಾ ಕೃ ರವರ ಟಿಬೆಟ್ ಬುದ್ಧಿಸಂ ಸಂಬಂಧಿಸಿದೆ ಆಂಗ್ಲ ಕೃತಿಗಳ ಕುರಿತು, ಸಂಸ್ಕೃತಿ ಚಿಂತಕ ಡಾ ಜಿ ಬಿ ಹರೀಶ್ ರವರು ಸಾಕೃ ರವರ ಬೌದ್ಧ ತತ್ವ ಜ್ಞಾನಕ್ಕೆ ಸಂಬಂಧಿಸಿದೆ ಕೃತಿಗಳ ಬಗ್ಗೆ ಮತ್ತು ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನ ಕನ್ನಡ ಸಹ ಪ್ರಾಧ್ಯಾಪಕಿ ಡಾ ಪೂರ್ಣಿಮಾ ಎಸ್ ರವರು ಪ್ರೊ.ಸಾ ಕೃ ಬೌದ್ಧ ಸಾಹಿತ್ಯಕ್ಕೆ ಸಂಬಂಧಿಸಿದ ಕನ್ನಡ ಕೃತಿಗಳ ಕುರಿತು ವಿಚಾರ ಮಂಡಿಸುವರು ಎಂದು ಪಾಲಿ ಇನ್ಸ್ಟಿಟ್ಯೂಟ್ ನ ಗೌರವ ನಿರ್ದೇಶಕ ಪ್ರೊ ಮಲ್ಲೇಪುರಂ ಜಿ ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.